ಮಾಜಿ ಸಿಎಂ ಜಯಲಲಿತಾರ ಮೌಲ್ಯಯುತ ವಸ್ತುಗಳ ಹಸ್ತಾಂತರ ಪ್ರಕ್ರಿಯೆ: ದಿನಾಂಕ ನಿಗದಿಪಡಿಸಿದ ಸ್ಪೆಷಲ್ ಕೋರ್ಟ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತಮಿಳು ನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿದೆ.
ತಮಿಳು ನಾಡು ಮಾಜಿ ಸಿಎಂ ಜಯಲಲಿತಾ(ಸಂಗ್ರಹ ಚಿತ್ರ)
ತಮಿಳು ನಾಡು ಮಾಜಿ ಸಿಎಂ ಜಯಲಲಿತಾ(ಸಂಗ್ರಹ ಚಿತ್ರ)
Updated on

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತಮಿಳು ನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿದೆ.

ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳನ್ನು ಮಾರ್ಚ್ 6 ಮತ್ತು 7 ರಂದು ನಿಯೋಜಿಸಿ ತೆಗೆದುಕೊಂಡು ಹೋಗುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಎಚ್.ಎ.ಮೋಹನ್ ಅವರು ಆದೇಶ ನೀಡಿ, ವಿಚಾರಣೆಯ ಕೊನೆಯ ದಿನಾಂಕದಂದು ಹೊರಡಿಸಿದ ಆದೇಶದ ನಂತರ, ತಮಿಳು ನಾಡು ಸರ್ಕಾರವು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರೀಕ್ಷಕ (IGP), ನ್ಯಾಯಾಲಯದ ಆದೇಶದ ಅನುಸಾರವಾಗಿ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂತಿರುಗಿಸಲು ತಮಿಳು ನಾಡು ಸರ್ಕಾರಕ್ಕೆ ಅಧಿಕಾರ ನೀಡಿದೆ.

ತಮಿಳು ನಾಡು ಮಾಜಿ ಸಿಎಂ ಜಯಲಲಿತಾ(ಸಂಗ್ರಹ ಚಿತ್ರ)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿ ವಿಲೇವಾರಿ ಮಾಡುವಂತೆ ಕೇಳಿದ ವಿಶೇಷ ನ್ಯಾಯಾಲಯ

ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಆರು ಟ್ರಂಕ್‌ಗಳನ್ನು ತರುವಂತೆ ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿದೆ. ಮತ್ತು ಹಸ್ತಾಂತರವನ್ನು ದಾಖಲಿಸಿಕೊಳ್ಳಲು ಇಬ್ಬರು ಅಧಿಕೃತ ಅಧಿಕಾರಿಗಳು ಛಾಯಾಗ್ರಾಹಕ ಮತ್ತು ವೀಡಿಯೊಗ್ರಾಫರ್‌ನೊಂದಿಗೆ ಬರುವಂತೆ ಆದೇಶ ನೀಡಿದ್ದಾರೆ.

ಇದಲ್ಲದೆ, ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬೆಲೆಬಾಳುವ ವಸ್ತುಗಳ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ನ್ಯಾಯಾಲಯವು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸುವ ವೆಚ್ಚವನ್ನು ಭರಿಸುವಂತೆ ಕರ್ನಾಟಕ ಸರ್ಕಾರಕ್ಕೆ 5 ಕೋಟಿ ರೂಪಾಯಿ ಪಾವತಿಸಲು ಹೊರಡಿಸಿದ ಆದೇಶವನ್ನು ತಮಿಳುನಾಡು ಸರ್ಕಾರ ಇನ್ನೂ ಪಾಲಿಸಿಲ್ಲ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದರು. ಮುಂದಿನ ವಿಚಾರಣೆ ಮಾರ್ಚ್ 6 ರಂದು ನಡೆಯಲಿದೆ. ಆದಾಯ ಮೀರಿದ ಆಸ್ತಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ನಡೆಸಲಾಗಿತ್ತು ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯ ವಸ್ತುಗಳು ಕರ್ನಾಟಕದಲ್ಲಿವೆ.

ವಿಶೇಷ ನ್ಯಾಯಾಲಯವು 2014 ರಲ್ಲಿ ಜಯಲಲಿತಾ ಮತ್ತು ಇತರರನ್ನು ತಪ್ಪಿತಸ್ಥರೆಂದು ಘೋಷಿಸಿತು. 2015 ರಲ್ಲಿ ಅದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತು. ನಂತರ ಇದನ್ನು 2017 ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು ಮತ್ತು ವಿಶೇಷ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿತು, ಜಯಲಲಿತಾ ಅವರು ಆ ವೇಳೆಗೆ ನಿಧನರಾದರು.

ಕೋಟಿಗಟ್ಟಲೆ ಮೌಲ್ಯದ ವಸ್ತುಗಳು

ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳಲ್ಲಿ 7,040 ಗ್ರಾಂ ಚಿನ್ನಾಭರಣಗಳಿದ್ದು, 468 ಬಗೆಯ ಚಿನ್ನ ಮತ್ತು ವಜ್ರಾಭರಣಗಳು, 700 ಕೆಜಿ ಬೆಳ್ಳಿ ಆಭರಣಗಳು, 11,344 ರೇಷ್ಮೆ ಸೀರೆಗಳು, 740 ದುಬಾರಿ ಚಪ್ಪಲಿಗಳು, 250 ಶಾಲುಗಳು, 12 ರೆಫ್ರಿಜರೇಟರ್‌ಗಳು, ಎಂಟು ವಿಸಿಆರ್‌ಗಳು, 10 ಟಿವಿ, 10 ಟಿವಿ ಸೆಟ್‌ಗಳು, 4 ಸಿಡಿ ಪ್ಲೇಯರ್‌ಗಳು, 2 ಆಡಿಯೊ ಡೆಕ್‌ಗಳು, 24 ಟು-ಇನ್-ಒನ್ ಟೇಪ್ ರೆಕಾರ್ಡರ್‌ಗಳು, 1,040 ವಿಡಿಯೋ ಕ್ಯಾಸೆಟ್‌ಗಳು, ಮೂರು ಕಬ್ಬಿಣದ ಲಾಕರ್‌ಗಳು ಹಾಗೂ 1,93,202 ನಗದು ಒಳಗೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com