ಹೆಸರಿಗೆ ಐಟಿ ರಾಜಧಾನಿ: ಅಪ್ ಡೇಟ್ ಆಗದ ಕರ್ನಾಟಕ ಸರ್ಕಾರದ ವೆಬ್ ಸೈಟ್ ಗಳು ಅಭಿವೃದ್ಧಿಯಲ್ಲಿ ಹಿಂದೆ!

ರಾಜಧಾನಿ ಬೆಂಗಳೂರು ಐಟಿ ರಾಜಧಾನಿ ಎಂಬ ಹೆಸರು ಪಡೆದಿದ್ದರೂ, ರಾಜ್ಯ ಸರ್ಕಾರದ ಇಲಾಖೆಗಳು ತಮ್ಮ ವೆಬ್‌ಸೈಟ್‌ಗಳನ್ನು ನವೀಕರಿಸಲು ಮತ್ತು ಬದಲಾವಣೆಗಳಿಗೆ ತಕ್ಕಂತೆ ಹೆಜ್ಜೆ ಹಾಕುವಲ್ಲಿ ವಿಫಲವಾಗಿದೆ. ಬಹುತೇಕ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಸಚಿವರ ಭಾವಚಿತ್ರವನ್ನು ಮಾತ್ರ ಬದಲಾಯಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಐಟಿ ರಾಜಧಾನಿ ಎಂಬ ಹೆಸರು ಪಡೆದಿದ್ದರೂ, ರಾಜ್ಯ ಸರ್ಕಾರದ ಇಲಾಖೆಗಳು ತಮ್ಮ ವೆಬ್‌ಸೈಟ್‌ಗಳನ್ನು ನವೀಕರಿಸಲು ಮತ್ತು ಬದಲಾವಣೆಗಳಿಗೆ ತಕ್ಕಂತೆ ಹೆಜ್ಜೆ ಹಾಕುವಲ್ಲಿ ವಿಫಲವಾಗಿದೆ. ಬಹುತೇಕ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಸಚಿವರ ಭಾವಚಿತ್ರವನ್ನು ಮಾತ್ರ ಬದಲಾಯಿಸಿವೆ.

ಆದರೆ ವಿಷಯವನ್ನು ಬದಲಾಯಿಸಿಲ್ಲ. "ಇತ್ತೀಚಿನ ಅಪ್‌ಡೇಟ್‌ಗಳು" ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ, ವಿಷಯಗಳು 2019 ಅಥವಾ ಅದಕ್ಕಿಂತ ಹಳೆಯದಾಗಿದೆ, ಯಾವುದೇ ಹೊಸದನ್ನು ವೀಕ್ಷಕರಿಗೆ, ಜನರಿಗೆ ಇತ್ತೀಚಿನ ಹೊಸ ಮಾಹಿತಿಗಳನ್ನು ನೀಡುತ್ತಿಲ್ಲ. 
ಸರ್ಕಾರದ ನಿಗಮ-ಮಂಡಳಿಗಳು, ಸೊಸೈಟಿಗಳು, ನಿರ್ದೇಶನಾಲಯಗಳು, ಕಮಿಷನರೇಟ್‌ಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಏಜೆನ್ಸಿಗಳು ಸೇರಿದಂತೆ 700 ಕ್ಕೂ ಹೆಚ್ಚು ಸರ್ಕಾರಿ ಪೋರ್ಟಲ್‌ಗಳಿವೆ.

ಕೆಲವು ಸರ್ಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ, ಹಲವು ಅಪ್‌ಡೇಟ್ ಆಗಿರಲಿಲ್ಲ. ಕೃಷಿ ಇಲಾಖೆಯ ವೆಬ್‌ಸೈಟ್, ರೈತ ಮಿತ್ರದಲ್ಲಿ, ರೈತರ ಯೋಜನೆಗಳ ವಿವರಗಳನ್ನು ಜುಲೈ 2022 ರಲ್ಲಿ ಕೊನೆಯದಾಗಿ ನವೀಕರಿಸಲಾಗಿದೆ. ಇದು ರೈತರಿಗೆ ಪ್ರಮುಖ ಪೋರ್ಟಲ್ ಆಗಿದೆ, ಆದರೆ ವಿವರಗಳ ಕೊರತೆಯಿದೆ. ವಾರ್ತಾ ಇಲಾಖೆಯು 2019-20ರ ವಾರ್ಷಿಕ ವರದಿಯನ್ನು ಹೊಂದಿದ್ದರೆ, ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನ ವರದಿಯನ್ನು ಹೊಂದಿದೆ. 

