ವರ್ಚುವಲ್‌ ಮೂಲಕ ರಾಜ್ಯದ 530 ಪಾರಂಪರಿಕ ತಾಣಗಳ ಪ್ರದರ್ಶನ

ರಾಜ್ಯ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಲಿದ್ದು, ವರ್ಚುವಲ್‌ ಮೂಲಕ 530 ಪಾರಂಪರಿಕ ತಾಣಗಳನ್ನು ಪ್ರದರ್ಶಿಸಲಿದೆ.
ಸಚಿವ ಎಚ್‌ಕೆ ಪಾಟೀಲ್‌ ಜೀರ್ಣೋದ್ಧಾರದ  ಶಂಕುಸ್ಥಾಪನೆ ನೆರವೇರಿಸಿದರು.
ಸಚಿವ ಎಚ್‌ಕೆ ಪಾಟೀಲ್‌ ಜೀರ್ಣೋದ್ಧಾರದ  ಶಂಕುಸ್ಥಾಪನೆ ನೆರವೇರಿಸಿದರು.

ಬೆಂಗಳೂರು: ರಾಜ್ಯ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಲಿದ್ದು, ವರ್ಚುವಲ್‌ ಮೂಲಕ 530 ಪಾರಂಪರಿಕ ತಾಣಗಳನ್ನು ಪ್ರದರ್ಶಿಸಲಿದೆ.

ನಗರದ ನಾಗರಭಾವಿಯಲ್ಲಿರುವ ಪಾರಂಪರಿಕ ಜ್ಞಾನ ಕೇಂದ್ರದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರ ಸಂಶೋಧನಾ ಪ್ರಯೋಗಾಲಯ, ಸಂಗ್ರಹ ಕೇಂದ್ರ, ಕಲೆ ಮತ್ತು ಪಾರಂಪರಿಕ ಕೃತಿಗಳ ರಕ್ಷಣಾ ಕೇಂದ್ರವನ್ನು ಹೊಂದಿರುತ್ತದೆ. ಬಿಡಿಎ ಈ ಕೇಂದ್ರಕ್ಕೆ ಒಂದು ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಪುರಾತತ್ವ ಇಲಾಖೆ ಆಯುಕ್ತ ದೇವರಾಜು ಎ ಅವರು ತಿಳಿಸಿದ್ದಾರೆ.

ವೆಂಕಟಪ್ಪ ಆರ್ಟ್ ಗ್ಯಾಲರಿ(ವಿಎಜಿ) ಜೀರ್ಣೋದ್ಧಾರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾಲರಿಯನ್ನು ಪ್ರವಾಸೋದ್ಯಮ ಇಲಾಖೆ, DAMH ಮತ್ತು ಬ್ರಿಗೇಡ್ ಫೌಂಡೇಶನ್ ಆರ್ಕಿಟೆಕ್ಚರ್ ಸಹಯೋಗದೊಂದಿಗೆ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದರು. 

ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್‌ ಜೀರ್ಣೋದ್ಧಾರದ  ಶಂಕುಸ್ಥಾಪನೆ ನೆರವೇರಿಸಿದರು.

530 ಪಾರಂಪರಿಕ ತಾಣಗಳು ಮತ್ತು ಸ್ಥಳಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆದರೆ ಇನ್ನೂ ಪ್ರಕಟಿಸಿಲ್ಲ. ಎಲ್ಲಾ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ಸೇರಿಸಲು ವೆಬ್‌ಸೈಟ್ ಅನ್ನು ನವೀಕರಿಸಲಾಗುತ್ತಿದೆ ಎಂದರು.

ದಸರಾ ವೇಳೆಗೆ ವಿಎಜಿಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸುವುದಾಗಿ ಬ್ರಿಗೇಡ್ ಗ್ರೂಪ್ ಭರವಸೆ ನೀಡಿದೆ ಎಂದು ಎಂದು ಸಚಿವ ಎಚ್ ಕೆ ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com