ರಾಜನಹಳ್ಳಿ ವಾಲ್ಮೀಕಿ ಜಾತ್ರೆ: ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ- ಸಿಎಂ ಸಿದ್ದರಾಮಯ್ಯ

ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವುದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತಿತರರು
ಸಿಎಂ ಸಿದ್ದರಾಮಯ್ಯ ಮತ್ತಿತರರು
Updated on

ದಾವಣಗೆರೆ: ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ. ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವುದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ  ಮಹರ್ಷಿ ವಾಲ್ಮೀಕಿ ಗುರಪೀಠ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ- 2024 ಹಾಗೂ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಬುದ್ಧಿ, ಜ್ಞಾನ ಪಡೆದಾಗ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ. ಎಲ್ಲರಿಗೂ ಸಮಾನ ಎಂಬ ಭಾವ ಬರಲು ಸ್ವಾಭಿಮಾನ ಅಗತ್ಯ ಎಂದರು.

ಬೇಡ ಜನಾಂಗದಲ್ಲಿ ಜನಿಸಿದ ವಾಲ್ಮೀಕಿ ರಾಮಾಯಣ ರಚಿಸಿ ಮಹರ್ಷಿಯಾದರು. ರಾಮಾಯಣ ಮಹಾನ್ ಗ್ರಂಥ. ಮಹಾನ್ ಗ್ರಂಥಗಳನ್ನು ಮೇಲ್ಜಾತಿಯವರು ಮಾತ್ರ ರಚಿಸಲು ಸಾಧ್ಯವೆಂಬ ಪ್ರತೀತಿಯಿತ್ತು. ಆದರೆ ಕಾವ್ಯಸಾಹಿತ್ಯವನ್ನು ಶೂದ್ರರು ರಚಿಸಬಹುದೆಂಬುದನ್ನು ಮಹರ್ಷಿ ವಾಲ್ಮೀಕಿ ನಿರೂಪಿಸಿದರು ಎಂದು ತಿಳಿಸಿದರು. 

ಶ್ರೀರಾಮಚಂದ್ರನ ಕಾಲದಲ್ಲಿಯೇ ಸಮಾನ ಸಮಾಜ ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯಿತ್ತು. ಪ್ರಜೆಗಳೇ ಆಡಳಿತ ನಡೆಸುವ ಪ್ರಜಾಪ್ರಭುತ್ವದ ಮೂಲವನ್ನು ರಾಮಾಯಣದಲ್ಲಿ ಕಾಣಬಹುದು. ಬಸವಾದಿ ಶರಣರು ತಿಳಿಸಿದಂತೆ ವರ್ಗರಹಿತ, ಜಾತಿರಹಿತ, ಸಮಾನ ಅವಕಾಶ ನೀಡುವ ಸಮಾಜ ನಿರ್ಮಾಣವಾದಾಗ ರಾಮರಾಜ್ಯ ಎಂದು ಹೇಳಬಹುದು ಎಂದರು.

ಇಂದು ಜಾತಿ - ಜಾತಿಗಳನ್ನು ಒಡೆಯುವ ಕೆಲಸವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಸಮ ಸಮಾಜದ ಆಶಯವನ್ನೇ ಸಂವಿಧಾನ ಪ್ರತಿಪಾದಿಸುತ್ತದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದೇ ಸರ್ಕಾರದ ಗುರಿಯಾಗಿದೆ. ಎಸ್.ಸಿ , ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಸರಿಯಾದ ಅವಕಾಶ ದೊರೆತಲ್ಲಿ ಉತ್ತಮವಾಗಿ ಜೀವನ ರೂಪಿಸಿಕೊಳ್ಳುತ್ತಿದ್ದರು. ಇವರಿಗೆ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com