ವೃದ್ಧರು ಮಾತ್ರವಲ್ಲ, ವಯಸ್ಕರು ಕೂಡ ಕಾರ್ಬೆವಾಕ್ಸ್ ಬೂಸ್ಟರ್ ಡೋಸ್ ಪಡೆಯಬಹುದು: ರಾಜ್ಯ ಸರ್ಕಾರ ಮಾರ್ಗಸೂಚಿ

ಕಳೆದ ಆರು ತಿಂಗಳಲ್ಲಿ 18 ವರ್ಷ ತುಂಬಿದವರೂ ಸಹ ಬೂಸ್ಟರ್ ಡೋಸ್ ಅಥವಾ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಆರು ತಿಂಗಳಲ್ಲಿ 18 ವರ್ಷ ತುಂಬಿದವರೂ ಸಹ ಬೂಸ್ಟರ್ ಡೋಸ್ ಅಥವಾ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಕಾರ್ಬೆವಾಕ್ಸ್ ಲಸಿಕೆಯನ್ನು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸಹವರ್ತಿ ರೋಗಿಗಳಿಗೆ(comorbidities) ಮಾತ್ರ ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ; ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿ (TAC) ಸದಸ್ಯರು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಹಾಕಬಹುದೆಂದು ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್, 15ರಿಂದ 17 ವರ್ಷದೊಳಗಿನವರು ಮತ್ತು ಇತ್ತೀಚೆಗೆ 18 ವರ್ಷ ತುಂಬಿದವರು ಈ ಲಸಿಕೆಯನ್ನು ಮುನ್ನೆಚ್ಚರಿಕೆಯಾಗಿ ತೆಗೆದುಕೊಳ್ಳಬಹುದು. ಆದರೆ ನಾವು ಈಗಿನಂತೆ ಆದ್ಯತೆಯ ಮೇಲೆ ಅವರನ್ನು ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದರು. ಮತ್ತೊಬ್ಬ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿ, ಕೋವಿನ್ ಪೋರ್ಟಲ್ 18 ವರ್ಷಕ್ಕಿಂತ ಮೇಲ್ಪಟ್ಟವರ ವಿವರಗಳನ್ನು ಅಪ್‌ಲೋಡ್ ಮಾಡುವುದನ್ನು ಸ್ವೀಕರಿಸಿದರೆ ಮತ್ತು ಆಸ್ಪತ್ರೆ ಮತ್ತು ಸಮಯ ಸ್ಲಾಟ್ ಗೆ ಅನುಮತಿ ನೀಡಿದರೆ ಲಭ್ಯತೆಯ ಆಧಾರದ ಮೇಲೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.

18 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯ ಮೇಲೆ ಲಸಿಕೆಯನ್ನು ನೀಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿಲ್ಲ. ಆದಾಗ್ಯೂ, ಬೂಸ್ಟರ್ ಡೋಸ್ ತೆಗೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿಲ್ಲ. ಸಂಗ್ರಹಿಸಲಾದ 30,000 ಬಾಟಲ್ ಗಳ ಮುಕ್ತಾಯ ದಿನಾಂಕ ಮಾರ್ಚ್ ಆಗಿರುವುದರಿಂದ, ಮುಂಬರುವ ದಿನಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುವ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಹೇಳಿದರು. 

ಹೆಸರು ಹೇಳಲು ಇಚ್ಛಿಸದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, Corbevax  ಲಸಿಕೆ ಸೂಕ್ತವಾಗಿದೆ. ಇದನ್ನು ಪ್ರಾಥಮಿಕ ಲಸಿಕೆಯಾಗಿಯೂ ಬಳಸಬಹುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಆದಾಗ್ಯೂ, ರಾಜ್ಯದಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಇದನ್ನು ಶೇಕಡಾ 23ರಿಂದ 25ರಷ್ಟು ಜನಸಂಖ್ಯೆಗೆ ಸೀಮಿತಗೊಳಿಸುತ್ತಿದೆ ಎಂದರು. 

ಇದನ್ನು ಫ್ಲೂ ಲಸಿಕೆಯಾಗಿಯೂ ಬಳಸಬಹುದು. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಟ್ಟುನಿಟ್ಟಾದ ವೈದ್ಯರ ಮೇಲ್ವಿಚಾರಣೆಯಲ್ಲಿ ನೀಡುವುದು ಸುರಕ್ಷಿತವಾಗಿದೆ. ಇದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದಿತ ಲಸಿಕೆಯಾಗಿದೆ. ಆದರೆ ಇದೆಲ್ಲದರ ಹೊರತಾಗಿಯೂ, ರಾಷ್ಟ್ರೀಯ ಪ್ರತಿರಕ್ಷಣಾ ತಾಂತ್ರಿಕ ಸಲಹಾ ಗುಂಪು (NITG) ನಿರ್ಬಂಧಗಳನ್ನು ವಿಧಿಸಿದೆ. ಇದರ ಪ್ರತ್ಯಕ್ಷ ಮಾರಾಟವನ್ನೂ ನಿಲ್ಲಿಸಲಾಗಿದೆ. ಈ ಲಸಿಕೆಯನ್ನು ಎಲ್ಲರಿಗೂ ಪ್ರಾಥಮಿಕ ಲಸಿಕೆಯಾಗಿ ನೀಡಬಹುದು. ಇದು ಭಿನ್ನಜಾತಿಯ ಬೂಸ್ಟರ್ ಕೂಡ ಆಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿದರು.

ರಾಜ್ಯದಲ್ಲಿ ನಾಲ್ಕು ಹೊಸ ಕೋವಿಡ್ ಸಾವುಗಳು: ಕರ್ನಾಟಕದಲ್ಲಿ ಕೋವಿಡ್ -19 ನಿಂದ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಎರಡು, ಮೈಸೂರು ಮತ್ತು ಧಾರವಾಡದಲ್ಲಿ ತಲಾ ಒಂದು - ಮತ್ತು ನಿನ್ನೆ ಗುರುವಾರ 298 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 1,240 ಆಗಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 30 ಮತ್ತು ಜನವರಿ 1 ರಂದು ಕ್ರಮವಾಗಿ 82 ವರ್ಷದ ವ್ಯಕ್ತಿ ಮತ್ತು 64 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಜನವರಿ 3ರಂದು 60 ವರ್ಷದ ಮಹಿಳೆ ಮೃತಪಟ್ಟರೆ, 63 ವರ್ಷದ ವ್ಯಕ್ತಿ ಜನವರಿ 2 ರಂದು ಧಾರವಾಡದಲ್ಲಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com