
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಫೆಬ್ರವರಿ 16, ಶುಕ್ರವಾರ) ಕರ್ನಾಟಕದ 2024-25ನೇ ಸಾಲಿನ ಬಜೆಟ್ (Karnataka Budget) ಮಂಡನೆ ಮಾಡಲಿದ್ದು, ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆ, ಮತ್ತೊಂದೆಡೆ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.
ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯನವರು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ವಿಶೇಷ ಸಂಪುಟ ಸಭೆ: ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದು ಅದಕ್ಕೂ ಮುನ್ನ ವಿಶೇಷ ಸಂಪುಟ ನಡೆಯಲಿದೆ. ಅದರಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಚಿವರು ಭಾಗವಹಿಸಿ ಬಜೆಟ್ ನೀಡುವ ಅನುಮೋದನೆಗಳು, ಯೋಜನೆಗಳು, ಅನುದಾನಗಳಿಗೆ ಒಪ್ಪಿಗೆ ಪಡೆಯಲಿದ್ದಾರೆ. ಸಂಪುಟ ಸಭೆಯಲ್ಲಿ ಏನೇನು ಚರ್ಚೆಗಳು ನಡೆಯಲಿವೆ ಎಂಬ ಕುತೂಹಲ ಕೂಡ ಇದೆ.
Advertisement