ಕೊಪ್ಪಳ: ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ದಂಪತಿಯಿಂದ ಭ್ರೂಣ ಹತ್ಯೆ ವಿರೋಧಿ ಅಭಿಯಾನ, ವ್ಯಾಪಕ ಮೆಚ್ಚುಗೆ

ದಂಪತಿ ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಅಭಿಯಾನ ನಡೆಸಿದ ಫೋಟೋ ವೀಡಿಯೊಗಳು ವೈರಲ್ ಆಗಿದ್ದು, ಅವರ ಪ್ರಯತ್ನ ವ್ಯಾಪಕ ಮೆಚ್ಚುಗೆ ಪಡೆದಿದೆ.
ಸೀಮಂತ ಕಾರ್ಯಕ್ರಮದ ಚಿತ್ರ
ಸೀಮಂತ ಕಾರ್ಯಕ್ರಮದ ಚಿತ್ರ

ಕೊಪ್ಪಳ: ದಂಪತಿ ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಅಭಿಯಾನ ನಡೆಸಿದ ಫೋಟೋ ವೀಡಿಯೊಗಳು ವೈರಲ್ ಆಗಿದ್ದು, ಅವರ ಪ್ರಯತ್ನ ವ್ಯಾಪಕ ಮೆಚ್ಚುಗೆ ಪಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ ಮತ್ತು ಅವರ ಪತ್ನಿ ರೇಖಾ ಜಿಗೇರಿ ದಂಪತಿ ತಮ್ಮ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಸಂದರ್ಭದಲ್ಲಿ ಭ್ರೂಣ ಹತ್ಯೆಯ ವಿರುದ್ಧ ಪೋಸ್ಟರ್‌ಗಳನ್ನು ಹಾಕಿ ಸ್ನೇಹಿತರು ಮತ್ತು ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಿದರು.

ಭ್ರೂಣಹತ್ಯೆ ಅತ್ಯಂತ ಕೆಟ್ಟ ಅಪರಾಧ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಉತ್ತರ ಕರ್ನಾಟಕ ಪ್ರದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯ ಈ ದಂಪತಿ ಕಾರ್ಯಕ್ರಮ ಆ ಪ್ರದೇಶದ ಕಾರ್ಯಕರ್ತರು ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚೆಗೆ, ಕರ್ನಾಟಕ ಪೊಲೀಸರು ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ ಭ್ರೂಣ ಹತ್ಯೆ ಪ್ರಕರಣವನ್ನು ಭೇದಿಸಿದ್ದು, ಆರೋಪಿಗಳು ಇದುವರೆಗೆ 3,000 ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. 

ಆರೋಪಿಗಳು ಇದುವರೆಗೆ 3 ಗರ್ಭಪಾತ ಮಾಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ 242 ಹೆಣ್ಣು ಭ್ರೂಣಗಳನ್ನು ಕೊಲ್ಲಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದರು. ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com