ಉಡುಪಿಯ ಕಲ್ಲಿದ್ದಲು ಆಧಾರಿತ ಖಾಸಗಿ ಸ್ಥಾವರದಿಂದ ಕರ್ನಾಟಕಕ್ಕೆ ಸಂಪೂರ್ಣ ವಿದ್ಯುತ್ ಪೂರೈಕೆ

ಅದಾನಿ ಪವರ್ ಲಿಮಿಟೆಡ್ (APL) ಉಡುಪಿ ಜಿಲ್ಲೆಯ ಯೆಲ್ಲೂರು ಗ್ರಾಮದಲ್ಲಿರುವ ತನ್ನ ಎರಡು ಸ್ಥಾವರಗಳಲ್ಲಿ ಒಟ್ಟು 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ತಾನು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOM)ಪೂರೈಸುತ್ತದೆ. 
ವಿದ್ಯುತ್ ಸ್ಥಾವರ
ವಿದ್ಯುತ್ ಸ್ಥಾವರ

ಉಡುಪಿ: ಅದಾನಿ ಪವರ್ ಲಿಮಿಟೆಡ್ (APL) ಉಡುಪಿ ಜಿಲ್ಲೆಯ ಯೆಲ್ಲೂರು ಗ್ರಾಮದಲ್ಲಿರುವ ತನ್ನ ಎರಡು ಸ್ಥಾವರಗಳಲ್ಲಿ ಒಟ್ಟು 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ ತಾನು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOM)ಪೂರೈಸುತ್ತದೆ. 

ಒಪ್ಪಂದದ ಪ್ರಕಾರ ಎಪಿಎಲ್ 1,015 ಮೆಗಾವ್ಯಾಟ್ ವಿದ್ಯುತ್ ನ್ನು ಕರ್ನಾಟಕಕ್ಕೆ ಮತ್ತು ಉಳಿದ 185 ಮೆಗಾವ್ಯಾಟ್ ನ್ನು ಪಂಜಾಬ್‌ಗೆ ಪೂರೈಸಬೇಕಿತ್ತು. ಆದರೆ ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ವಿದ್ಯುತ್ ಕಾಯಿದೆಯ ಸೆಕ್ಷನ್ 11 ರ ಅಡಿಯಲ್ಲಿ ತುರ್ತು ಷರತ್ತು ವಿಧಿಸಿದ ಕಾರಣ ಕಂಪನಿಯು ಪಂಜಾಬ್‌ಗೆ ಯಾವುದೇ ವಿದ್ಯುತ್ ಸರಬರಾಜು ಮಾಡುವುದಿಲ್ಲ, ರಾಜ್ಯದಲ್ಲಿ ನೆಲೆಗೊಂಡಿರುವ ಎಲ್ಲಾ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು ತಾವು ಉತ್ಪಾದಿಸುವ ಸಂಪೂರ್ಣ ವಿದ್ಯುತ್ ನ್ನು ರಾಜ್ಯಕ್ಕೆ ಮಾತ್ರ ಮಾರಾಟ ಮಾಡಬೇಕೆಂದು ಆದೇಶಿಸಿತು. 

ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆಯಲ್ಲಿ ದೊಡ್ಡ ಕೊರತೆಯೊಂದಿಗೆ ಜಲವಿದ್ಯುತ್ ಉತ್ಪಾದನೆಯು ತಳಮಟ್ಟಕ್ಕೆ ತಲುಪಿದೆ. ಎಪಿಎಲ್ ಕರ್ನಾಟಕಕ್ಕೆ ಪ್ರತಿ ಯೂನಿಟ್‌ಗೆ 5 ರೂಪಾಯಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರೆ, ವಿದ್ಯುತ್ ಖರೀದಿ ಒಪ್ಪಂದದ (PPA) ಪ್ರಕಾರ ಪಂಜಾಬ್‌ಗೆ 8 ರೂಪಾಯಿಗೆ ಮಾರಾಟ ಮಾಡುತ್ತಿದೆ. ಕಳೆದ ವರ್ಷ, ರಾಜ್ಯವು ಹೇರಳವಾಗಿ ಮಳೆಯಾಗುವುದರೊಂದಿಗೆ, ಅದರ ಹೈಡಲ್ ಘಟಕಗಳಿಂದ ಸಾಕಷ್ಟು ಉತ್ಪಾದನೆಯನ್ನು ಹೊಂದಿದ್ದರಿಂದ ಅದು ಎಪಿಎಲ್‌ನಿಂದ ಯಾವುದೇ ವಿದ್ಯುತ್ ಖರೀದಿಸಲಿಲ್ಲ. ಬೇಡಿಕೆಯು ಹೆಚ್ಚಿಲ್ಲದ ಕಾರಣ ರಾಜ್ಯವು ಸರಬರಾಜುಗಳನ್ನು ನಿರ್ವಹಿಸಬಹುದು.

ಎಪಿಎಲ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸ್ಥಾವರವು ವಿದ್ಯುತ್ ಉತ್ಪಾದಿಸಲು ಸಾಕಷ್ಟು ಆಮದು ಮಾಡಿದ ಕಲ್ಲಿದ್ದಲನ್ನು ಹೊಂದಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. “ಎಸ್ಕಾಮ್‌ಗಳು ಎಪಿಎಲ್‌ಗೆ ಬರಬೇಕಾದ ಎಲ್ಲಾ ಹಣವನ್ನು ತೆರವುಗೊಳಿಸಿವೆ. ಕರ್ನಾಟಕಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಪೂರೈಸಲು ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.

ಮಾತುಕತೆ ನಡೆಸಿ ಸೌಹಾರ್ದಯುತ ಮೊತ್ತಕ್ಕೆ ಬರುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದಾಗ ಎಸ್ಕಾಮ್‌ಗಳಿಂದ ಎಪಿಎಲ್‌ಗೆ ಬರಬೇಕಿದ್ದ ಮೊತ್ತ 3,000 ಕೋಟಿ ರೂಪಾಯಿಯಾಗಿದೆ. ರಾಜ್ಯ ಸರ್ಕಾರ ನೀಡುವ 1,800 ಕೋಟಿ ರೂಪಾಯಿಗಳ ಪೂರ್ಣ ಮತ್ತು ಅಂತಿಮ ಇತ್ಯರ್ಥಕ್ಕೆ ಎಪಿಎಲ್ ಒಪ್ಪಿಗೆ ನೀಡಿದೆ. ಎಪಿಎಲ್ ಕಳೆದ 10 ವರ್ಷಗಳಿಂದ ಪಂಜಾಬ್‌ಗೆ 185 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com