ಕೆಲವು ವೆಬ್‌ಸೈಟ್‌ಗಳು ನೇಮಕಾತಿ ಮತ್ತು ಪ್ರಚಾರಗಳ ಪಟ್ಟಿ ಸೇರಿದಂತೆ ಇತ್ತೀಚಿನ ಸುದ್ದಿ ಸ್ಕ್ರೋಲಿಂಗ್ ನ್ನು ಹೊಂದಿವೆ, ಆದರೆ ''ಇತ್ತೀಚಿನ ಸುದ್ದಿ'' ಲಿಂಕ್‌ಗಳು 2019 ಅಥವಾ 2021 ರಿಂದ ನೋಡುಗರಿಗೆ ಮಾಹಿತಿಯನ್ನು ನೀಡುತ್ತವೆ.

ರಾಜ್ಯ ಸರ್ಕಾರವು ಖಾತರಿ ಯೋಜನೆಗಳನ್ನು ಪ್ರಾರಂಭಿಸಿದ ನಂತರವೇ ಈ ವೆಬ್‌ಸೈಟ್‌ಗಳಿಗೆ ಭೇಟಿಗಳು ಗಣನೀಯವಾಗಿ ಹೆಚ್ಚಿದವು. ಫಲಾನುಭವಿಗಳು ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಯೋಜನೆಗಳಿಗೆ ನೋಂದಾಯಿಸಲು ಸರ್ಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕಾಗಿರುವುದರಿಂದ  ವೀಕ್ಷಕರ ಸಂಖ್ಯೆಗಳು ಹೆಚ್ಚಾದವು ಎಂದು ಮೂಲಗಳು ತಿಳಿಸಿವೆ.

ಇ-ಆಡಳಿತ ಇಲಾಖೆಯು ವೆಬ್‌ಸೈಟ್ ವಿನ್ಯಾಸ ಮತ್ತು ತಂತ್ರಜ್ಞಾನದ ಬೆಂಬಲವನ್ನು ಒದಗಿಸುತ್ತದೆ, ಆದರೆ ಸಂಬಂಧಿಸಿದ ಇಲಾಖೆಗಳಿಂದ ನವೀಕರಣಗಳನ್ನು ಮಾಡಲಾಗುತ್ತದೆ. ಇ-ಆಡಳಿತ ಇಲಾಖೆ ಅಧಿಕಾರಿಗಳು ಸುತ್ತೋಲೆಗಳು, ಅಧಿಸೂಚನೆಗಳು, ಎಚ್ಚರಿಕೆಗಳು ಮತ್ತು ಇತರ ಮಾಹಿತಿಯ ವಿವರಗಳನ್ನು ನವೀಕರಿಸಲು ಪ್ರತಿ ಇಲಾಖೆಯಿಂದ ಒಬ್ಬ ವ್ಯಕ್ತಿಗೆ ತರಬೇತಿ ನೀಡುತ್ತಾರೆ.

ಇ-ಆಡಳಿತ ಇಲಾಖೆಯ ಮೂಲಗಳು ವೆಬ್‌ಸೈಟ್‌ಗಳನ್ನು ಈ ಹಿಂದೆ ಪಿಎಚ್‌ಪಿ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ವಿನ್ಯಾಸಗೊಳಿಸಲಾಗಿತ್ತು. ಈಗ ತಂತ್ರಜ್ಞಾನವನ್ನು ರಿಯಾಕ್ಟ್ ಮತ್ತು ನೋಡ್ ಜೆಎಸ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ನವೀಕರಿಸಿದ ವೆಬ್‌ಸೈಟ್‌ಗಳು ಹೆಚ್ಚು ಆಕರ್ಷಕವಾಗಿರುತ್ತವೆ ಮತ್ತು ಬಳಕೆದಾರ ಸ್ನೇಹಿಯಾಗಿರುತ್ತವೆ. ಈ ವೆಬ್‌ಸೈಟ್‌ಗಳ ಮಾಲೀಕರು ಇನ್ನೂ ಇಲಾಖೆಗಳಾಗಿರುತ್ತಾರೆ. ಆದರೆ ನಾವು ತಾಂತ್ರಿಕ ಬೆಂಬಲವನ್ನು ಒದಗಿಸುತ್ತೇವೆ ಎಂದು ಮೂಲಗಳು ತಿಳಿಸಿವೆ. 40 ದಿನಗಳಲ್ಲಿ ಹೊಸ ತಂತ್ರಜ್ಞಾನ ಸಿದ್ಧವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com