ಅಕ್ರಮವಾಗಿ ಬಿಡಿಎ ನಿವೇಶನ ಖರೀದಿಸುವವರಿಗೆ ಸರ್ಕಾರದಿಂದ ಶುಲ್ಕ ನಿಗದಿ

ಬಿಡಿಎ ನಿವೇಶನ ಹಂಚಿಕೆಯಾಗಿರುವವರಿಗೆ ವಿಧಿಸಲಾಗಿರುವ ನಿಬಂಧನೆಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರಿಂದ ಅಕ್ರಮವಾಗಿ ನಿವೇಶನ ಖರೀದಿಸುವವರಿಗೆ  ಸರ್ಕಾರದಿಂದ ಶುಲ್ಕ ನಿಗದಿಯಾಗಿದೆ.
ಬಿಡಿಎ
ಬಿಡಿಎ

ಬೆಂಗಳೂರು: ಬಿಡಿಎ ನಿವೇಶನ ಹಂಚಿಕೆಯಾಗಿರುವವರಿಗೆ ವಿಧಿಸಲಾಗಿರುವ ನಿಬಂಧನೆಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರಿಂದ ಅಕ್ರಮವಾಗಿ ನಿವೇಶನ ಖರೀದಿ-ಮಾರಾಟ ಮಾಡುವವರಿಗೆ ಸರ್ಕಾರದಿಂದ ಶುಲ್ಕ ನಿಗದಿಯಾಗಿದೆ.

ಸರ್ಕಾರದ ನಿರ್ಧಾರದಿಂದ ಸಾವಿರಾರು ಮಂದಿ ಖರೀದಿದಾರರಿಗೆ ಅನುಕೂಲವಾಗಲಿದೆ. ಅಕ್ರಮ ಸಕ್ರಮಕ್ಕಾಗಿ ಸರ್ಕಾರ ಬಿಡಿಎ (ನಿವೇಶನ ಹಂಚಿಕೆ) ನಿಯಮ 1984ರ ತಿದ್ದುಪಡಿಗೆ ಶೀಘ್ರವೇ ಗೆಝೆಟ್ ಅಧಿಸೂಚನೆ ಪ್ರಕಟಿಸಲಿದೆ.

ಬಿಡಿಎ ಆಯುಕ್ತ ಎನ್ ಜಯರಾಮ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, "ಬಿಡಿಎ ನಿವೇಶನದ ಮಾಲಿಕರಿಗೆ ನಿವೇಶನ ಹಂಚಿಕೆಯಾಗಿ ಖರೀದಿ ಮಾಡಿದ ದಿನದಿಂದ 10 ವರ್ಷಗಳವರೆಗೆ ಬೇರೆಯವರಿಗೆ ಮಾರಾಟ ಮಾಡಬಾರದೆಂಬ ನಿಬಂಧನೆ ಇದೆ, ಆದರೆ ಈ ನಿಬಂಧನೆಗಳನ್ನು ಮೀರಿ ಕೆಲವು ಬಿಡಿಎ ಮಾಲಿಕರು ಈ ಹಿಂದೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಬಿಡಿಎ ಮಾಲಿಕರಿಗೆ ನಿವೇಶನ ಹಂಚಿಕೆ ಮಾಡುವಾಗ ಭೋಗ್ಯ-ಮಾರಾಟ ಡೀಡ್ ನ್ನು ನೀಡಲಾಗುತ್ತದೆ. ಆದಾಗ್ಯೂ, ಸೈಟ್‌ನ ಸಂಪೂರ್ಣ ಮಾರಾಟ ಪತ್ರವು ಇನ್ನೂ ಬಿಡಿಎ ಸ್ವಾಧೀನದಲ್ಲಿರುವುದರಿಂದ ಈ ಡೀಡ್ ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ. ಖರೀದಿಸಿದ ಒಂದು ದಶಕದ ನಂತರ ಮಾತ್ರ ಇದನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಖರೀದಿದಾರರು ಸಂಪೂರ್ಣ ಸೇಲ್ ಡೀಡ್ ಪಡೆಯಲು ಬಿಡಿಎಗೆ ಸೈಟ್ ಖರೀದಿಯ ಸಮಯದಲ್ಲಿ ಪ್ರಚಲಿತದಲ್ಲಿರುವ ಮಾರ್ಗದರ್ಶಿ ಮೌಲ್ಯದ 25% ಪಾವತಿಸಬೇಕಾಗುತ್ತದೆ. ಈ ಡಾಕ್ಯುಮೆಂಟ್ ನಿವೇಶನದ ಕ್ರಮಬದ್ಧತೆಯನ್ನು ಖಚಿತಪಡಿಸುತ್ತದೆ.

“ನಿವೇಶನವನ್ನು ಕ್ರಮಬದ್ಧಗೊಳಿಸಲು ಕೋರುವ ಕಡತವು ಸರ್ಕಾರಕ್ಕೆ ಹೋಗುತ್ತದೆ ಮತ್ತು ಮೊತ್ತವನ್ನು ಅಂತಿಮಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ. ಈ ಹೊಸ ನಿಯಮ ಸೈಟ್ ನ್ನು ಸಕ್ರಮಗೊಳಿಸಲು ಪಾವತಿಸಬೇಕಾದ ನಿಜವಾದ ಮೊತ್ತದ ಬಗ್ಗೆ ಖರೀದಿದಾರರಿಗೆ ಸ್ಪಷ್ಟ ಕಲ್ಪನೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ, "ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com