'ಪಾಕಿಸ್ತಾನ ಜಿಂದಾಬಾದ್ ಘೋಷಣೆ': ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ಹೇಳಿದ್ದೇನು?

ನನಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಸಲಿಲ್ಲ
ರಾಜ್ಯಸಭಾ ಸದಸ್ಯ ಡಾ ಸೈಯದ್ ನಾಸಿರ್ ಹುಸೇನ್
ರಾಜ್ಯಸಭಾ ಸದಸ್ಯ ಡಾ ಸೈಯದ್ ನಾಸಿರ್ ಹುಸೇನ್

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಮೂವರು ಅಭ್ಯರ್ಥಿಗಳ ಅಭಿಮಾನಿಗಳು ನಿನ್ನೆ ವಿಧಾನಸೌಧ ಕಾರಿಡಾರ್ ನಲ್ಲಿ ಸಂಭ್ರಮಾಚರಣೆ ನಡೆಸಿದ್ದು, ಈ ವೇಳೆ ಸೈಯದ್ ನಾಸೀರ್ ಹುಸೇನ್ ಅವರ ಅನುಯಾಯಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿರುವ ನೂತನ ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್, ಇಂದು ನಾವು ಮೂವರು ಅಭ್ಯರ್ಥಿಗಳ ಗೆಲುವನ್ನು ನಮ್ಮ ಕಾರ್ಯಕರ್ತರು ಸಂಭ್ರಮಿಸುತ್ತಿದ್ದರು. ನಾನು ಕೂಡ ಅವರ ಮಧ್ಯೆ ಇದ್ದೆ. 'ನಾಸಿರ್ ಹುಸೇನ್ ಜಿಂದಾಬಾದ್','ನಾಸಿರ್ ಸಾಬ್ ಜಿಂದಾಬಾದ್', 'ನಾಸಿರ್ ಖಾನ್ ಜಿಂದಾಬಾದ್', 'ಕಾಂಗ್ರೆಸ್ ಪಾರ್ಟಿ ಜಿಂದಾಬಾದ್' ಎಂದು ಅಭಿಮಾನಿಗಳು ಸಾಕಷ್ಟು ಘೋಷಣೆ ಕೂಗುತ್ತಿದ್ದರು.

ರಾಜ್ಯಸಭಾ ಸದಸ್ಯ ಡಾ ಸೈಯದ್ ನಾಸಿರ್ ಹುಸೇನ್
ರಾಜ್ಯಸಭೆ ಚುನಾವಣೆ ಗೆಲುವು: ನಾಸಿರ್ ಹುಸೇನ್ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

ನಂತರ ನಾನು ಮನೆಗೆ ಹೋಗಲು ಸಿದ್ಧವಾದಾಗ ಮಾಧ್ಯಮ ಪ್ರತಿನಿಧಿಗಳಿಂದ ನಿಮ್ಮ ಅಭಿಮಾನಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿ ಕರೆ ಮಾಡಿದರು. ನನಗೆ ಸಂಭ್ರಮಾಚರಣೆ ಮಧ್ಯೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಸಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸರು ತನಿಖೆ ಮಾಡಲಿ: ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ, ಪೊಲೀಸ್ ದೂರು ಕೂಡ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಲಿ, ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಥವಾ ದುರುದ್ದೇಶದಿಂದ ಆಡಿಯೊ ಮತ್ತು ವಿಡಿಯೊವನ್ನು ತಿರುಚಿದ್ದಾರೆಯೇ ಎಂಬ ಬಗ್ಗೆ ಕೂಡ ಸೂಕ್ತ ತನಿಖೆಯಾಗಬೇಕು, ಘೋಷಣೆ ಕೂಗಿದವರು ಹೇಗೆ ಅಲ್ಲಿಗೆ ಬಂದರು, ಅವರ ಹಿನ್ನೆಲೆಯೇನು ಎಂಬ ಬಗ್ಗೆ ಕೂಡ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com