ಕೆಂಗೇರಿ: ಒತ್ತುವರಿಯಾಗಿದ್ದ 80 ಕೋಟಿ ರೂ ಮೌಲ್ಯದ 6.5 ಎಕರೆ ಪ್ರದೇಶ ಅರಣ್ಯ ಇಲಾಖೆ ವಶಕ್ಕೆ

ಕೆಂಗೇರಿಯ ಬಿಎಂ ಕಾವಲ್ ಗ್ರಾಮದಲ್ಲಿ ಒತ್ತುವರಿಯಾಗಿದ್ದ 6.5 ಎಕರೆಯಷ್ಟು ಪ್ರದೇಶವನ್ನು ಮರಳಿ ತನ್ನ ವಶಕ್ಕೆ ಪಡೆದಿದೆ. 
ಅರಣ್ಯ ಇಲಾಖೆ (ಸಂಗ್ರಹ ಚಿತ್ರ)
ಅರಣ್ಯ ಇಲಾಖೆ (ಸಂಗ್ರಹ ಚಿತ್ರ)

ಬೆಂಗಳೂರು: ಕೆಂಗೇರಿಯ ಬಿಎಂ ಕಾವಲ್ ಗ್ರಾಮದಲ್ಲಿ ಒತ್ತುವರಿಯಾಗಿದ್ದ 6.5 ಎಕರೆಯಷ್ಟು ಪ್ರದೇಶವನ್ನು ಮರಳಿ ತನ್ನ ವಶಕ್ಕೆ ಪಡೆದಿದೆ. 

ಸರ್ವೇ ನಂ.170 ರಲ್ಲಿ 80 ಕೋಟಿ ರೂಪಾಯಿ ಮೌಲ್ಯದ 6.5 ಎಕರೆ ಪ್ರದೇಶ ಒತ್ತುವರಿಯಾಗಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ವೃತ್ತದ ಅಧಿಕಾರಿಗಳು ಕಾರ್ಮಿಕರಿಗಾಗಿ ನಿರ್ಮಿಸಿದ ತಾತ್ಕಾಲಿಕ ಮನೆಗಳನ್ನು ನೆಲಸಮಗೊಳಿಸಿದರು. ಈ 6.5 ಎಕರೆ ಪ್ರದೇಶವನ್ನು ಮಧುಸೂಧನ್ ಸ್ವಾಮಿ ಅವರು ಒತ್ತುವರಿ ಮಾಡಿಕೊಂಡು ಅದನ್ನು ತೋಟವನ್ನಾಗಿ ಪರಿವರ್ತಿಸಿದ್ದರು. 

ಈ ಪ್ರಕರಣವು 2006 ರಿಂದ ವಿವಾದದಲ್ಲಿದೆ ಮತ್ತು 2017 ರಲ್ಲಿ ಎಸಿಎಫ್ ನ್ಯಾಯಾಲಯವು ಮೊದಲ ಬಾರಿಗೆ ತೆರವು ಕಾರ್ಯಾಚರಣೆ ಆದೇಶವನ್ನು ನೀಡಿತ್ತು. ಇದನ್ನು ಪ್ರಶ್ನಿಸಿ  ಸಿಸಿಎಫ್ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಬುಧವಾರ ಅತಿಕ್ರಮಣ ಆಸ್ತಿಯನ್ನು ವಶಪಡಿಸಿಕೊಳ್ಳಲು ಪೊಲೀಸರೊಂದಿಗೆ 20 ಅರಣ್ಯ ಸಿಬ್ಬಂದಿಯ ತಂಡ ಸಜ್ಜುಗೊಂಡಿತ್ತು. ಅತಿಕ್ರಮಣದಾರನ ವಿರುದ್ಧ ವಿವಿಧ ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದಂತೆ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. "ಕಾಗದದಲ್ಲಿ 6.5 ಎಕರೆ ಎಂದು ನಮೂದಿಸಿದ್ದರೂ, ವಾಸ್ತವದಲ್ಲಿ ನಾವು ಸುಮಾರು 7 ಎಕರೆಗಳನ್ನು ತೆರವುಗೊಳಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com