23 ವರ್ಷಗಳ ನಂತರ ಕುಟುಂಬಸ್ಥರಿಗೆ ಸಿಕ್ಕಿದ ಮಾನಸಿಕ ಅಸ್ವಸ್ಥ ಮಹಿಳೆ!

ಕೆಲವು ದಿನಗಳ ಹಿಂದೆ ಹಾಸನದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರವಿನಂದನ್ ಬಿಎಂ ಅವರನ್ನು ವೃದ್ಧಾಶ್ರಮದಲ್ಲಿ ಭೇಟಿಯಾದಾಗ ಆಕೆಯ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದೆ.
Saakamma was found in an old age home in Mandi
ಮಂಡಿಯ ವೃದ್ಧಾಶ್ರಮದಲ್ಲಿ ಸಿಕ್ಕಿದ ಮಹಿಳೆ ಸಾಕಮ್ಮ
Updated on

ಬೆಂಗಳೂರು: 23 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 50ರ ಹರೆಯದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರಿಗೆ ಮತ್ತೆ ಕುಟುಂಬದವರ ಜೊತೆ ಸಂಗಮವಾಗುವ ಸೌಭಾಗ್ಯ ಸಿಕ್ಕಿದೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವೃದ್ಧಾಶ್ರಮದಲ್ಲಿ ಸಾಕಮ್ಮ ಪತ್ತೆಯಾಗಿದ್ದಾರೆ. ಇವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಗ್ರಾಮದವರು.

ಕೆಲವು ದಿನಗಳ ಹಿಂದೆ ಹಾಸನದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರವಿನಂದನ್ ಬಿಎಂ ಅವರನ್ನು ವೃದ್ಧಾಶ್ರಮದಲ್ಲಿ ಭೇಟಿಯಾದಾಗ ಆಕೆಯ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಬೆಂಗಳೂರಿನಲ್ಲಿ ತನ್ನ ಸ್ನೇಹಿತ ವಿಜಯ್ ಕುಮಾರ್ ಅವರೊಂದಿಗೆ ಸಾಕಮ್ಮನ ವೀಡಿಯೊವನ್ನು ಹಂಚಿಕೊಂಡ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಸಮಾಜ ಕಲ್ಯಾಣ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳನ್ನು ನಡೆಸುವ ವಿಜಯ್ ಕುಮಾರ್, ಟಿಎನ್‌ಐಇ ಜೊತಗೆ ಮಾತನಾಡಿ, ವೃದ್ಧಾಶ್ರಮವನ್ನು ನಡೆಸುವವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಕೆಲಸ ಮಾಡುವ ರವಿನಂದನ್‌ಗೆ ತಿಳಿಸಿದ್ದರು. ಒಬ್ಬ ಮಹಿಳೆ ಇದ್ದು, ಅವರು ಕನ್ನಡ ಮಾತ್ರ ಮಾತನಾಡುತ್ತಾರೆ ಎಂದರು. ರವಿನಂದನ್ ಸಾಕಮ್ಮ ಅವರನ್ನು ಭೇಟಿ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದು, ಅದರಲ್ಲಿ ತಾನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ (ಈಗ ವಿಜಯನಗರ ಜಿಲ್ಲೆ) ಡಣನಾಯಕನಕೆರೆ ಗ್ರಾಮದವಳು ಎಂದು ಹೇಳಿಕೊಂಡಿದ್ದರು.

Saakamma was found in an old age home in Mandi
ಮಾನಸಿಕ ಆರೋಗ್ಯಕ್ಕೆ ಒತ್ತು : ಜನವರಿಯಿಂದ ಆರೋಗ್ಯ ಇಲಾಖೆ ವತಿಯಿಂದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ

ತನ್ನ ಊರಿನಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ನಾಪತ್ತೆಯಾದ ಬಳಿಕ ಸಾಕಮ್ಮ ಭಿಕ್ಷೆ ಬೇಡುತ್ತಾ ವಿವಿಧ ಪಟ್ಟಣ, ನಗರಗಳ ಬೀದಿಗಳಲ್ಲಿ ಬದುಕಿ ಕೊನೆಗೆ ಎರಡು ವರ್ಷಗಳ ಹಿಂದೆ ರೈಲಿನಲ್ಲಿ ಹಿಮಾಚಲ ಪ್ರದೇಶ ತಲುಪಿದ್ದರು.

