ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯಾದ್ಯಂತ ಫ್ಲ್ಯಾಷ್‌ಮಾಬ್‌ ನೃತ್ಯದ ಮೂಲಕ ಸಂವಿಧಾನ ಜಾಗೃತಿ ಜಾಥಾ

ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಸಂವಿಧಾನ ಜಾಗೃತಿ.
ಫ್ಲ್ಯಾಷ್‌ಮಾಬ್‌ ನೃತ್ಯದ ಮೂಲಕ ಸಂವಿಧಾನ ಜಾಗೃತಿ
ಫ್ಲ್ಯಾಷ್‌ಮಾಬ್‌ ನೃತ್ಯದ ಮೂಲಕ ಸಂವಿಧಾನ ಜಾಗೃತಿ

ಬೆಂಗಳೂರು: ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕೈಗೊಂಡಿದೆ.

ಭಾರತ ಸಂವಿಧಾನದ ಮಹತ್ವ, ಸಂವಿಧಾನವು ನೀಡಿರುವ ಹಕ್ಕು, ಸ್ವಾತಂತ್ರ್ಯಗಳು, ಅಧಿಕಾರಗಳು ಮತ್ತು ಸಂವಿಧಾನದಿಂದಲೇ ಭಾರತದ ಮತ್ತು ರಾಜ್ಯದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕತಿಕ, ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿ ಎಂಬ ಸಂದೇಶವನ್ನು ಎಲ್ಲರಿಗೂ ತಿಳಿಯಪಡಿಸುವ ಮತ್ತು ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನವರಿ 26, 2024 ರಿಂದ ಫೆಬ್ರವರಿ 24, 2024ರ ವರೆಗೆ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಯೋಜನೆಯ ಭಾಗವಾಗಿ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ ಜಿಲ್ಲಾ ಕೇಂದ್ರಗಳಲ್ಲಿ ಫ್ಲಾಷ್‌ಮಾಬ್‌ ಡ್ಯಾನ್ಸ್‌ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗುತ್ತಿದೆ.

ಫ್ಲ್ಯಾಷ್‌ಮಾಬ್‌ ನೃತ್ಯದ ಮೂಲಕ ಸಂವಿಧಾನ ಜಾಗೃತಿ
ಸಂವಿಧಾನ ಜಾರಿಯಾಗಿ 75 ವರ್ಷ, ಫೆ.24-25ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶ: ಸಿಎಂ ಸಿದ್ದರಾಮಯ್ಯ

ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರದ ಬ್ರಿಗೆಡ್‌ ರೋಡ್‌ ಜಂಕ್ಷನ್‌, ಮೆಜೆಸ್ಟಿಕ್‌, ಗೋಪಾಲನ್‌ ಟೆಕ್‌ ಪಾರ್ಕ್‌, ಆರ್‌ ಆರ್‌ ನಗರ ಗೋಪಾಲನ್‌ ಮಾಲ್‌ ಮತ್ತು ರಾಜಾಜಿನಗರದ ರಾಮಮಂದಿರ ಬಳಿ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ನಗರದ ವಿವಿಧೆಡೆ ಫ್ಲ್ಯಾಷ್‌ಮಾಬ್‌ ನೃತ್ಯ ನಡೆಸಲಾಗಿದೆ.

ಈ ಮೂಲಕ ಸಾರ್ವಜನಿಕರಲ್ಲಿ ಹಾಡು, ನೃತ್ಯ ಮತ್ತು ಯಕ್ಷಗಾನದ ಮೂಲಕ ಸಂವಿಧಾನ ಕುರಿತು ಅರಿವು ಮೂಡಿಸುವ ವಿಶೇಷ ಪ್ರಯತ್ನವಾಗುತ್ತಿದೆ. ಜೊತೆಗೆ ಸಂವಿಧಾನದ ಆಶಯಗಳ ಕುರಿತಾದ ಬಿತ್ತಿಪತ್ರಗಳ ಪ್ರದರ್ಶನ ಮಾಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಫ್ಲ್ಯಾಷ್‌ಮಾಬ್‌ ನೃತ್ಯ ಕೈಗೊಳ್ಳಲಾಗುತ್ತಿದೆ. ಸಂವಿಧಾನದ ಅರಿವಿಗಾಗಿ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಈ ವಿಭಿನ್ನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com