2023 ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆ 37.2 ಮಿಲಿಯನ್

2023 ರಲ್ಲಿ(ಜನವರಿ-ಡಿಸೆಂಬರ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದೆ 37.2 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದದು, ಇದು 2022 ಕ್ಕಿಂತ ಶೇ. 35.3 ರಷ್ಟು ಹೆಚ್ಚಳವಾಗಿದೆ. 
ಕೇಂಪೇಗೌಡ ಇಂಟರ್ನಾಷನಲ್ ಏರ್ ಪೋರ್ಟ್
ಕೇಂಪೇಗೌಡ ಇಂಟರ್ನಾಷನಲ್ ಏರ್ ಪೋರ್ಟ್
Updated on

ಬೆಂಗಳೂರು: 2023 ರಲ್ಲಿ(ಜನವರಿ-ಡಿಸೆಂಬರ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದೆ 37.2 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದದು, ಇದು 2022 ಕ್ಕಿಂತ ಶೇ. 35.3 ರಷ್ಟು ಹೆಚ್ಚಳವಾಗಿದೆ. 

ಇನ್ನು ಸರಕು ಸಾಗಣೆಯಲ್ಲೂ ಮುಂದಿರುವ ಬೆಂಗಳೂರು ವಿಮಾನ ನಿಲ್ಲಾಣ 2023 ರಲ್ಲಿ 53,751 ಮೆಟ್ರಿಕ್ ಟನ್‌ನೊಂದಿಗೆ ಸತತ ಮೂರನೇ ವರ್ಷವೂ ಬಿಎಲ್ ಆರ್ ಕಾರ್ಗೋ ವಿಭಾಗ ಮೊದಲ ಸ್ಥಾನದಲ್ಲಿದೆ.

"2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಲ್ಲಿ ಗಣನೀಯ ಏರಿಕೆಯಾಗಿದ್ದು, ಒಟ್ಟು 37.2 ಮಿಲಿಯನ್ ಪ್ರಯಾಣಿಕರನ್ನು ಸ್ವಾಗತಿಸಿದೆ. ಅದರಲ್ಲಿ 32.7 ಮಿಲಿಯನ್ ದೇಶೀಯ ಪ್ರಯಾಣಿಕರು ಮತ್ತು 4.5 ಮಿಲಿಯನ್ ಅಂತರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ಇನ್ನು ಏಪ್ರಿಲ್ 29, 2023 ರ ಒಂದೇ ದಿನ 1 ಲಕ್ಷ 16 ಸಾವಿರದ 688 ಜನ ಪ್ರಯಾಣಿಕರು ಕೆಂಪೇಗೌಡ ಏರ್ಪೋಟ್ ನಿಂದ ಪ್ರಯಾಣಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ದುಬೈ, ಸಿಂಗಾಪುರ್ ಮತ್ತು ದೋಹಾ ಅಂತರಾಷ್ಟ್ರೀಯ ಪ್ರಯಾಣಿಕರು ಆಯ್ಕೆಮಾಡಿದ ಪ್ರಮುಖ ಸ್ಥಳಗಳಾಗಿದ್ದು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಪ್ರಮುಖ ದೇಶೀಯ ಮಾರ್ಗಗಳಾಗಿವೆ.

ಸೆಪ್ಟೆಂಬರ್ 2023 ರಲ್ಲಿ, KIA ತನ್ನ ಸಂಪೂರ್ಣ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಟ್ರಮಿನಲ್ 1 ರಿಂದ ಟ್ರಮಿನಲ್ 2 ಗೆ ಬದಲಾಯಿಸುವ ಮೂಲಕ ನಿರ್ಣಾಯಕ ಮೈಲಿಗಲ್ಲು ಸಾಧಿಸಿತು. 

2023ನೇ ಸಾಲಿನಲ್ಲಿ ಕಡಿಮೆಯಾದ ಪ್ರಯಾಣದ ಮಿತಿಗಳು, ಸುಧಾರಿತ ಆರ್ಥಿಕ ಪರಿಸ್ಥಿತಿಗಳು ಮತ್ತು ವ್ಯಾಪಾರ ಪ್ರಯಾಣಕ್ಕಾಗಿ ಹೆಚ್ಚಿದ ಬೇಡಿಕೆಯಿಂದ ಕಳೆದ ಸಾಲಿನಲ್ಲಿ ಪ್ರಯಾಣದ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಮಾರ್ಚ್ 17, 2023 ರಂದು ಅತ್ಯಧಿಕ ಸಂಖ್ಯೆಯ ಏರ್ ಟ್ರಾಫಿಕ್ ಮೂಮೆಂಟ್‌ (ಎಟಿಎಂ) ಕಂಡು ಬಂದಿದ್ದು ಒಂದೇ ದಿನದಲ್ಲಿ ಬರೋಬ್ಬರಿ 748 ಎಟಿಎಂ ನನ್ನು ತಲುಪಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com