ಆನ್ ಲೈನ್ ನಲ್ಲಿ ವಂಚನೆ: ಇಬ್ಬರು ಮಹಿಳೆಯರಿಗೆ ಲಕ್ಷಾಂತರ ರೂ. ಮೋಸ!

ಆನ್ ಲೈನ್ ನಲ್ಲಿ ಪಾರ್ಟ್ ಟೈಂ ಉದ್ಯೋಗದ ಹಗರಣದ ವಂಚನೆಗೆ ಬಿದ್ದು ರೂ. 4.69 ಲಕ್ಷ ಕಳೆದುಕೊಂಡಿರುವುದಾಗಿ ಗಂಗೊಳ್ಳಿಯ 30 ವರ್ಷದ ಮಹಿಳೆಯೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹೆಚ್ ಆರ್ ದಿವ್ಯಾ ಎಂದು ಹೆಸರು ಹೇಳಿಕೊಂಡ ಮಹಿಳೆಯೊಬ್ಬರು ವಾಟ್ಸಾಪ್ ನಲ್ಲಿ ಮೇಸೆಜ್ ಕಳುಹಿಸಿದ್ದು, ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಆನ್ ಲೈನ್ ನಲ್ಲಿ ಪಾರ್ಟ್ ಟೈಂ ಉದ್ಯೋಗದ ಹಗರಣದ ವಂಚನೆಗೆ ಬಿದ್ದು ರೂ. 4.69 ಲಕ್ಷ ಕಳೆದುಕೊಂಡಿರುವುದಾಗಿ ಗಂಗೊಳ್ಳಿಯ 30 ವರ್ಷದ ಮಹಿಳೆಯೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಹೆಚ್ ಆರ್ ದಿವ್ಯಾ ಎಂದು ಹೆಸರು ಹೇಳಿಕೊಂಡ ಮಹಿಳೆಯೊಬ್ಬರು ವಾಟ್ಸಾಪ್ ನಲ್ಲಿ ಮೇಸೆಜ್ ಕಳುಹಿಸಿದ್ದು, ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಂತರ ಲಿಂಕ್ ಹಂಚಿಕೊಂಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದ್ದು, ಹಣ ಜಮೆ ಮಾಡಲು ತಿಳಿಸಿದ್ದಾರೆ. ಫೆಬ್ರವರಿ 3 ರಿಂದ 14ರವರೆಗೂ ರೂ. 5.26 ಲಕ್ಷ ಹಣ ವಂಚಿಸಿದ್ದು, ನಂತರ ರೂ. 57,201ಯನ್ನು ತನ್ನ ಖಾತೆಗೆ ವರ್ಗಾಯಿಸಿರುವುದಾಗಿ ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರೂ. 12. 85 ಲಕ್ಷ ಹಣ ಕಳೆದುಕೊಂಡಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಮನೆಯಿಂದಲೇ ಕೆಲಸ ನೀಡುವ ಆಮಿಷವೊಡ್ಡಿದ ಅಪರಿಚಿತ ವ್ಯಕ್ತಿಯೊಬ್ಬ, ಆಕೆಯಿಂದ ಅಪರಿಚಿತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.

ಫೆಬ್ರವರಿ 8 ರಿಂದ ಫೆಬ್ರವರಿ 16ರವರೆಗೂ ಹಂತ ಹಂತವಾಗಿ ಮಹಿಳೆ ರೂ. 12.85 ಲಕ್ಷ ಹಣ ಕಳುಹಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆ ಸೆಕ್ಷನ್ 66 (ಡಿ) ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಸಾಂದರ್ಭಿಕ ಚಿತ್ರ
ಎಚ್ಚರ.... ಹೀಗೂ ಆನ್ ಲೈನ್ ವಂಚನೆ ಮಾಡುವವರಿದ್ದಾರೆ!: ವರ್ಕ್ ಫ್ರಂ ಹೋಮ್‌ ಹೆಸರಲ್ಲಿ ಪ್ರೊಫೆಸರ್'ಗೆ ಮಕ್ಮಲ್ ಟೋಪಿ

ಆರೋಪಿಗಳು ರೂ. 4.69 ಲಕ್ಷವನ್ನು ವಾಪಸ್ ಕಳುಹಿಸಿಲ್ಲ ಆದರೆ, ಲಕ್ಷುರಿ ಉತ್ಪನ್ನಗಳನ್ನು ಕಳುಹಿಸುವುದಾಗಿ ಹೇಳಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 417, 420 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66(ಸಿ) 66(ಡಿ)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com