ಸಹಕಾರಿ ಇಲಾಖೆ ಸಚಿವ ಕೆ ಎನ್ ರಾಜಣ್ಣ
ಸಹಕಾರಿ ಇಲಾಖೆ ಸಚಿವ ಕೆ ಎನ್ ರಾಜಣ್ಣ

ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಗೆ ಪರಿಷತ್​​ನಲ್ಲಿ ಹಿನ್ನಡೆ

ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರವಾದ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ನಿನ್ನೆ ಬುಧವಾರ ವಿಧಾನ ಪರಿಷತ್ತಿನಲ್ಲಿ 21ಕ್ಕೆ 33 ಮತಗಳಿಂದ ಅಂಗೀಕಾರವಾಗದೆ ವಿಫಲವಾಯಿತು.
Published on

ಬೆಂಗಳೂರು: ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರವಾದ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ನಿನ್ನೆ ಬುಧವಾರ ವಿಧಾನ ಪರಿಷತ್ತಿನಲ್ಲಿ 21ಕ್ಕೆ 33 ಮತಗಳಿಂದ ಅಂಗೀಕಾರವಾಗದೆ ವಿಫಲವಾಯಿತು. ಆಯ್ಕೆ ಸದನ ಸಮಿತಿಯ ಮುಂದೆ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದರೆ, ಕಾಂಗ್ರೆಸ್ ಅದನ್ನು ಅಂಗೀಕರಿಸಲು ಬಯಸಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಮಯ ವ್ಯರ್ಥ ಮಾಡುವುದು ಮತ್ತು ಮಸೂದೆಯನ್ನು ವಿಳಂಬ ಮಾಡುವುದು ಮಾತ್ರ ವಿರೋಧ ಪಕ್ಷಗಳ ತಂತ್ರವಾಗಿದೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಕೆಲ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು. ವಿಧೇಯಕವನ್ನು ಅಂಗೀಕರಿಸುವಂತೆ ಕಾಂಗ್ರೆಸ್ ಮುಖಂಡರಾದ ಹೆಚ್ ಕೆ ಪಾಟೀಲ್ ಮತ್ತು ಕೆಎನ್ ರಾಜಣ್ಣ ಪ್ರತಿಪಕ್ಷಗಳಿಗೆ ಮನವಿ ಮಾಡಿದರೂ ವಿಫಲವಾಯಿತು.

ಸಹಕಾರಿ ಇಲಾಖೆ ಸಚಿವ ಕೆ ಎನ್ ರಾಜಣ್ಣ
ವಿಧಾನಸಭೆಯಲ್ಲಿ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಗೀಕಾರ; ನಾಮನಿರ್ದೇಶಿತರ ಸಂಖ್ಯೆ ಹೆಚ್ಚಳಕ್ಕೆ ಸದನ ಅಸ್ತು

ಬಿಜೆಪಿ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ರವಿಕುಮಾರ್ ಅವರು ತಿದ್ದುಪಡಿಯ ನಿಬಂಧನೆಗಳನ್ನು ಬಿಜೆಪಿ ವಿರೋಧಿಸುವುದಿಲ್ಲ, ಆದರೆ ಮಸೂದೆಯ ಎಲ್ಲಾ ಅಂಶಗಳ ಬಗ್ಗೆ ಹೆಚ್ಚಿನ ಚರ್ಚೆಯನ್ನು ಬಯಸುತ್ತದೆ ಎಂದು ಸಮರ್ಥಿಸಿಕೊಂಡರು. ತಿದ್ದುಪಡಿಗೆ ಕಾಂಗ್ರೆಸ್ ಏಕೆ ಹೆದರುತ್ತಿದೆ ಮತ್ತು ಅದರ ಮೇಲಿನ ಚರ್ಚೆಯನ್ನು ಏಕೆ ವಿರೋಧಿಸುತ್ತೀರಿ ಎಂದು ಅವರು ಕೇಳಿದರು.

ಈ ಹಿಂದೆ ಸಹಕಾರ ಸಚಿವರಾಗಿದ್ದ ಬಿಜೆಪಿ ಎಂಎಲ್ ಸಿ ಅಡಗೂರು ವಿಶ್ವನಾಥ್ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು, ಮೀಸಲಾತಿ ವಿರೋಧಿಸುವುದು ಅವೈಜ್ಞಾನಿಕ ಎಂದರು. ಆಡಳಿತ ಮತ್ತು ನಿರ್ವಹಣೆಯಲ್ಲಿ ಮಾತ್ರವಲ್ಲದೆ ಸಾಲ ಪಡೆಯುವಲ್ಲಿ ಮತ್ತು ಸದಸ್ಯತ್ವದಲ್ಲಿಯೂ ಮೀಸಲಾತಿ ಇರಬೇಕು. ಶ್ರೀಮಂತ ಮತ್ತು ಶಕ್ತಿಯುತ ಸಮುದಾಯಗಳು ಎಲ್ಲಾ ಪ್ರಯೋಜನಗಳನ್ನು ಮೂಲೆಗುಂಪು ಮಾಡುವುದರ ಕುರಿತು ಮಾತನಾಡಿದ ಅವರು ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ನಾಲ್ಕು ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಪ್ರಧಾನ ಸ್ಥಾನಗಳನ್ನು ಹೊಂದಿದ್ದಾರೆ ಎಂದರು.

ಬಿಜೆಪಿ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಅವರು ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಏಕೆ ಆತುರಪಡುತ್ತಿದೆ ಎಂದು ಕೇಳಿದ್ದು, ಸದನ ಸಮಿತಿಯಲ್ಲಿ ಚರ್ಚಿಸಬೇಕು ಎಂದು ಸಲಹೆ ನೀಡಿದರು. ಜೆಡಿಎಸ್ ಕೂಡ ಬಿಜೆಪಿ ಸದಸ್ಯರನ್ನು ಬೆಂಬಲಿಸಿದರು. ಜೆಡಿಎಸ್ ಎಂಎಲ್ ಸಿ ಶರವಣ ಕೂಡ ಸದನ ಸಮಿತಿಯು ಮಸೂದೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್, ಸಹಕಾರಿ ಸಂಘಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮರ್ಪಕವಾಗಿ ಪ್ರಾತಿನಿಧ್ಯವಿಲ್ಲ. ಈ ಚಳವಳಿಯ ಲಾಭ ಪಡೆಯಲು ಅವರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಲು ಮೀಸಲಾತಿಯೊಂದೇ ದಾರಿ. ಇನ್ನು ಆರು ತಿಂಗಳಲ್ಲಿ ಏನಾಗುತ್ತದೆ ಮತ್ತು ಯಾರು ಎಲ್ಲಿ ಕುಳಿತುಕೊಳ್ಳುತ್ತಾರೆಂದು ಯಾರಿಗೆ ಗೊತ್ತು ಎಂದು ಬಿ ಕೆ ಹರಿಪ್ರಸಾದ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com