ಉಚಿತ ವಿದ್ಯುತ್: ವಾರ್ಷಿಕ ಸರಾಸರಿ ಮೇಲೆ ಶೇ.10ರಷ್ಟು ಬದಲು 10 ಯುನಿಟ್‌ ನೀಡಲು ಸಂಪುಟ ತೀರ್ಮಾನ

ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ.10 ರಷ್ಟು ಉಚಿತ ವಿದ್ಯುತ್‌ ನೀಡುವ ಮಾನದಂಡವನ್ನು 10 ಯೂನಿಟ್‌ ಗೆ...
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ಬೆಂಗಳೂರು: ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ.10 ರಷ್ಟು ಉಚಿತ ವಿದ್ಯುತ್‌ ನೀಡುವ ಮಾನದಂಡವನ್ನು 10 ಯೂನಿಟ್‌ ಗೆ ಬದಲಾಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ ಅವರು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಅಂತಾ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ ಶೇ. 10 ರಷ್ಟು ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿದೆ. ಹೀಗಾಗಿ 48 ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ ಶೇ. 10 ರಷ್ಟು ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದರು.

ಮುಂದಿ‌ನ ತಿಂಗಳ ಬಿಲ್‌ನಿಂದಲೇ ಇದನ್ನು ಜಾರಿ ಮಾಡುತ್ತೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 500 ಕೋಟಿ ರೂಪಾಯಿ ಹೆಚ್ಚುವರಿ ಹಣ ಖರ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ.  ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆಯಿದೆ. ಶ್ಯೂರಿಟಿ ನೀಡಬೇಕೆಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ ಇದೀಗ 4450 ಕೋಟಿ ರೂ. ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ ಎಂದು ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com