ಮುರುಡೇಶ್ವರ ಸಮುದ್ರದಲ್ಲಿ 'ಕಿಲ್ಲರ್' ತಿಮಿಂಗಲಗಳು ಗೋಚರ!

ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ.
ಓರ್ಕಾ ತಿಮಿಂಗಿಲ
ಓರ್ಕಾ ತಿಮಿಂಗಿಲ

ಉತ್ತರ ಕನ್ನಡ: ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ.

ಪ್ರವಾಸಿಗರು ಬೋಟಿನಲ್ಲಿ ಸ್ಕೂಬಾ ಡೈವಿಂಗ್ ಮಾಡಲು ಸಾಗುತ್ತಿದ್ದಾಗ ವೇಳೆ ತಿಮಿಂಗಿಲಗಳು ಕಾಣಿಸಿಕೊಂಡಿವೆ. ಹತ್ತಿರದಲ್ಲೇ ತಿಮಿಂಗಿಲಗಳು ಒಂದರ ಹಿಂದೆ ಒಂದು ಸಾಗುವುದು ಕಂಡು ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.

ಇನ್ನು ಕೆಲವರು ತಿಮಿಂಗಿಲಗಳು ದೂರ ಹೋದದ್ದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ. ಸ್ಕೂಬಾ ಡೈವ್ ಸಿಬ್ಬಂದಿ ತಿಮಿಂಗಿಲಗಳು ಓಡಾಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಭಟ್ಕಳದ ಬಳಿ ಬಲೀನ್ ತಿಮಿಂಗಿಲ ಕಾಣಿಸಿಕೊಂಡ ಎರಡು ವರ್ಷಗಳ ನಂತರ ಅಪರೂಪದ ದೃಶ್ಯ ಕಂಡುಬಂದಿದೆ.  ಓರ್ಕಾ ತಿಮಿಂಗಿಲಗಳು ಒಂಟಿಯಾಗಿ ಅಥವಾ ಗುಂಪುಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು  ಸ್ಥಳೀಯ ನಿವಾಸಿಗಳು ಹೇಳುತ್ತಿದ್ದರೂ, ಪಶ್ಚಿಮ ಕರಾವಳಿಯಲ್ಲಿ ಈ ತಿಮಿಂಗಿಲಗಳು ವಾರ್ಷಿಕವಾಗಿ ಕಾಣಿಸಿಕೊಳ್ಳುತ್ತವೆ.

ಮೂರು ತಿಮಿಂಗಿಲಗಳು ಇದ್ದವು ಮತ್ತು ಅವು ಅರ್ಧ ಗಂಟೆಗೂ ಹೆಚ್ಚು ಕಾಲ ದೋಣಿಯ ಸುತ್ತಲೂ ಇದ್ದವು ಎಂದು ನೇತ್ರಾಣಿ ಅಡ್ವೆಂಚರ್ ಕ್ಲಬ್ ನಿರ್ವಹಿಸುವ ಗಣೇಶ ಹರಿಕಂತ್ರ ಹೇಳಿದ್ದಾರೆ. ಇದೊಂದು ವಾರ್ಷಿಕ ವಿದ್ಯಮಾನವಾಗಿದೆ ಮತ್ತು ಈ ತಿಮಿಂಗಿಲಗಳು ಪ್ರತಿ ವರ್ಷವೂ ಗೋಚರಿಸುತ್ತವೆ ಎಂದು  ಸೆಟಾಸಿಯನ್ ಜೀವಶಾಸ್ತ್ರಜ್ಞ, ಸದಸ್ಯ ದಿಪಾನಿ ಸುತಾರಿಯಾ ತಿಳಿಸಿದ್ದಾರೆ.

