ಸಿಎಂ ಸಮ್ಮುಖದಲ್ಲೇ ಪ್ರಧಾನಿಗೆ ಜೈಕಾರ, ಅದನ್ನು ಕೇಳಿ ಮೋದಿ ಏನೆಂದರು? ಸಿದ್ದರಾಮಯ್ಯ ಪ್ರತಿಕ್ರಿಯೆ ಹೇಗಿತ್ತು ನೋಡಿ...

ನಿನ್ನೆ ಅಂದರೆ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟನೆಗೆ ಆಗಮಿಸಿದ್ದರು.
ಮೋದಿಗೆ ಜೈಕಾರ ಹಾಕಿದಾಗ ಪ್ರಧಾನಿ ಮಾತಿಗೆ ನಕ್ಕ ಸಿಎಂ ಸಿದ್ದರಾಮಯ್ಯ
ಮೋದಿಗೆ ಜೈಕಾರ ಹಾಕಿದಾಗ ಪ್ರಧಾನಿ ಮಾತಿಗೆ ನಕ್ಕ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಿನ್ನೆ ಅಂದರೆ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟನೆಗೆ ಆಗಮಿಸಿದ್ದರು.

ಉದ್ಘಾಟನೆ ಬಳಿಕೆ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು, ವಿರೋಧ ಪಕ್ಷ ನಾಯಕ ಆರ್ ಅಶೋಕ್ ಹಾಜರಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲು ಆರಂಭಿಸಿ, ಭಾರತ ದೇಶದ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದರು. ಭಾರತದಲ್ಲಿ ಅಗಾಧವಾದ ಪ್ರತಿಭೆ ಇದೆ, ಭಾರತದಲ್ಲಿ ಸ್ಥಿರ ಸರ್ಕಾರ ಅಧಿಕಾರದಲ್ಲಿದೆ ಮತ್ತು ಭಾರತದಲ್ಲಿ ಮೇಕ್ ಇನ್ ಇಂಡಿಯ ನೀತಿ ಇದೆ ಎಂದು ಶ್ಲಾಘಿಸುತ್ತಾ ಹೋದಾಗ ನೆರೆದಿದ್ದ ಸಭಿಕರು ನಗುತ್ತಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಮೋದಿಯವರಿಗೆ ಜೈಕಾರ ಕೂಗಿದರು. ಜನ ಮೋದಿ ಮೋದಿ ಎಂದು ಕೂಗುವುದು ನಿಲ್ಲಿಸಿದ ಮೇಲೆ ಪ್ರಧಾನಿಯವರು ಸಿದ್ದರಾಮಯ್ಯ ಕಡೆ ತಿರುಗಿ ‘ಮುಖ್ಯಮಂತ್ರಿಗಳೇ ಇದು ನಿರಂತರವಾಗಿ ನಡೆಯುತ್ತಿರುತ್ತದೆ’ (ಮುಖ್ಯಮಂತ್ರಿ ಜೀ ಐಸಾ ಹೋತಾ ರಹ್ತಾ ಹೈ) ಎಂದರು.

ಇದಕ್ಕೆ ಏನೆಂದು ಪ್ರತಿಕ್ರಿಯಿಸಲು ಅರಿಯದೆ ಒಂದು ಕ್ಷಣ ಸಿಎಂ ಸಿದ್ದರಾಮಯ್ಯ ಸುಮ್ಮನೆ ನಕ್ಕು ತಲೆ ಕೆರೆದುಕೊಂಡರು. ಕರ್ನಾಟಕದಲ್ಲಿ, ಅದೂ ರಾಜ್ಯದ ಮುಖ್ಯಮಂತ್ರಿಯ ಸಮ್ಮುಖದಲ್ಲೇ ಜನ ತನಗೆ ಜೈಕಾರ ಹಾಕಿದ್ದನ್ನು ತನಗೆ ಜನರ ಬೆಂಬಲವಿದೆ ಎಂದು ಪ್ರಧಾನಿ ಮೋದಿ ಸಿದ್ದರಾಮಯ್ಯನವರಿಗೆ ಮಾರ್ಮಿಕವಾಗಿ ಹೇಳಿದಂತೆ ಕಂಡುಬಂತು. ಪ್ರಧಾನಿ ಮಾತಿನ ಮರ್ಮ ಖಂಡಿತವಾಗಿಯೂ ಮುಖ್ಯಮಂತ್ರಿಗಳಿಗೆ ಅರ್ಥವಾಗಿರಬೇಕು, ಸಿಎಂ ಸಿದ್ದರಾಮಯ್ಯನವರು ಕೊಂಚ ಮುಜುಗರವಾದಂತೆ ಕಂಡುಬಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com