ವಿದ್ಯುತ್ ಶಾಕ್-ಬಾಲಕ ಸಾವು
ವಿದ್ಯುತ್ ಶಾಕ್-ಬಾಲಕ ಸಾವು

ಬೆಂಗಳೂರು: ಚಿಂದಿ ಆಯುವ ಬಾಲಕನಿಗೆ ಕರೆಂಟ್ ಶಾಕ್

ವಿದ್ಯುತ್ ಶಾಕ್ ಹೊಡೆದು ಚಿಂದಿ ಆಯುವ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ವಿದ್ಯುತ್ ಶಾಕ್ ಹೊಡೆದು ಚಿಂದಿ ಆಯುವ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆದಿದೆ.

8 ವರ್ಷದ ನಾಗೇಂದ್ರ ಮೃತ ಬಾಲಕ. ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವೇ ಈ ದುರಂತ ಸಂಭವಿಸಿದೆ. ಚಿಂದಿ ಆಯುವ ಬಾಲಕ ರಸ್ತೆ ದಾಟುತ್ತಿದ್ದ ವೇಳೆ ಟ್ರಾನ್ಸ್ ಫಾರ್ಮರ್ ಗ್ರೌಂಡಿಂಗ್ ವೈಯರ್ ತಗುಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟ್ರಾನ್ಸ್ ಫಾರ್ಮರ್ ಗೆ ವೈರ್ ಗೆ ಸಿಲುಕಿದ್ದ ಹಗ್ಗ ಎಳೆಯಲು ಪ್ರಯತ್ನಿಸಿ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅಧಿಕಾರಿಗಳ ಪ್ರಕಾರ, ನಾಗೇಂದ್ರ ವೈರ್ ಎಳೆದಾಗ ಅದು ಎಲ್ ಟಿ ಸರ್ಕ್ಯೂಟ್ ಗೆ ತಗುಲಿ ವಿದ್ಯುತ್ ಸ್ಪರ್ಶವಾಗಿದೆ. ಈ ಪ್ರಕರಣದಲ್ಲಿ ಬೆಸ್ಕಾಂನ ಯಾವುದೇ ತಪ್ಪಿಲ್ಲ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತದ ಕುರಿತು ವಿದ್ಯುತ್ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು. ಅಪಘಾತ ಸ್ಥಳದ ಬಳಿ ಚಿಕ್ಕಬಳ್ಳಾಪುರ-ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಚರಂಡಿ ಹಾಗೂ ಇತರೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬೆಸ್ಕಾಂ ತಿಳಿಸಿದೆ.

X

Advertisement

X
Kannada Prabha
www.kannadaprabha.com