
ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ನಿಕಿತಾ ಸಿಂಘಾನಿಯಾ ಜಾಮೀನು ಪಡೆಯಲು ದಾಳವಾಗಿ ತಮ್ಮ ಮಗುವನ್ನು ಬಳಸಿಕೊಳ್ಳಲು ಬಿಡಬಾರದು ಎಂದು ವಕೀಲ ಆಕಾಶ್ ಜಿಂದಾಲ್ ಹೇಳಿದ್ದಾರೆ.
ಆಟೋಮೊಬೈಲ್ ಕಂಪನಿ ಉದ್ಯೋಗಿಯಾಗಿದ್ದ ಅತುಲ್ ಸುಭಾಷ್ ವಿಚ್ಛೇದನ ಇತ್ಯರ್ಥಕ್ಕೆ ಪತ್ನಿ 3 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದರು.
ಆರೋಪಿ ಅತುಲ್ ಸುಭಾಷ್ ಪತ್ನಿಯ ಜಾಮೀನು ಅರ್ಜಿಯ ವಿಚಾರಣೆ ಜನವರಿ 4 ರಂದು ಬೆಂಗಳೂರು ನ್ಯಾಯಾಲಯದಲ್ಲಿ ನಡೆಯಲಿದೆ. ಆರೋಪಿ ನಿಕಿತಾ ಸಿಂಘಾನಿಯಾ ಅವರ ಜಾಮೀನು ಅರ್ಜಿಯನ್ನು ಸೋಮವಾರ ದಾಖಲಿಸಿಕೊಂಡಿದ್ದು, ಆಕೆಯ ಮತ್ತು ಇತರ ಆರೋಪಿಗಳ ಪರ ವಕೀಲರು ಪ್ರಕರಣದ ಆರೋಪಿಗಳಿಗೆ ಹೇಗೆ ಮತ್ತು ಏಕೆ ಜಾಮೀನು ನೀಡಬಾರದು ಎಂದು ವಾದಿಸಿದರು.
ಅತುಲ್ ತಮ್ಮ ಆತ್ಮಹತ್ಯೆ ವೀಡಿಯೊದಲ್ಲಿ, ಮಗುವನ್ನು ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಸಾಧನವಾಗಿ ಬಳಸಬಾರದು ಎಂದು ಉಲ್ಲೇಖಿಸಿದ್ದಾರೆ. ಮತ್ತು ಈಗ ಅದನ್ನೇ ಮಾಡಲಾಗುತ್ತಿದೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ನಾವು ಆಕೆಯನ್ನು ಕಸ್ಟಡಿಗೆ ನೀಡಬೇಕೆಂದು ಕೋರುತ್ತಿದ್ದೇವೆ ಎಂದು ವಕೀಲ ಜಿಂದಾಲ್ ಹೇಳಿದ್ದಾರೆ.
ತಾಯಿ ಮತ್ತು ಇಡೀ ಕುಟುಂಬವನ್ನು ಬಂಧಿಸಿರುವ ಕಾರಣ, ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ತಲೆಮರೆಸಿಕೊಂಡಿರುವಾಗ ಆಕೆಯನ್ನು ಬಂಧಿಸಲಾಗಿತ್ತು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಆಕೆ ಮತ್ತೆ ಮಗುವಿನೊಂದಿಗೆ ಪರಾರಿಯಾಗಲು ಪ್ರಯತ್ನಿಸಬಹುದು. ಆದ್ದರಿಂದ, ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಮತ್ತು ಜಾಮೀನು ಪಡೆಯಲು ಮಗುವನ್ನು ಸಾಧನವಾಗಿ ತೆಗೆದುಕೊಳ್ಳಲು ಆಕೆಗೆ ಅವಕಾಶ ನೀಡಬಾರದು’ ಎಂದು ಜಿಂದಾಲ್ ಹೇಳಿದ್ದಾರೆ.
ನನ್ನ ಮೊಮ್ಮಗ ಆಕೆಗೆ ಎಟಿಎಂ ಆಗಿತ್ತು. ಆತನನ್ನು ನೋಡಿಕೊಳ್ಳುವ ನೆಪದಲ್ಲಿ ಹಣ ಪಡೆದಿದ್ದಾಳೆ. 20,000 ರಿಂದ 40,000 ರೂ.ಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದಳು. ನಂತರ 80,000 ರೂ.ಗೆ ಮೇಲ್ಮನವಿ ಸಲ್ಲಿಸಿದಳು. ಇದಾದ ನಂತರವೂ ಆಕೆ ಹಣಕ್ಕಾಗಿ ಹೆಚ್ಚಿನ ಬೇಡಿಕೆಯನ್ನು ಮುಂದಿಟ್ಟಳು. ಹೀಗಾಗಿ, ಮಗು ನಮ್ಮ ಬಳಿ ಸುರಕ್ಷಿತವಾಗಿರುತ್ತದೆ,ಆತನ ಆತನ ಪಾಲನೆಗಾಗಿ ನಾವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದೇವೆ ಎಂದು ಅತುಲ್ ಪೋಷಕರು ತಿಳಿಸಿದ್ದಾರೆ.
Advertisement