ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಮೊದಲ ದರ್ಜೆ ಬೋಗಿಯಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯ ಲಗ್ಗೇಜು, ದಾಖಲೆಗಳ ಕಳವು!

ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಕೊರತೆಗೆ ಈ ಘಟನೆ ಕೈಗನ್ನಡಿ ಎನ್ನಬಹುದು. ಅಪರಿಚಿತ ವ್ಯಕ್ತಿಯೊಬ್ಬರು ಇತ್ತೀಚೆಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರು ವಿಭಾಗದ ಮಹಿಳಾ ಉನ್ನತ ರೈಲ್ವೆ ಅಧಿಕಾರಿ ಮತ್ತು ಅವರ ಸಹ ಪ್ರಯಾಣಿಕರ ಲಗೇಜ್ ನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಕೊರತೆಗೆ ಈ ಘಟನೆ ಕೈಗನ್ನಡಿ ಎನ್ನಬಹುದು. ಅಪರಿಚಿತ ವ್ಯಕ್ತಿಯೊಬ್ಬರು ಇತ್ತೀಚೆಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರು ವಿಭಾಗದ ಮಹಿಳಾ ಉನ್ನತ ರೈಲ್ವೆ ಅಧಿಕಾರಿ ಮತ್ತು ಅವರ ಸಹ ಪ್ರಯಾಣಿಕರ ಲಗೇಜ್ ನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳಿಗೇ ಈ ಪರಿಸ್ಥಿತಿ ಉಂಟಾದರೆ ಸಾಮಾನ್ಯ ಪ್ರಯಾಣಿಕರ ಪರಿಸ್ಥಿತಿಯೇನು ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.

ಎಸಿ ಫಸ್ಟ್ ಕ್ಲಾಸ್ ಕಂಪಾರ್ಟ್‌ಮೆಂಟ್‌ನ ಕ್ಯಾಬಿನ್‌ನಲ್ಲಿ ಮಹಿಳಾ ಅಧಿಕಾರಿ ಪ್ರಯಾಣಿಸುತ್ತಿದ್ದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ADRM) ಕುಸುಮಾ ಹರಿಪ್ರಸಾದ್‌ ಅವರ ಕದ್ದು ಹೋದ ಲಗೇಜ್‌ನಲ್ಲಿ ಇಲಾಖೆಯ ಕಡತಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜನವರಿ 24 ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈಲಿಗೆ ಹತ್ತಿದ್ದರು. ಅವರ ಸೀಟುಗಳು ಹೆಚ್ 1 ಕೋಚ್‌ನಲ್ಲಿ ನಾಲ್ಕು ಬರ್ತ್‌ಗಳಿರುವ ಕ್ಯಾಬಿನ್‌ನಲ್ಲಿದ್ದವು. ಮರುದಿನ ಬೆಳಗ್ಗೆ 5.20ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಲು ಮುಂದಾದಾಗ ತಮ್ಮ ಸಾಮಾನು ನಾಪತ್ತೆಯಾಗಿರುವುದು ಗೊತ್ತಾಗಿದೆ. ಹುಬ್ಬಳ್ಳಿಯ ಸರ್ಕಾರಿ ರೈಲ್ವೆ ಪೊಲೀಸ್ (GRP) ಠಾಣೆಯಲ್ಲಿ ಐಪಿಸಿ ಸೆಕ್ಷನ್ 379 (ಕಳ್ಳತನಕ್ಕೆ ಶಿಕ್ಷೆ) ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿ ಜೊತೆಗೆ ಮಾತನಾಡಿದ ಜಿಆರ್ ಪಿ ಮೂಲ, ಇಲ್ಲಿ ವಿಚಿತ್ರವೆಂದರೆ ಆ ಬೋಗಿಯಲ್ಲಿದ್ದ ನಾಲ್ವರು ಪ್ರಯಾಣಿಕರಲ್ಲಿ ಇಬ್ಬರ ವಸ್ತುಗಳನ್ನು ಮಾತ್ರ ಕಳವು ಮಾಡಲಾಗಿದೆ. ರೈಲ್ವೇ ಕಡತಗಳನ್ನು ಒಳಗೊಂಡ ಎಡಿಎಂಆರ್ ನ ಅಲೆನ್ ಸೋಲಿ ಟ್ರಾಲಿ ಸೂಟ್‌ಕೇಸ್ ನ್ನು ಕಳವು ಮಾಡಲಾಗಿದೆ. ಇದಲ್ಲದೆ, ಅಧಿಕಾರಿಯ ಹೈಡಿಸೈನ್ ಕೈಚೀಲ ಮತ್ತು 4 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳನ್ನು ಸಹ ಕಳವು ಮಾಡಲಾಗಿದೆ.

ರೈಲ್ವೆಯ ಸೌಂಡ್ ಗುತ್ತಿಗೆದಾರ ರಾಜೇಶ್ ಕುಮಾರ್ ಮತ್ತೊಬ್ಬರ ಸಾಮಾನುಗಳು ಕಳ್ಳತನವಾಗಿದೆ. ಸುಮಾರು 60,000 ಮೌಲ್ಯದ ಲ್ಯಾಪ್‌ಟಾಪ್ ಹೊಂದಿದ್ದ ತನ್ನ ಲೂಯಿ ವಿಟಾನ್ ಬ್ಯಾಗ್ ನ್ನು ಕಳೆದುಕೊಂಡಿರುವುದಾಗಿ ಹೇಳಿದರು. ರೈಲ್ವೇ ಕನ್‌ಸ್ಟ್ರಕ್ಷನ್ ಅಧಿಕಾರಿಯೊಬ್ಬರ ಪತ್ನಿ ಲಲಿತಾ ರಾಮಗೋಪಾಲ್ ಕೋಚ್‌ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ನಾಪತ್ತೆಯಾಗಿ ನಂತರ ರೈಲಿನ ವಾಶ್‌ರೂಮ್‌ನಲ್ಲಿ ಪತ್ತೆಯಾಗಿದೆ. ಅವರ ಚಾರ್ಜರ್ ಮಾತ್ರ ಕದ್ದಿದೆ ಆದರೆ ದೂರು ನೀಡಲಿಲ್ಲ ಎಂದರು.  

ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಎಸ್‌ಡಬ್ಲ್ಯೂಆರ್, ಮಂಜುನಾಥ್ ಪ್ರಸಾದ್, “ಅಪರಾಧಿ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ವ್ಯಕ್ತಿಯನ್ನು ಪತ್ತೆ ಹಚ್ಚುವ ನಿರೀಕ್ಷೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com