ತಿಮಿಂಗಲಗಳು ತಮ್ಮ ವಲಸೆ ಮಾರ್ಗದಲ್ಲಿ ಅಥವಾ ದಕ್ಷಿಣ ಬಂಗಾಳ ಕೊಲ್ಲಿ ಮತ್ತು ಪಶ್ಚಿಮ ಅರೇಬಿಯನ್ ಸಮುದ್ರದ ನಡುವಿನ ಚಲನೆಯಲ್ಲಿರುತ್ತವೆ. ಅವುಗಳು ಕಳೆದ ವರ್ಷ ಮಾರ್ಚ್ ಮತ್ತು ಡಿಸೆಂಬರ್ ಆರಂಭದಲ್ಲಿ ಮತ್ತು 2022 ರ ಅಕ್ಟೋಬರ್‌ನಲ್ಲಿ ಕಾಣಿಸಿಕೊಂಡಿದ್ದವು. ಅವು ದಕ್ಷಿಣ ಮಹಾರಾಷ್ಟ್ರ, ಮಂಗಳೂರು, ಉಡುಪಿ, ಲಕ್ಷದ್ವೀಪ, ಮಿನಿಕಾಯ್ ಮತ್ತು ಈಗ ಮುರುಡೇಶ್ವರದ ಬಳಿ ಕಾಣಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಾಗರ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಹರಗಿ ಮಾತನಾಡಿ, ತಿಮಿಂಗಿಲಗಳು ಉತ್ತರದ ಕಡೆಗೆ ಚಲಿಸುತ್ತಿದ್ದು, ಮುರ್ಡೇಶ್ವರದ ಬಳಿ ಮೊದಲ ಬಾರಿಗೆ ಕಾಣಿಸಿಕೊಂಡಿವೆ ಎಂದಿದ್ದಾರೆ.

ಈ ತಿಮಿಂಗಿಲಗಳನ್ನು ಕೊಲೆಗಾರ ತಿಮಿಂಗಿಲಗಳು ಎಂದೂ ಕರೆಯಲ್ಪಡುತ್ತವೆ,  ಇವು ಆಕ್ರಮಣಕಾರಿಯಾಗಿರುತ್ತವೆ. ಅವು ಸಮುದ್ರದಲ್ಲಿ ಪ್ರಾಥಮಿಕ ಭಕ್ಷಕಗಳಾಗಿವೆ, ಆಮೆಗಳು, ಡಾಲ್ಫಿನ್‌ಗಳು, ಸೀಲ್‌ಗಳು ಮತ್ತು ಶಾರ್ಕ್‌ಗಳು ಸೇರಿದಂತೆ 30 ಜಾತಿಯ ಸಮುದ್ರ ಪ್ರಾಣಿಗಳನ್ನು ಸೇವಿಸುತ್ತವೆ. ಅದಕ್ಕೆ ಹೆದರಬೇಕಾದ ಅವಶ್ಯಕತೆಯಿಲ್ಲ. ಆದರೆ ಕೊಲೆಗಾರ ತಿಮಿಂಗಿಲಗಳು ಮನುಷ್ಯರ ಮೇಲೆ ದಾಳಿ ಮಾಡಿದ ಯಾವುದೇ ನಿದರ್ಶನಗಳಿಲ್ಲ ಎಂದು ಅವರು ಹೇಳಿದರು.

ಕೆಲವು ಪ್ರವಾಸಿಗರು ನೇತ್ರಾಣಿ ಬಳಿ ತಿಮಿಂಗಿಲಗಳು ಇರುವಾಗ ಡೈವಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ,  ಆದರೆ ಗಣೇಶ್ ಈ ದೃಶ್ಯವು ಪ್ರವಾಸೋದ್ಯಮಕ್ಕೆ ಒಳ್ಳೆಯದು ಎಂದು ಹೇಳಿದರು. ನಿನ್ನೆ, ಜನರು ತಿಮಿಂಗಲಗಳ ವೀಕ್ಷಣೆಯ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆಂದು ನಾವು ಕಂಡುಕೊಂಡಿದ್ದೇವೆ. ತಿಮಿಂಗಿಲಗಳು ತಮ್ಮ ಮೂಗಿನ ಹೊಳ್ಳೆಗಳ ಮೂಲಕ ನೀರನ್ನು ಚಿಮ್ಮಿಸಿದಾಗ ಅವರು ಚಪ್ಪಾಳೆ ತಟ್ಟಿ ಸಂತಸಪಟ್ಟರು. ಈ ತಿಮಿಂಗಿಲಗಳು ನಿಖರವಾಗಿ ನೇತ್ರಾಣಿಯಲ್ಲಿ ಕಂಡುಬಂದಿಲ್ಲ, ಆದರೆ ನೇತ್ರಾಣಿಗೆ ಹೋಗುವ ಮಾರ್ಗದಲ್ಲಿ ಕಂಡುಬಂದಿವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com