ಮಂದಿರ ಕೆಡವಿ ಕಟ್ಟಲಾಗಿರುವ ಮಸೀದಿಗಳನ್ನು ನೀವೇ ಕೆಡವಿ, ಇಲ್ಲದಿದ್ದರೆ ಹಿಂದೂಗಳೇ ಕೆಡವುತಾರೆ: ಮುಸ್ಲಿಂರಿಗೆ ಈಶ್ವರಪ್ಪ
ಬೆಳಗಾವಿ: ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಇಂದು ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೇ ಜನವರಿ 22ರಂದು ರಾಮನ ಪ್ರಾಣ ಪ್ರತಿಷ್ಠಾಪನೆಯೂ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಮಾಡಿದ ಕೆಎಸ್ ಈಶ್ವರಪ್ಪ, ದೇವಸ್ಥಾನಗಳಲ್ಲಿ ಹಿಂದೂಗಳ ಜೀವವಿದೆ ಎಂದು ಮುಸ್ಲಿಂ ದೊರೆಗಳಿಗೆ ಗೊತ್ತಿತ್ತು. ಹೀಗಾಗಿ ಮಂದಿರಗಳನ್ನು ಕೆಡವಿದರೆ ಭಾರತ ನಮ್ಮದಾಗುತ್ತೆಂದು ಮುಸ್ಲಿಂ ದೊರೆಗಳು ಭಾವಿಸಿದ್ದರು. ಕಾಶಿ ವಿಶ್ವನಾಥನ ದೇವಸ್ಥಾನ ಮಥುರ ದೇವಸ್ಥಾನಗಳನ್ನು ಅರ್ಧ ಕೆಡವಿ ಮಸೀದಿ ನಿರ್ಮಿಸಿದ್ದರು.
ಇದನ್ನೂ ಓದಿ: ಕಡೆಗೂ ರಾಮಭಕ್ತಿಗೆ ಶರಣಾದ ಕಾಂಗ್ರೆಸ್ ಸರ್ಕಾರ!
ರಾಮ ಜನಿಸಿದ್ದ ಜಾಗದಲ್ಲೇ ಇಂದು ಭವ್ಯ ರಾಮಮಂದಿರವನ್ನು ಕಟ್ಟುತ್ತಿದ್ದೇವೆ. ಇನ್ನೆರಡು ದೇವಸ್ಥಾನಕ್ಕೆ ಕೋರ್ಟ್ ಆದೇಶಿಸಿದೆ. ಇನ್ನೊಂದು ವರ್ಷದಲ್ಲಿ ಮಥುರಾ, ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿ ಧ್ವಂಸವಾಗುತ್ತದೆ. ಆ ಜಾಗದಲ್ಲಿ ದೇವಸ್ಥಾನವನ್ನು ಕಟ್ಟುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಹಿಂದೂ, ಮುಸ್ಲಿಂರು ಸಹೋದರರಂತೆ ಇರಬೇಕು ಎಂಬುದು ನಮ್ಮ ಆಸೆ. ಹೀಗಾಗಿ ಎಲ್ಲೆಲ್ಲಿ ದೇವಸ್ಥಾನ ಕೆಡವಿ ಮಸೀದಿ ಕಟ್ಟಲಾಗಿದೆಯೋ ಅದನ್ನು ನೀವೆ ಕಿತ್ತು ಹಾಕಿ. ಇಲ್ಲವಾದರೆ ರಾಮಭಕ್ತರೆಲ್ಲರೂ ನಿಮ್ಮೆಲ್ಲಾ ಮಸೀದಿಗಳನ್ನು ಕಿತ್ತುಹಾಕುತ್ತಾರೆ. ಅಲ್ಲಿ ಮಂದಿರ ಕಟ್ಟೇ ಕಟ್ಟುತ್ತೇವೆ ಎಂದು ದೇಶದಲ್ಲಿ ಇರುವ ಮುಸಲ್ಮಾನರಿಗೆ ಹೇಳಲು ಇಷ್ಟ ಪಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