ತನಿಖಾಧಿಕಾರಿ, ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರಮಕ್ಕೆ ಎನ್ಐಎ ವಿಶೇಷ ನ್ಯಾಯಾಲಯ ಮೆಚ್ಚುಗೆ!

ಯಾವುದೇ ಅನುಮಾನಗಳು ಉಳಿಯದಂತೆ ಪ್ರಕರಣವೊಂದನ್ನು ಸಾಬೀತುಪಡಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಅಭಿಯೋಜಕರ ಶ್ರಮಕ್ಕೆ ನ್ಯಾಯಾಲಯಗಳು ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸುವುದು ಅಪರೂಪ. 
ತನಿಖಾಧಿಕಾರಿ ತಿಮ್ಮಯ್ಯ
ತನಿಖಾಧಿಕಾರಿ ತಿಮ್ಮಯ್ಯ

ಬೆಂಗಳೂರು: ಯಾವುದೇ ಅನುಮಾನಗಳು ಉಳಿಯದಂತೆ ಪ್ರಕರಣವೊಂದನ್ನು ಸಾಬೀತುಪಡಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಅಭಿಯೋಜಕರ ಶ್ರಮಕ್ಕೆ ನ್ಯಾಯಾಲಯಗಳು ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸುವುದು ಅಪರೂಪ. 

ಆದರೆ ಎನ್ಐಎ ಪ್ರಕರಣಗಳನ್ನು ನಿರ್ವಹಿಸುವ ಬೆಂಗಳೂರಿನ ವಿಶೇಷ ನ್ಯಾಯಾಲಯವೊಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿರುವ ವಿಶೇಷ ಸಾರ್ವಜನಿಕ ಅಭಿಯೋಜಕರು ಹಾಗೂ ತನಿಖಾಧಿಕಾರಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. 

ನ್ಯಾಯಾಲಯ ಮೆಹ್ದಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ತನಿಖಾಧಿಕಾರಿ ತಮ್ಮಯ್ಯ ಎಂಕೆ ಸಾಕಷ್ಟು ಶ್ರಮ ವಹಿಸಿ ಆರೋಪಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇದಷ್ಟೇ ಅಲ್ಲದೇ ಕೋರ್ಟ್ ಕಲಾಪಗಳಿಗೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ತಮ್ಮಯ್ಯನವರು ಮಾಡಿದ ಪ್ರಯತ್ನಗಳು ಮತ್ತು ಅವರ ಸಮಯಪಾಲನೆಗೆ ಮೆಚ್ಚುಗೆಯ ಅಗತ್ಯವಿದೆ ಎಂದು ನ್ಯಾ. ಸಿಎಂ ಗಾಂಗಾಧರ್ ಹೇಳಿದ್ದಾರೆ. 

2014ರಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ಸಿಸಿಬಿಯ ಅಂದಿನ ಸಹಾಯಕ ಪೊಲೀಸ್ ಕಮಿಷನರ್ ಐಒ ತಮ್ಮಯ್ಯ ಅವರು ವಿಶೇಷ ನ್ಯಾಯಾಲಯಕ್ಕೆ 1.30 ಲಕ್ಷ ಟ್ವೀಟ್‌ಗಳ ಉಲ್ಲೇಖವನ್ನು ಒಳಗೊಂಡ 36,000 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ತೀರ್ಪು ಪ್ರಕಟಗೊಂಡು ಜನವರಿ 2024 ರಲ್ಲಿ ಮೆಹದಿ ಶಿಕ್ಷೆಯನ್ನು ವಿಧಿಸಲಾಗಿದೆ.

ಪ್ರಸ್ತುತ ಹಾಸನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕೆಲಸ ಮಾಡುತ್ತಿರುವ ತಮ್ಮಯ್ಯ ಅವರು ದೃಢೀಕೃತ ಅಂಶಗಳೊಂದಿಗೆ ಡಿಜಿಟಲ್ ಸಾಕ್ಷ್ಯವನ್ನು ಒದಗಿಸಿದ್ದರು. ಒಂದು ದಶಕದ ನಂತರ ಮೆಹದಿಗೆ ಶಿಕ್ಷೆ ಪ್ರಕಟವಾಗಿದೆ.

ಮೆಹದಿ ಟ್ವಿಟರ್ ಅನ್ನು @shamiwitness ಹ್ಯಾಂಡಲ್‌ನೊಂದಿಗೆ ಬಳಸಿದ್ದ. ಇದು ಸಿರಿಯನ್ ಮೂಲದ ವ್ಯಕ್ತಿಯ ಪ್ರತಿಧ್ವನಿಯಾಗಿದ್ದು, ಮೆಹ್ದಿ IP ವಿಳಾಸವನ್ನು ಮರೆಮಾಚಲು TOR ವೆಬ್ ಬ್ರೌಸರ್ ಮತ್ತು 'ಘೋಸ್ಟ್ IP' ನ್ನು ಬಳಸಿದ್ದ. ಆದರೆ ಹೆಚ್ಚಿನ IP ವಿಳಾಸಗಳು ಅವನ ನಿಜವಾದ IP ಆಗಿದ್ದವು, ಆದರೂ ಕೆಲವು IP ವಿಳಾಸಗಳು ಆಫ್ರಿಕಾ ಮತ್ತು ಪೂರ್ವ ಯುರೋಪ್ ನ್ನು ಪ್ರತಿಬಿಂಬಿಸುತ್ತಿತ್ತು.

ಮೆಹದಿ ತನ್ನ ಲ್ಯಾಪ್‌ಟಾಪ್‌ನಿಂದ ಡೇಟಾವನ್ನು ಅಳಿಸಿಹಾಕಿದ್ದ. ಆದರೆ ಟ್ವಿಟರ್ ಖಾತೆಯ ಕುರುಹುಗಳು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪತ್ತೆಯಾಗಿವೆ.

ಅವರನ್ನು ಸಂಪರ್ಕಿಸಿದಾಗ, ವಿಚಾರಣೆ ಪ್ರಾರಂಭವಾದಾಗಿನಿಂದ ಸಂಬಂಧಪಟ್ಟವರ ಎದುರು ದೃಢೀಕೃತ ಸಾಕ್ಷ್ಯಗಳೊಂದಿಗೆ ಪ್ರಕರಣವನ್ನು ಪ್ರಸ್ತುತಪಡಿಸಲು ತುಂಬಾ ಶ್ರಮಪಟ್ಟಿರುವುದಾಗಿ  ತಮ್ಮಯ್ಯ ಹೇಳಿದ್ದಾರೆ. ಆರೋಪಿಯೊಬ್ಬನಿಗೆ ಐಪಿಸಿಯ ಸೆಕ್ಷನ್ 125 ರ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದು ಇದೇ ಮೊದಲ ಬಾರಿಗೆ (ಯಾವುದೇ ಏಷ್ಯಾಟಿಕ್ ಶಕ್ತಿಯ ಸರ್ಕಾರದ ವಿರುದ್ಧ ಮೈತ್ರಿ ಅಥವಾ ಭಾರತ ಸರ್ಕಾರದೊಂದಿಗೆ ಶಾಂತಿಯುತವಾಗಿ ಯುದ್ಧ ಮಾಡುವುದು) ಎಂಬುದನ್ನು ತಿಳಿದುಕೊಳ್ಳಲು ಸಂತೋಷವಾಗಿದೆ ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com