
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ತನ್ನ ಬಹುತೇಕ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿಯನ್ನು ಪರಿಚಯಿಸಿದೆ. ಆದಾಗ್ಯೂ, ಕಂಡಕ್ಟರ್‌ಗಳು QR-ಕೋಡ್ ಪಾವತಿ ಆಯ್ಕೆಯನ್ನು ಪ್ರೋತ್ಸಾಹಿಸದಿರುವುದರಿಂದ ಈ ವ್ಯವಸ್ಥೆಯು ಬಳಕೆಯಾಗದೆ ಉಳಿದಿದೆ.
ಅನೇಕ ಬಸ್‌ಗಳು ಈಗ ತಮ್ಮ ಸೈಡ್ ಪ್ಯಾನೆಲ್‌ಗಳಲ್ಲಿ ಕ್ಯೂಆರ್ ಕೋಡ್ ಪೋಸ್ಟರ್‌ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುತ್ತದೆ. ಪಾವತಿ ಪೂರ್ಣಗೊಂಡ ನಂತರ, ಕಂಡಕ್ಟರ್‌ಗಳು ಟಿಕೆಟ್‌ಗಳನ್ನು ನೀಡುತ್ತಾರೆ. ಆದಾಗ್ಯೂ, ಯುಪಿಐ ಪಾವತಿ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ.
"ಬೆಂಗಳೂರಿನಂತಹ ನಗರದಲ್ಲಿ, ಟೀ ಸ್ಟಾಲ್‌ಗಳಿಂದ ಹಿಡಿದು ಅತ್ಯಾಧುನಿಕ ಮಳಿಗೆಗಳವರೆಗೆ ಎಲ್ಲೆಡೆ ಯುಪಿಐ ಬಳಕೆ ರೂಢಿಯಲ್ಲಿದೆ. ಆದರೆ ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್‌ಗಳು ಅದನ್ನು ಇನ್ನೂ ಸಂಪೂರ್ಣವಾಗಿ ಸ್ವೀಕರಿಸದಿರುವುದು ನಿರಾಶೆ ಮೂಡಿಸಿದೆ" ಎಂದು ಬಿಎಂಟಿಸಿ ಪ್ರಯಾಣಿಕರಾದ ಅದಿತಿ ರೆಡ್ಡಿ ಹೇಳಿದ್ದಾರೆ.
BMTC "ನಾವು ತಂತ್ರಜ್ಞಾನ-ಚಾಲಿತ ನಗರದಲ್ಲಿ ವಾಸಿಸುತ್ತಿದ್ದೇವೆ. ಆದರೆ ಸಾರ್ವಜನಿಕ ಸಾರಿಗೆ ವಿಚಾರಕ್ಕೆ ಬಂದಾಗ, ನಾವು ಇನ್ನೂ ಹಿಂದೆ ಇದ್ದೇವೆ. ಡಿಜಿಟಲ್ ಪಾವತಿಗಳು ಅಮೂಲ್ಯ ಸಮಯವನ್ನು ಉಳಿಸುವುದು ಮಾತ್ರವಲ್ಲದೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ. ವಿಶೇಷವಾಗಿ ಬಸ್‌ಗಳು ಕಿಕ್ಕಿರಿದು ತುಂಬಿರುವ ಸಮಯದಲ್ಲಿ ಚಿಲ್ಲರೆ ಸಮಸ್ಯೆಯನ್ನು ತಪ್ಪಿಸುತ್ತದೆ ಎಂದಿದ್ದಾರೆ.
ಯುಪಿಐ ಪಾವತಿಗಳ ಕುರಿತು ಮಾತನಾಡಿದ ಬಿಎಂಟಿಸಿ ಬಸ್ ಕಂಡಕ್ಟರ್‌ಗಳು, ವಿವಿಧ ಕಾರಣಗಳಿಗಾಗಿ ಕ್ಯೂಆರ್-ಕೋಡ್ ಆಧಾರಿತ ಯುಪಿಐ ಪಾವತಿಗಳನ್ನು ಸ್ವೀಕರಿಸುವುದು ಕಷ್ಟ ಎಂದಿದ್ದಾರೆ. ಕೆಲವೆಡೆ ಇಂಟರ್‌ನೆಟ್ ಸಂಪರ್ಕದ ಕೊರತೆಯಿಂದಾಗಿ ಹಣ ಪಾವತಿಗೆ ತಡೆ ಉಂಟಾಗಿದ್ದು, ಪಾವತಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
Advertisement