ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ 3.38 ಲಕ್ಷ ರೂ. ಕಳೆದುಕೊಂಡ ಫೈನಾನ್ಸ್ ಅನಾಲಿಸ್ಟ್!

ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣದಲ್ಲಿ, 41 ವರ್ಷದ ಫೈನಾನ್ಸ್ ಅನಾಲಿಸ್ಟ್ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಹೋಗಿ 3.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸಗೊಳಗಾದವರು ದೇಬಾಶಿಶ್ ಬಯೆನ್ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣದಲ್ಲಿ, 41 ವರ್ಷದ ಫೈನಾನ್ಸ್ ಅನಾಲಿಸ್ಟ್ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಹೋಗಿ 3.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸಗೊಳಗಾದವರು ದೇಬಾಶಿಶ್ ಬಯೆನ್ ಎಂದು ಗುರುತಿಸಲಾಗಿದೆ.

ಕೋಲ್ಕತ್ತಾ ಮೂಲದ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ವಾಸಿಸುವ ಪ್ರೀಮಿಯರ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕೋಲ್ಕತ್ತಾ (IIMC)ಯಿಂದ ಸ್ನಾತಕೋತ್ತರ ಪದವೀಧರರಾಗಿರುವ ದೇಬಾಶಿಶ್ ಬಯೆನ್ ಭಾನುವಾರ ಎರಡು ವಹಿವಾಟುಗಳಲ್ಲಿ ತನ್ನ ಹಣವನ್ನು ಕಳೆದುಕೊಂಡಿದ್ದಾರೆ. 

ಕೊತ್ತನೂರಿನ ಪ್ರತಿಷ್ಠಿತ ಮದ್ಯದ ಅಂಗಡಿಯ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಪ್ರಯತ್ನಿಸಿ ಸಿಕ್ಕ ನಂಬರ್‌ಗೆ ಸಂಪರ್ಕಿಸಿದಾಗ ವಾಟ್ಸ್‌ಆ್ಯಪ್‌ನಲ್ಲಿ ಖರೀದಿಸಿದ ವಿವರಗಳನ್ನು ಕಳುಹಿಸುವಂತೆ ಕೇಳಲಾಗಿತ್ತು. 4,065 ರೂಪಾಯಿಗಳ ಆರ್ಡರ್ ಮಾಡಿದ ನಂತರ, ಆರೋಪಿಯು ಪಾವತಿಯನ್ನು ಪ್ರಕ್ರಿಯೆಗೊಳಿಸಲು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳಿದ್ದಾರೆ. 

4,065 ಮೊತ್ತವನ್ನು ಡೆಬಿಟ್ ಮಾಡಲಾಗಿದೆ ಎಂದು ಸಂದೇಶ ಬಂದಿದೆ. ನಂತರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬಂದಿದೆ. ಬಯೆನ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ತಮ್ಮ ಸಿಸ್ಟಮ್‌ನಿಂದ ಹಂಚಿಕೊಳ್ಳುವಂತೆ ಕೇಳಲಾಗಿತ್ತು. ವಂಚನೆಯ ಬಗ್ಗೆ ಅರಿವಿಗೆ ಬಾರದೆ ಒಟಿಪಿಯನ್ನು ಬಯೆನ್ ಹಂಚಿಕೊಂಡಿದ್ದಾರೆ. ಆರೋಪಿಗಳು ತಕ್ಷಣವೇ 1,76,999 ರೂಪಾಯಿಗಳನ್ನು ಕಳುಹಿಸುವಂತೆ ಬಯೆನ್ ಗೆ ಹೇಳಿದ್ದಾರೆ. ಡೆಬಿಟ್ ಮಾಡಿದ ಹಣವನ್ನು ಮರುಪಾವತಿಸಲು ಮತ್ತೊಂದು ಒಟಿಪಿ ಕಳುಹಿಸಿದ್ದಾರೆ. ಮತ್ತೆ ಒಟಿಪಿಯನ್ನು ಹಂಚಿಕೊಂಡ ಆರೋಪಿಗಳು ಸಂತ್ರಸ್ತೆಯ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 3,38,063 ರೂಪಾಯಿ ಗಿಟ್ಟಿಸಿಕೊಂಡಿದ್ದಾರೆ. 

ನಾನು ಕೋಲ್ಕತ್ತಾ ಮೂಲದವನಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿದ್ದೇನೆ. ವಂಚಕರಿಗೆ ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದಾಗ, ಅವರು ಅದನ್ನು ದುರ್ಬಳಕೆ ಮಾಡಿಕೊಂಡರು. ಕೇವಲ ಎರಡು ವಹಿವಾಟುಗಳಲ್ಲಿ ಲಕ್ಷ|ಗಟ್ಟಲೆ ಕಳೆದುಕೊಂಡೆ. ಭಾನುವಾರ ಸಂಜೆ 5 ರಿಂದ 5.25 ರ ನಡುವೆ ವಹಿವಾಟು ನಡೆದಿದೆ. ನಾನು ಮೋಸ ಹೋಗಿದ್ದೇನೆ ಎಂದು ತಿಳಿದಾಗ, ನಾನು ಬ್ಯಾಂಕ್ ನ್ನು ಸಂಪರ್ಕಿಸಿ ನನ್ನ ಕಾರ್ಡ್ ನ್ನು ಬ್ಲಾಕ್ ಮಾಡಿಸಿದೆ. ನಾನು ಸೈಬರ್ ಪೋರ್ಟಲ್ ಮೂಲಕವೂ ದೂರು ಸಲ್ಲಿಸಿದ್ದೇನೆ ಎಂದು ಬಯೆನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com