
ಬೆಂಗಳೂರು: ಬರಗಾಲದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೊಳಗಾದ ರೈತರಿಗೆ ಮೊದಲನೇ ಕಂತಿನಲ್ಲಿ ತಲಾ ರೂ. 2,000 ಪರಿಹಾರ ನೀಡಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ.105 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ ನೆರವು ನಿರೀಕ್ಷಿಸಿ ಎಸ್ ಡಿಆರ್ ಎಫ್ ನಿಂದ ಒಬ್ಬ ರೈತರಿಗೆ ಎರಡು ಹೆಕ್ಟೇರ್ ಜಮೀನಿಗೆ ಸೀಮಿತವಾಗಿ ಪರಿಹಾರ ವಿತರಿಸಲಾಗುತ್ತಿದೆ.ಶೇ. 33 ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿರುವ ರೈತರಿಗೆ ಮಾತ್ರ ಪರಿಹಾರ ವಿತರಿಸಲಾಗುವುದು ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಪ್ರತಿ ಹೆಕ್ಟೇರ್ ಗೆ ಮಳೆಯಾಶ್ರಿತ ಬೆಳೆಗಳಿಗೆ ರೂ. 8,500 ನೀರಾವರಿ ಬೆಳೆಗಳಿಗೆ ರೂ. 17,00 ಮತ್ತು ಬಹುವಾರ್ಷಿಕ ಬೆಳೆಗಳಿಗೆ ರೂ. 22,500 ಪರಿಹಾರ ನಿಗದಿಪಡಿಸಲಾಗಿದೆ. ಅದರಲ್ಲಿ ಮೊದಲ ಕಂತಿನಲ್ಲಿ ರೂ. 2,000 ಪಾವತಿಸಲಾಗುತ್ತದೆ. ಫ್ರೋಟ್ಸ್ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.
Advertisement