ಬೆಂಗಳೂರು ಮೆಟ್ರೊದ ಗ್ರೀನ್ ಲೈನ್ ವಿಸ್ತರಣೆ ಜುಲೈ ವೇಳೆಗೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ

ಬೆಂಗಳೂರಿನ ನಾಗಸಂದ್ರದಿಂದ ಮಾದಾವರದವರೆಗೆ 3.3 ಕಿ.ಮೀ ಉದ್ದದ ಮೆಟ್ರೊದ ಹಸಿರು ಮಾರ್ಗದ ವಿಳಂಬಗೊಂಡ ಉತ್ತರ ವಿಸ್ತರಣೆ ಕೆಲಸ ಜುಲೈ ವೇಳೆಗೆ ಪೂರ್ಣಗೊಂಡು ಸಾರ್ವಜನಿಕ ಕಾರ್ಯಾಚರಣೆಗೆ ಮುಕ್ತವಾಗುವ ಸಾಧ್ಯತೆಯಿದೆ. ಇಷ್ಟು ಕಿರು ವಿಸ್ತರಣೆಗೆ ಹಲವು ಸಮಸ್ಯೆಗಳು ಎದುರಾದವು. 
ಚಿಕ್ಕಬಿದಿರಕಲ್ಲಿನ ಗ್ರೀನ್ ಲೈನ್ ಮೆಟ್ರೊ ನಿಲ್ದಾಣ
ಚಿಕ್ಕಬಿದಿರಕಲ್ಲಿನ ಗ್ರೀನ್ ಲೈನ್ ಮೆಟ್ರೊ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ನಾಗಸಂದ್ರದಿಂದ ಮಾದಾವರದವರೆಗೆ 3.3 ಕಿ.ಮೀ ಉದ್ದದ ಮೆಟ್ರೊದ ಹಸಿರು ಮಾರ್ಗದ ವಿಳಂಬಗೊಂಡ ಉತ್ತರ ವಿಸ್ತರಣೆ ಕೆಲಸ ಜುಲೈ ವೇಳೆಗೆ ಪೂರ್ಣಗೊಂಡು ಸಾರ್ವಜನಿಕ ಕಾರ್ಯಾಚರಣೆಗೆ ಮುಕ್ತವಾಗುವ ಸಾಧ್ಯತೆಯಿದೆ. ಇಷ್ಟು ಕಿರು ವಿಸ್ತರಣೆಗೆ ಹಲವು ಸಮಸ್ಯೆಗಳು ಎದುರಾದವು. 

298 ಕೋಟಿ ರೂಪಾಯಿ ವೆಚ್ಚದ ಮೆಟ್ರೋ ಮಾರ್ಗವು ನಾಗಸಂದ್ರದ ಆಚೆಗೆ ಮೂರು ಎತ್ತರದ ನಿಲ್ದಾಣಗಳನ್ನು ಹೊಂದಿದೆ - ಮಂಜುನಾಥ್ ನಗರ, ಚಿಕ್ಕಬಿದರಕಲ್ಲು (ಹಿಂದೆ ಜಿಂದಾಲ್ ನಗರ) ಮತ್ತು ಮಾದಾವರ (BIEC)ವಾಗಿದೆ. ಸಿಎಂ ಇತ್ತೀಚೆಗೆ ಮುಂದಿನ ಏಪ್ರಿಲ್ ನೊಳಗೆ ಕೆಲಸ ಮುಗಿಸಬೇಕೆಂದು ಗಡುವು ನೀಡಿದ್ದರು. ಜೂನ್ 9, 2017 ರಂದು ಕೆಲಸ ಪ್ರಾರಂಭವಾಗಿದ್ದು, ಆಗಸ್ಟ್ 2019 ರ ವೇಳೆಗೆ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಇಷ್ಟು ಸುದೀರ್ಘ ಸಮಯ ತೆಗೆದುಕೊಂಡಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡುತ್ತಾ, ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದೆ, ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸುವ ಕೆಲಸಗಳು ಮಾತ್ರ ಇವೆ. ಟ್ರ್ಯಾಕ್‌ ಹಾಕುವ ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ತಿಂಗಳು ಬೇಕಾಗಲಿದ್ದು, ಈ ವರ್ಷ ಜುಲೈ ವೇಳೆಗೆ ಲೈನ್‌ ಸಂಪೂರ್ಣ ಕಾರ್ಯಾರಂಭ ಮಾಡಲಿದೆ. ರೈಲುಗಳ ಪ್ರಾಯೋಗಿಕ ಓಡಾಟ ಮತ್ತು ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ತಪಾಸಣೆ ಕೂಡ ನಡೆಯಲಿದೆ ಎಂದರು. 

ಈಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದ ಅಧಿಕಾರಿ, ಅಂಚೆಪಾಳ್ಯ ಗ್ರಾಮದ ನಿವಾಸಿಗಳು ಚಿಕ್ಕಬಿದಿರಕಲ್ಲು ಮತ್ತು ಮಾದಾವರ ನಡುವೆ ಮೆಟ್ರೊ ನಿಲ್ದಾಣಕ್ಕಾಗಿ ಒತ್ತಾಯಿಸುತ್ತಿದ್ದರು. ಗ್ರಾಮಸ್ಥರ ಪ್ರತಿಭಟನೆ ಮತ್ತು ಶೇಕಡಾ 80ರಷ್ಟು ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದರಿಂದ ತಿಂಗಳುಗಟ್ಟಲೆ ಕಾಮಗಾರಿ ಸ್ಥಗಿತಗೊಂಡಿದೆ. ಸಂಧಾನ ಬಳಿಕ, ಬಿಎಂಆರ್ ಸಿಎಲ್ ಗ್ರಾಮದೊಳಗೆ ರಸ್ತೆಗಳನ್ನು ನಿರ್ಮಿಸಿ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಿತು.

ಇದರ ನಂತರ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್‌ನೊಂದಿಗಿನ ಲೈನ್‌ನ ಒಪ್ಪಂದವನ್ನು ರದ್ದುಗೊಳಿಸಲಾಯಿತು.ಗುತ್ತಿಗೆದಾರರು ಈಗಾಗಲೇ ಕಾಳೇನ ಅಗ್ರಹಾರ ಮತ್ತು ತಾವರಕೆರೆ (ಸ್ವಾಗತ ರಸ್ತೆ) ಮಾರ್ಗದ ಕಾಮಗಾರಿಗಳನ್ನು ನಡೆಸುತ್ತಿದ್ದು, ಜನವರಿ 2021 ರಲ್ಲಿ ಮುಕ್ತಾಯಗೊಳಿಸಲಾಯಿತು ಎಂದು ಹೇಳಿದರು. 

ಕೋವಿಡ್ ಸಾಂಕ್ರಾಮಿಕದಿಂದಾಗಿ ಸ್ವಲ್ಪ ಕೆಲಸ ವಿಳಂಬವಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ನೈಸ್ ರಸ್ತೆಯ ಮೇಲೆ ಹಾದು ಹೋಗುವ ವಯಡಕ್ಟ್ ಸಮಸ್ಯೆ ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಬಿಎಂಆರ್‌ಸಿಎಲ್ ಅಂತಿಮವಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್‌ಗೆ ಆಗಸ್ಟ್ 2023 ರಲ್ಲಿ 67.65 ಲಕ್ಷ ರೂಪಾಯಿಗಳನ್ನು ರಸ್ತೆಯ ಮೇಲೆ ವಯಡಕ್ಟ್ ನಿರ್ಮಿಸಿದಾಗ ಟೋಲ್ ಗೇಟ್‌ನಿಂದ ಉಂಟಾದ ನಷ್ಟಕ್ಕೆ ಪಾವತಿಸಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com