ಬಾವಿ ತೋಡುತ್ತಿದ್ದ ಗೌರಿ ಕಾರ್ಯ ಶ್ಲಾಘಿಸಿದ ಸಚಿವ ಮಂಕಾಳ ವೈದ್ಯ: ಆದರೂ ಬಾವಿ ಮುಚ್ಚಿದ ಅಧಿಕಾರಿಗಳು

ನೀರಿನ ಕೊರತೆ ನೀಗಿಸಲು ಅಂಗನವಾಡಿ ಶಾಲೆಯಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಸುದ್ದಿಯಾಗಿದ್ದ ಗೌರಿ ನಾಯ್ಕ (53) ಅವರನ್ನು ಜಿಲ್ಲಾ ಸಚಿವ ಮಂಕಾಳ್ ವೈದ್ಯ ಭೇಟಿ ಮಾಡಿದರು.
ಬಾವಿ ಮುಚ್ಚುತ್ತಿರುವ ಅಧಿಕಾರಿಗಳು
ಬಾವಿ ಮುಚ್ಚುತ್ತಿರುವ ಅಧಿಕಾರಿಗಳು

ಸಿರಸಿ: ನೀರಿನ ಕೊರತೆ ನೀಗಿಸಲು ಅಂಗನವಾಡಿ ಶಾಲೆಯಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಸುದ್ದಿಯಾಗಿದ್ದ ಗೌರಿ ನಾಯ್ಕ (53) ಅವರನ್ನು ಜಿಲ್ಲಾ ಸಚಿವ ಮಂಕಾಳ್ ವೈದ್ಯ ಭೇಟಿ ಮಾಡಿದರು.

ಆದರೆ ಮರುದಿನವೇ ಶಿರಸಿ ತಾಲೂಕು ಆಡಳಿತದ ಅಧಿಕಾರಿಗಳು ಶಾಲೆಗೆ ಇಳಿದು ಬಾವಿಯನ್ನು ಮುಚ್ಚಿಸಿದ್ದಾರೆ. ಈ ಶಾಲೆಯು ಶಿರಸಿಯ ಹೊರವಲಯದಲ್ಲಿರುವ ಗಣೇಶ ನಗರದಲ್ಲಿದೆ.

ಗೌರಿ ಅವರನ್ನು ಭೇಟಿ ಮಾಡಲು ಸಚಿವ ಮಂಕಾಳ ವೈದ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರನ್ನು ಭೇಟಿ ಮಾಡಿದ ನಂತರ ಆಕೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ನನ್ನ ಜಿಲ್ಲೆಯಲ್ಲಿ ಅಂಗನವಾಡಿ ಶಾಲೆಗಳಲ್ಲಿ ನೀರಿಲ್ಲ. ನಾನು ಸಾಕಷ್ಟು ನೀರಿನ ಪೂರೈಕೆ ಮಾಡಿದ್ದೇನೆ, ಆಕೆ ಒಳ್ಳೆಯ ಕೆಲಸ ಮಾಡಿದ್ದಾರೆ.

ಬಾವಿ ಮುಚ್ಚುತ್ತಿರುವ ಅಧಿಕಾರಿಗಳು
ಶಿರಸಿ: ಗೌರಿ ನಾಯ್ಕ ಕೆಲಸಕ್ಕೆ ಅಡ್ಡಿ; ಬಾವಿ ತೋಡುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತಡೆ!

ಮಹಿಳೆಯರು ಕೂಡ ಬಾವಿ ತೋಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದನ್ನು ನಿಲ್ಲಿಸುವಂತೆ ನಾನು ಅವಳನ್ನು ವಿನಂತಿಸುತ್ತೇನೆ ಎಂದು ಗೌರಿ ನಾಯ್ಕ ಅವರನ್ನು ಅಭಿನಂದಿಸಿದ ನಂತರ ಹೇಳಿದರು. ನಾನು ಬಾವಿ ತೋಡುವ ಕೆಲಸವನ್ನು ಪೂರ್ಣಗೊಳಿಸುತ್ತೇನೆ, ಸರ್ಕಾರ ಏನು ಬೇಕೋ ಅದನ್ನು ಮಾಡಲಿ ಎಂದು ಗೌರಿ ನಾಯ್ಕ್ ತಿಳಿಸಿದ್ದಾರೆ.

ಸಚಿವ ಮಂಕಾಳು ವೈದ್ಯ ಬಂದು ನಂಗೆ ಶಾಲು ಹಾರ ಹಾಕಿದ್ರು. ಇದೆಲ್ಲ ನಂಗೆ ಬೇಡ ಬಾವಿ ತೆಗೆಯಲು ಬಿಡಿ ಅಂತಾ ಹೇಳಿದೆ. ಅಜ್ಜಿ ನಿಮಗೆ ಕಷ್ಟ ಆಗುತ್ತೆ ಬೇಡ ಇಲ್ಲಿಗೆ ನಿಲ್ಲಿಸಿ ಅಂದ್ರು. ನನಗೆ ಯಾವುದೇ ಕಷ್ಟ ಆಗುವುದಿಲ್ಲ, ಅವಕಾಶ ಕೊಡಿ. ನೀರು ಬಂದ ಬಳಿಕ ನಿಮಗೆ ಬಾವಿ ಕೊಡುತ್ತೇನೆ. ನೀವು ಎನ್ ಮಾಡುವುದು ಇದೇ ಅದನ್ನ ಮಾಡಿಕೊಳ್ಳಿ. ಆದ್ರೆ ನೀರು ಬರುವವರೆಗೂ ನಂಗೆ ಬಿಟ್ಟ ಬಿಡಿ ಎಂದು ಹೇಳಿದ್ದೆ. ಆದ್ರೆ ನಿನ್ನೆ ಒಮ್ಮಿಂದ ಒಮ್ಮೆಲೆ ಬಂದು ಅಧಿಕಾರಿಗಳು ಹಲಗೆಯಿಂದ ಮುಚ್ಚಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com