ಬ್ರಿಟನ್ ನ 'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' ಗೌರವ: ರಾಜ್ಯದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಗೆ ಎಚ್ ಡಿಕೆ ಅಭಿನಂದನೆ

ಕರ್ನಾಟಕದ ಪ್ರಖ್ಯಾತ ವಯಲಿನ್ ವಾದಕರಾದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಅವರು ಬ್ರಿಟನ್ ನ'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' (The Most Excellent Order) ಗೌರವಕ್ಕೆ ಪಾತ್ರರಾಗಿದ್ದಾರೆ.
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಡಾ. ಜ್ಯೋತ್ಸ್ನಾ ಶ್ರೀಕಾಂತ್
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಡಾ. ಜ್ಯೋತ್ಸ್ನಾ ಶ್ರೀಕಾಂತ್

ಬೆಂಗಳೂರು: ಕರ್ನಾಟಕದ ಪ್ರಖ್ಯಾತ ವಯಲಿನ್ ವಾದಕರಾದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಅವರು ಬ್ರಿಟನ್ ನ'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' (The Most Excellent Order) ಗೌರವಕ್ಕೆ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಸಂಗೀತಕ್ಕೆ ಅವರು ಸಲ್ಲಿಸಿರುವ ಕೊಡುಗೆಗಾಗಿ  ಬ್ರಿಟನ್ ನ ಅತ್ಯುನ್ನತ ಮೂರನೇ ನಾಗರಿಕ ಪ್ರಶಸ್ತಿಯನ್ನು ಬ್ರಿಟನ್ ದೊರೆ ಮೂರನೇ ಚಾರ್ಲ್ಸ್  ಪ್ರದಾನ ಮಾಡಿದರು. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ,  ಡಾ.ಜ್ಯೋತ್ಸ್ನಾ ಅವರು ಬ್ರಿಟನ್ ದೇಶದ ಮಹಾರಾಜರಾದ 3ನೇ ಚಾರ್ಲ್ಸ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿರುವುದು ಅತ್ಯಂತ  ಸಂತೋಷದ ಸಂಗತಿ. ಅವರು ಈ ಗೌರವಕ್ಕೆ ಪಾತ್ರರಾಗುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸಿದ್ದಾರೆ. ಅವರಿಗೆ ಶುಭವಾಗಲಿ ಹಾಗೂ ಇನ್ನಷ್ಟು ಪ್ರತಿಷ್ಠಿತ ಗೌರವಗಳು ಅವರನ್ನು ಅರಸಿ ಬರಲಿ ಎಂದು ಹಾರೈಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com