ಕೋಚಿಂಗ್ ಸೆಂಟರ್ ಗಳಿಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ: ಶಿಕ್ಷಣ ತಜ್ಞರ ಪರ-ವಿರೋಧ ಅಭಿಪ್ರಾಯ ಹೀಗಿದೆ....

ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ ದೇಶಾದ್ಯಂತ ಕೋಚಿಂಗ್ ಸೆಂಟರ್‌ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸುವಂತಿಲ್ಲ, ಅಥವಾ ಅವರಿಗೆ ಸುಳ್ಳು ಭರವಸೆಗಳನ್ನು ನೀಡುವಂತಿಲ್ಲ. ರ್ಯಾಂಕ್ ಅಥವಾ ಉತ್ತಮ ಅಂಕಗಳ ಖಾತರಿಯನ್ನು ನೀಡುವಂತಿಲ್ಲ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ ದೇಶಾದ್ಯಂತ ಕೋಚಿಂಗ್ ಸೆಂಟರ್‌ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸುವಂತಿಲ್ಲ, ಅಥವಾ ಅವರಿಗೆ ಸುಳ್ಳು ಭರವಸೆಗಳನ್ನು ನೀಡುವಂತಿಲ್ಲ. ರ್ಯಾಂಕ್ ಅಥವಾ ಉತ್ತಮ ಅಂಕಗಳ ಖಾತರಿಯನ್ನು ನೀಡುವಂತಿಲ್ಲ ಎಂದು ಹೇಳಿದೆ.

ಬೆಂಗಳೂರಿನ ಕೋಚಿಂಗ್ ಇನ್ಸ್ ಟಿಟ್ಯೂಟ್ ಗಳು ಈ ಮಾರ್ಗಸೂಚಿಗಳು, ನಿಯಂತ್ರಣ ಮತ್ತು ಸರ್ಕಾರಿ ನೋಂದಣಿ ಸಕಾರಾತ್ಮಕ ಕ್ರಮವಾಗಿದೆ ಎಂದು ಹೇಳುತ್ತವೆ, ಆದಾಗ್ಯೂ 16 ವರ್ಷ ವಯಸ್ಸಿನ ಮೊದಲು ವಿದ್ಯಾರ್ಥಿಗಳಿಗೆ ದಾಖಲಾತಿಯ ಅನುಮತಿ ನೀಡದಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನವನ್ನು ನೀಡುವುದಿಲ್ಲ. ಮಾರ್ಗಸೂಚಿಗಳು ಚೌಕಟ್ಟನ್ನು ಒದಗಿಸುವ ಮೂಲಕ ಈ ಸಂಸ್ಥೆಗಳ ಅಕ್ರಮವನ್ನು ಕಾನೂನುಬದ್ಧಗೊಳಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿದ ಶಿಕ್ಷಣತಜ್ಞ ನಿರಂಜನಾರಾಧ್ಯ, ಶಿಕ್ಷಣತಜ್ಞರು ತರಬೇತಿ ಸಂಸ್ಥೆಗಳನ್ನು ನಡೆಸುವುದು ಪರಿಶೀಲಿಸಿದ ಶಿಕ್ಷಣ ಸಂಸ್ಥೆಗಳ ಕಲ್ಪನೆಗೆ ವಿರುದ್ಧವಾಗಿದೆ. ದೇಶಾದ್ಯಂತ ನಾಯಿಕೊಡೆಗಳಂತೆ ಇದಕ್ಕೆ ಪೂರಕವಾದ ಅನೇಕ ಸಂಸ್ಥೆಗಳಿಗೆ ದಾರಿ ಮಾಡಿಕೊಡುತ್ತದೆ. ಕೋಚಿಂಗ್ ತರಗತಿಗಳು ದಿನಕ್ಕೆ 5 ಗಂಟೆಗಳ ಕಾಲ ತರಗತಿಗಳನ್ನು ನಡೆಸಬಹುದು ಎಂದು ಮಾರ್ಗಸೂಚಿಗಳು ಉಲ್ಲೇಖಿಸುತ್ತವೆ, ಅಂದರೆ ವಿದ್ಯಾರ್ಥಿಗಳು ಕನಿಷ್ಠ 7 ಗಂಟೆ ಶಾಲಾ ಅವಧಿ ಮುಗಿಸಿ ನಂತರ ತರಬೇತಿಗೆ ಹೋಗಬೇಕು. ಇದು ಅವರನ್ನು ಪುಸ್ತಕದ ಹುಳುಗಳಾಗಿ ಪರಿವರ್ತಿಸುತ್ತದೆ. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದ್ದರೂ, ಇದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದರು. 

ನಗರದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು ಈ ಬಗ್ಗೆ ಪೋಷಕರಿಗೂ ಸಲಹೆ ನೀಡಬೇಕು ಎಂದು ಹೇಳಿದರು. ನೀಟ್ ಅಕಾಡೆಮಿ ಅಧ್ಯಕ್ಷ ವಿವೇಕಾನಂದ, ಶಾಲೆಗಳಲ್ಲಿ ಒಂದು ತರಗತಿಯಲ್ಲಿ 50-60 ವಿದ್ಯಾರ್ಥಿಗಳಿರುತ್ತಾರೆ. ಶಿಕ್ಷಕರು ಏನು ಕಲಿಸುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಗ್ರಹಿಸಲು ಸಾಧ್ಯವಿಲ್ಲ, ವಿದ್ಯಾರ್ಥಿಗಳ ವೈಯಕ್ತಿಕ ಗಮನಕ್ಕೆ ಸಮಯವಿಲ್ಲ. ಸರ್ಕಾರವು ಕೋಚಿಂಗ್ ನ್ನು ಕಾನೂನುಬಾಹಿರವಾಗಿ ಮಾಡಿದರೆ ವಿದ್ಯಾರ್ಥಿಗಳು ಹೇಗೆ ಪ್ರಗತಿ ಹೊಂದುತ್ತಾರೆ, ಸರ್ಕಾರದ ಪರಿಕಲ್ಪನೆಗಳು ಸ್ಪಷ್ಟವಾಗಿಲ್ಲ ಎಂದರು. 

ಪ್ರಕಾಶ್ ಅಕಾಡೆಮಿಯ ಇನ್ನೋರ್ವ ಅಧ್ಯಾಪಕ ಪ್ರಶಾಂತ್ ಕುಮಾರ್, ಪೋಷಕರು ತಮ್ಮ ಮಕ್ಕಳಿಗೆ ಅಂಕಗಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕೋಚಿಂಗ್ ಸೆಂಟರ್‌ಗಳು ಉತ್ತಮ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಅನೇಕ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುವುದಿಲ್ಲ, ಪೋಷಕರು ಸೆಮಿಸ್ಟರ್‌ಗಳಿಗೆ ಶುಲ್ಕವನ್ನು ಪಾವತಿಸುವುದಿಲ್ಲ, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮಾರ್ಗಸೂಚಿಯಲ್ಲಿ ಏನಿದೆ?:

  1. 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಕೇಂದ್ರಗಳಿಗೆ ಮಾರ್ಗಸೂಚಿಗಳು ಅನ್ವಯಿಸುತ್ತವೆ
  2. ಕೇಂದ್ರಗಳು ಸಕ್ಷಮ ಪ್ರಾಧಿಕಾರದೊಂದಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕು
  3. ದಾಖಲಾತಿಯನ್ನು 16 ವರ್ಷದವರೆಗೆ ನಿರ್ಬಂಧ (ನಂತರದ ದ್ವಿತೀಯ ಪರೀಕ್ಷೆ)
  4. ವಿವರಗಳು, ಉತ್ತಮ ಮೂಲಸೌಕರ್ಯಗಳೊಂದಿಗೆ ಶುಲ್ಕಗಳು ಸಮಂಜಸವಾಗಿರಬೇಕು
  5. ರಾಜ್ಯ ಸರ್ಕಾರಗಳಿಂದ ದೃಢವಾದ ದೂರು ವ್ಯವಸ್ಥೆ ಮತ್ತು ನಿರ್ಗಮನ ನೀತಿ
  6. ಮೊದಲ ಸಲ ಅಪರಾಧಕ್ಕೆ 25,000 ರೂಪಾಯಿ ಮತ್ತು ಎರಡನೇ ಸಲದ ಅಪರಾಧಕ್ಕೆ 1 ಲಕ್ಷ ರೂಪಾಯಿ ದಂಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com