ಸಾಕಮ್ಮ ತನ್ನ ಸಹೋದರ, ಕುಟುಂಬದ ಹೆಸರು ಮತ್ತು ವಾಸವಿರುವ ವಿಳಾಸ ಹೇಳಿಕೊಂಡರು. ರವಿನಂದನ್ ಅವರು ವೀಡಿಯೊವನ್ನು ಕುಮಾರ್‌ಗೆ ಕಳುಹಿಸಿದರು, ಅವರು ಆರಂಭದಲ್ಲಿ ಅದನ್ನು ತಮ್ಮ ವಿದ್ಯಾರ್ಥಿಗಳು ಮತ್ತು ಅವರ ವಾಟ್ಸಾಪ್ ಗುಂಪುಗಳೊಂದಿಗೆ ಹಂಚಿಕೊಂಡರು, ಬಳ್ಳಾರಿಯಿಂದ ಯಾರಾದರೂ ಅವರನ್ನು ಗುರುತಿಸುತ್ತಾರೆಯೇ ಎಂದು ನೋಡಿದರು.

ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕುಮಾರ್ ಅವರು ಡಿಸೆಂಬರ್ 13 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಮತ್ತು ಇಲಾಖೆಯ ಸಹಾಯವಾಣಿ ಸಂಖ್ಯೆಯನ್ನು ಟ್ಯಾಗ್ ಮಾಡಿದ್ದರು.

ಮಣಿವಣ್ಣನ್ ಅವರು ಶೀಘ್ರವೇ ಪ್ರತಿಕ್ರಿಯಿಸಿದರು. ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯಗೊಳಿಸಿದರು. ಸ್ಥಳೀಯ ಅಧಿಕಾರಿಗಳು ಸಾಕಮ್ಮ ಅವರ ಕುಟುಂಬ ಸದಸ್ಯರನ್ನು ಪತ್ತೆಹಚ್ಚಿದ ನಂತರ, ಮೂವರನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆತರಲಾಯಿತು.

ನಿನ್ನೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಾಕಮ್ಮ ಅವರನ್ನು ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕುಮಾರ್ ಅವರನ್ನು ಶ್ಲಾಘಿಸಿದರು.

ಸಾಕಮ್ಮ ಅವರ ಮೂರನೇ ಮಗ, ದಿನಗೂಲಿ ನೌಕರ ವಿಕ್ರಂ ತಾಯಿ ಸಿಕ್ಕಿದ ಬಗ್ಗೆ ಖುಷಿಪಟ್ಟಿದ್ದಾರೆ. 23 ವರ್ಷಗಳ ನಂತರ ತಾಯಿಯನ್ನು ನೋಡುತ್ತಿರುವುದು ತುಂಬಾ ಸಂತೋಷವಾಗಿದೆ. ಕೌಟುಂಬಿಕ ಕಾರ್ಯಕ್ರಮದ ವೇಳೆ ಆಕೆಯನ್ನು ಕಳೆದುಕೊಂಡೆವು. ಅವಳಿಗಾಗಿ ನಾವು ಒಂದು ವಾರದ ಹುಡುಕಾಟವು ವ್ಯರ್ಥವಾದ ನಂತರ, ನನ್ನ ತಂದೆ ಪೊಲೀಸರಿಗೆ ದೂರು ನೀಡಿದರು. ನಂತರ ನಾವು ಭರವಸೆ ಕಳೆದುಕೊಂಡೆವು. ಎರಡು ವರ್ಷಗಳ ಹಿಂದೆ, ಅವಳು ಇನ್ನಿಲ್ಲ ಎಂದು ನಂಬಿ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ಕೆಲವು ದಿನಗಳ ಹಿಂದೆ ಬಳ್ಳಾರಿಯ ಅಧಿಕಾರಿಗಳು ನನ್ನ ಚಿಕ್ಕಮ್ಮನಿಗೆ ವೀಡಿಯೊ ತೋರಿಸಿದಾಗ ಗುರುತಿಸಿದರು. ಅಮ್ಮ ನೆನಪಿನ ಶಕ್ತಿ ಕಳೆದುಕೊಂಡಿದ್ದರೂ, ನಮ್ಮನ್ನು ಗುರುತು ಹಿಡಿಯುವ ಸ್ಥಿತಿಯಲ್ಲಿಲ್ಲದಿದ್ದರೂ ಕೂಡ ನಮಗೆ ಮರಳಿ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ಇನ್ನು ಮುಂದೆ ಜೋಪಾನವಾಗಿ ನೋಡಿಕೊಳ್ಳುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com