ಮನೆ ಬದಲಿಸುವ ಬಾಡಿಗೆದಾರರು ಹೊಸ ವಿಳಾಸದಲ್ಲೂ 'ಗೃಹ ಜ್ಯೋತಿ' ಯೋಜನೆ ಮುಂದುವರಿಸಬಹುದು!

ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿರುವ ಮತ್ತು ಹೊಸ ವಿಳಾಸಕ್ಕೆ ಬದಲಾಯಿಸುತ್ತಿರುವ ಬಾಡಿಗೆದಾರರು ಇನ್ನು ಮುಂದೆ ತಮ್ಮ ಹೊಸ ನಿವಾಸದಲ್ಲೂ ಯೋಜನೆಯನ್ನು ಮುಂದುವರಿಸಬಹುದು.
ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಲು ಬೆಂಗಳೂರಿನ ಜೆಪಿ ನಗರದಲ್ಲಿರುವ ಬೆಂಗಳೂರುಒನ್ ಕೇಂದ್ರದಲ್ಲಿ ಸೋಮವಾರ ಜನಸಂದಣಿ
ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಲು ಬೆಂಗಳೂರಿನ ಜೆಪಿ ನಗರದಲ್ಲಿರುವ ಬೆಂಗಳೂರುಒನ್ ಕೇಂದ್ರದಲ್ಲಿ ಸೋಮವಾರ ಜನಸಂದಣಿ
Updated on

ಬೆಂಗಳೂರು: ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿರುವ ಮತ್ತು ಹೊಸ ವಿಳಾಸಕ್ಕೆ ಬದಲಾಯಿಸುತ್ತಿರುವ ಬಾಡಿಗೆದಾರರು ಇನ್ನು ಮುಂದೆ ತಮ್ಮ ಹೊಸ ನಿವಾಸದಲ್ಲೂ ಯೋಜನೆಯನ್ನು ಮುಂದುವರಿಸಬಹುದು.

ಗೃಹ ಜ್ಯೋತಿ ಯೋಜನೆಯಿಂದ ಗ್ರಾಹಕರು ತಮ್ಮ ಖಾತೆಗಳನ್ನು ಡಿ-ಲಿಂಕ್ ಮಾಡಲು, ವಿಳಾಸ ಬದಲಾವಣೆ ಮತ್ತು ಶಿಫ್ಟಿಂಗ್‌ ನಂತರ ಮರು ಲಿಂಕ್ ಮಾಡಲು ಅವಕಾಶ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಿದ್ಯುತ್ ಸರಬರಾಜು ನಿಗಮಗಳಿಗೆ (ಎಸ್ಕಾಮ್‌ಗಳು) ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಫೆಬ್ರವರಿ 5 ರಂದು ಸಹಿ ಮಾಡಲಾದ ಆದೇಶವನ್ನು ಇಂಧನ ಇಲಾಖೆಯ ಕೋರಿಕೆಯ ಮೇರೆಗೆ ಹೊರಡಿಸಲಾಗಿದೆ, ಬಾಡಿಗೆದಾರರಾಗಿ ಉಳಿಯುವ ಜನರ ಪ್ರಕರಣಗಳನ್ನು ಉಲ್ಲೇಖಿಸಿ. “ಬೆಂಗಳೂರಿನಲ್ಲಿ ಅಥವಾ ರಾಜ್ಯದಾದ್ಯಂತ ಇತರ ಜಿಲ್ಲೆಗಳು ಮತ್ತು ನಗರಗಳಲ್ಲಿ ಬಾಡಿಗೆದಾರರಾಗಿ ಉಳಿದುಕೊಂಡಿರುವವರು ಅನೇಕರಿದ್ದಾರೆ. ಯೋಜನೆಯ ಲಾಭ ಪಡೆಯಲು ಅವರು ಆಧಾರ್ ಕಾರ್ಡ್ ವಿವರಗಳು ಮತ್ತು RR ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು.

ಯೋಜನೆಯನ್ನು ಪ್ರಾರಂಭಿಸಿದಾಗ, ಒಬ್ಬ ಬಾಡಿಗೆದಾರ ಆಸ್ತಿ ಮಾಲೀಕರೊಂದಿಗೆ ತನ್ನ ಆಧಾರ್ ಕಾರ್ಡ್ ವಿವರಗಳೊಂದಿಗೆ ನೋಂದಾಯಿಸಿಕೊಂಡಿರುತ್ತಾನೆ. ಆದರೆ ಸ್ವಲ್ಪ ಸಮಯದ ನಂತರ ಅವರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರುತ್ತಾರೆ. ಅವರ ಆಧಾರ್ ವಿವರಗಳನ್ನು ಈಗಾಗಲೇ ಅಪ್‌ಲೋಡ್ ಮಾಡಿರುವುದರಿಂದ ಮತ್ತು ಪೋರ್ಟಲ್ ಮತ್ತೆ ಅದನ್ನು ಸ್ವೀಕರಿಸದ ಕಾರಣ ಮರು-ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ.

ಈಗ ಅವರಿಗೆ ಅವಕಾಶ ನೀಡಲು, ಈ ಡಿ-ಲಿಂಕಿಂಗ್ ನಿಬಂಧನೆಯನ್ನು ಘೋಷಿಸಲಾಗಿದೆ. ಆಧಾರ್-ಸ್ಕೀಮ್ ಡಿಲಿಂಕ್ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ(ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಅವರು ವಿವರಿಸಿದ್ದಾರೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಡಿ-ಲಿಂಕ್ ಮಾಡುವ ಆಯ್ಕೆಯು ಲಭ್ಯವಿರುತ್ತದೆ. ಅಲ್ಲಿ ನಾಗರಿಕರು ಗೃಹ ಜ್ಯೋತಿ ಯೋಜನೆಯನ್ನು ಪಡೆಯಲು ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬಹುದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com