ಬೆಂಗಳೂರು: RFO ವರ್ಗಾವಣೆಗಾಗಿ ಗುಬ್ಬಿ ಶಾಸಕರ ನಕಲಿ ಲೆಟರ್ ಹೆಡ್ ಮತ್ತು ಸಿಗ್ನೇಚರ್!

ಬೆಂಗಳೂರಿನಿಂದ ತುಮಕೂರಿಗೆ ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ವರ್ಗಾವಣೆ ಪಡೆಯಲು ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ಅವರ ಲೆಟರ್‌ಹೆಡ್ ಮತ್ತು ಸಹಿ ನಕಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಿಂದ ತುಮಕೂರಿಗೆ ರೇಂಜ್ ಫಾರೆಸ್ಟ್ ಆಫೀಸರ್ (ಆರ್‌ಎಫ್‌ಒ) ವರ್ಗಾವಣೆ ಪಡೆಯಲು ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ಅವರ ಲೆಟರ್‌ಹೆಡ್ ಮತ್ತು ಸಹಿ ನಕಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ವಿಕಾಸಸೌಧದಲ್ಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಚೇರಿಯಲ್ಲಿರುವ ಟಪಾಲ್ ವಿಭಾಗಕ್ಕೆ ಬಂದ ಇಬ್ಬರು ಯುವಕರು ಗುಬ್ಬಿ ಶಾಸಕರ ಪತ್ರವನ್ನು ತಮ್ಮ ಲೆಟರ್‌ಹೆಡ್‌ನಲ್ಲಿ ನೀಡಿದ್ದು, ಆರ್‌ಎಫ್‌ಒ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ.

ಅನುಮಾನಗೊಂಡು ಟಪಾಲ್ ವಿಭಾಗದ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ಇಬ್ಬರೂ ಓಡಿ ಹೋಗಿದ್ದಾರೆ. ಬೆಂಗಳೂರಿನ ಕಾಡುಗೋಡಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಫ್‌ಒ ಅವರನ್ನು ತುಮಕೂರು ಜಿಲ್ಲೆಯ ಪಾವಗಡ ರೇಂಜ್‌ಗೆ ವರ್ಗಾವಣೆ ಮಾಡುವಂತೆ ಪತ್ರದಲ್ಲಿ ಅರಣ್ಯ ಸಚಿವರನ್ನು ಕೋರಲಾಗಿತ್ತು.

ಸಚಿವರ ಆಪ್ತ ಸಹಾಯಕರು ವಿಧಾನಸೌಧ ಪೊಲೀಸರಿಗೆ ದೂರು ಸಲ್ಲಿಸಿದ್ದು, ಲೆಟರ್‌ಹೆಡ್‌ನಲ್ಲಿ ಹೆಸರು ನಮೂದಿಸಿರುವ ಇಬ್ಬರು ಅಪರಿಚಿತ ಆರೋಪಿಗಳು ಮತ್ತು ಆರ್‌ಎಫ್‌ಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಪ್ರಕರಣದ ಎರಡನೇ ಆರೋಪಿ ದೀಪಾಂಜಲಿ ನಗರದ ನಿವಾಸಿ ನಂದೀಶ್ (24) ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.

ತಾನು ನಿರಪರಾಧಿ ಎಂದು ಹೇಳಿರುವ ನಂದೀಶ್, ಮೊದಲ ಆರೋಪಿಯ ಸೂಚನೆ ಮೇರೆಗೆ ಅರಣ್ಯ ಸಚಿವರ ಕಚೇರಿಯ ಟಪಾಲ್ ವಿಭಾಗಕ್ಕೆ ಹೋಗಿದ್ದೆ, ಆದರೆ ಶಾಸಕರ ಸಹಿಯನ್ನು ನಕಲಿ ಮಾಡಲಾಗಿದೆ  ಎಂಬ ವಿಷಯ ತಿಳಿಯದೆ ಹೋಗಿದ್ದೆ.  ಸಚಿವರ ಕಚೇರಿ ಸಿಬ್ಬಂದಿ ಹಿಡಿಯಲು ಮುಂದಾದಾಗ ಓಡಿ ಹೋಗಿದ್ದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಜಾಮೀನು ಅರ್ಜಿಗೆ ವಿರೋಧ ವ್ಯಕ್ತ ಪಡಿಸಿದರು, ಅರ್ಜಿದಾರರರು ಪ್ರಕರಣದಲ್ಲಿ ಶಾಮೀಲಾಗಿರುವುದಕ್ಕೆ ಪ್ರಾಥಮಿಕ ಸಾಕ್ಷಿಗಳಿವೆ ಎಂದು ಪ್ರತಿಪಾದಿಸಿದರು. ಮೂರನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್  ಕೋರ್ಟ್ ಜಡ್ಜ್ ಎ.ಸಿ ನಿಶಾರಾಣಿ  ಫೆಬ್ರವರಿ 8 ರಂದು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com