ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮನವಿ; ಪ್ರಸ್ತಾವನೆ ಸಂಬಂಧ ಸರ್ಕಾರದ ಜೊತೆ ಚರ್ಚೆ: ರಾಮಲಿಂಗಾ ರೆಡ್ಡಿ

2014 ರಲ್ಲಿ "BMTC ದರ ಪರಿಷ್ಕರಿಸಲಾಯಿತು. 2020ರಲ್ಲಿ KSRTC, KKRTC, ಮತ್ತು NWKRTC ಯ ದರಗಳನ್ನು ಪರಿಷ್ಕರಿಸಲಾಗಿತ್ತು.
File image
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ನಾಲ್ಕು ಬಸ್ ನಿಗಮಗಳು ಶೇ.15ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ತಿಳಿಸಿದರು.

ನಿಗಮಗಳು ಸುಮಾರು ಆರು ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಪ್ರಸ್ತಾವನೆ ಕುರಿತು ಸರ್ಕಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

ಏತನ್ಮಧ್ಯೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ), ಮತ್ತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಅಧಿಕಾರಿಗಳು ದರ ಪರಿಷ್ಕರಣೆ ಅಗತ್ಯವನ್ನು ಒತ್ತಿ ಹೇಳಿದರು. ನಿಗಮಗಳಿಂದ ಉಂಟಾದ ನಷ್ಟವನ್ನು ಸಮತೋಲನಗೊಳಿಸಲು ಮೊದಲನೆಯ ಆದ್ಯತೆಯಾಗಿದೆ ಎಂದಿದ್ದಾರೆ.

ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಡಿಸೆಂಬರ್ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಆರ್‌ಟಿಸಿ ಯೂನಿಯನ್‌ಗಳ ಸದಸ್ಯರು ಬೆದರಿಕೆ ಹಾಕಿದ್ದರು. ‘ನಾಲ್ಕು ನಿಗಮಗಳಲ್ಲಿ ಹಣದ ಕೊರತೆಯೂ ಬಾಕಿ ವೇತನ ಸಂಗ್ರಹಕ್ಕೆ ಒಂದು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014 ರಲ್ಲಿ "BMTC ದರ ಪರಿಷ್ಕರಿಸಲಾಯಿತು. 2020ರಲ್ಲಿ KSRTC, KKRTC, ಮತ್ತು NWKRTC ಯ ದರಗಳನ್ನು ಪರಿಷ್ಕರಿಸಲಾಗಿತ್ತು. ಅಂದಿನಿಂದ ಸರ್ಕಾರವು ದರಗಳನ್ನು ಹೆಚ್ಚಿಸಿಲ್ಲ" ಎಂದು ಬಸ್ ನಿಗಮಗಳ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

File image
KSRTC ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಇಂಧನ, ಬಿಡಿ ಭಾಗಗಳು ಮತ್ತು ಟೈರ್‌ಗಳ ಬೆಲೆಗಳು ಹೆಚ್ಚಾಗಿದ್ದು, ಹೆಚ್ಚಿನ ಆದಾಯವು ಉದ್ಯೋಗಿಗಳ ಸಂಬಳಕ್ಕೆ ಹೋಗುತ್ತದೆ ಎಂದು ಅವರು ಹೇಳಿದರು. "ಉತ್ಪಾದಿತ ಆದಾಯದ ಶೇ.45ಕ್ಕಿಂತ ಹೆಚ್ಚು ಡೀಸೆಲ್‌ಗೆ ಖರ್ಚು ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಕಳೆದ ಬಾರಿ ಬಸ್‌ ದರ ಪರಿಷ್ಕರಣೆಯಾದಾಗ ಡೀಸೆಲ್‌ ದರ ಲೀಟರ್‌ಗೆ 61 ರೂ. ಇತ್ತು. ಆದರೆ ಡೀಸೆಲ್ ಬೆಲೆ ಈಗ ಲೀಟರ್‌ಗೆ 90 ರೂ. ಆಗಿದೆ ಆದರೆ ಪ್ರಯಾಣ ದರಗಳು ಹಾಗೆಯೇ ಉಳಿದಿವೆ.

2020 ರಲ್ಲಿ ಬಸ್ ದರವನ್ನು ಪರಿಷ್ಕರಿಸಿದಾಗ, ಕೆಎಸ್ಆರ್ಟಿಸಿ ಇಂಧನಕ್ಕಾಗಿ ದಿನಕ್ಕೆ ಸುಮಾರು 3 ಕೋಟಿ ರೂ. ಖರ್ಚು ಮಾಡುತ್ತಿತ್ತು. ಆದರೆ, ಇಂಧನ ಬೆಲೆ ಏರಿಕೆಯಿಂದಾಗಿ ನಿಗಮಗಳು ಈಗ ದಿನಕ್ಕೆ 5 ಕೋಟಿ ರೂ.ವ್ಯಯಿಸುತ್ತಿವೆ. ನಾಲ್ಕೂ ಬಸ್ ನಿಗಮಗಳ ಉದ್ದೇಶ ಜನರ ಸೇವೆಯೇ ಹೊರತು ಹೊರೆಯಾಗಬಾರದು. ಆದಾಗ್ಯೂ, ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚದಿಂದಾಗಿ ಅವರು ಪ್ರಯಾಣ ದರ ಏರಿಕೆಗೆ ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

ಸರ್ಕಾರವೂ ಪ್ರಯಾಣ ದರ ಏರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ನಿಗಮಗಳನ್ನು ಉಳಿಸಿಕೊಳ್ಳಲು ಈ ಬಾರಿ ಪರಿಷ್ಕರಣೆ ಮಾಡಲಾಗುವುದು ಎಂದರು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿರುವ ಆರ್‌ಟಿಸಿ ಯೂನಿಯನ್‌ಗಳು ಕೂಡ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಒತ್ತಾಯಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com