ಹಣಕಾಸು ಸಮಿತಿಯಿಂದ ಕರ್ನಾಟಕಕ್ಕೆ ಭಾರಿ ನಷ್ಟ: ಸಿಎಂ ಸಿದ್ದರಾಮಯ್ಯ

ಈ ಹಿಂದೆ ಹಣಕಾಸು ಆಯೋಗದ ಶಿಫಾರಸುಗಳಿಂದ ಕರ್ನಾಟಕ ರಾಜ್ಯವು ಭಾರಿ ಆದಾಯ ನಷ್ಟವನ್ನು ಅನುಭವಿಸಿದ್ದು, ಇದನ್ನು 16 ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ ಎಸ್ ರಾಮಯ್ಯ ಯೂನಿವರ್ಸಿಟಿ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ ಎಸ್ ರಾಮಯ್ಯ ಯೂನಿವರ್ಸಿಟಿ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು: ಈ ಹಿಂದೆ ಹಣಕಾಸು ಆಯೋಗದ ಶಿಫಾರಸುಗಳಿಂದ ಕರ್ನಾಟಕ ರಾಜ್ಯವು ಭಾರಿ ಆದಾಯ ನಷ್ಟವನ್ನು ಅನುಭವಿಸಿದ್ದು, ಇದನ್ನು 16 ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲು 14 ನೇ ಹಣಕಾಸು ಆಯೋಗದ ಅಡಿಯಲ್ಲಿ ಶೇಕಡಾ 4.713 ರಿಂದ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಶೇಕಡಾ 3.647 ಕ್ಕೆ ಕಡಿಮೆಯಾಗಿದೆ. ಈ ಕಾರಣದಿಂದಾಗಿ, ರಾಜ್ಯಕ್ಕೆ ಸಾಕಷ್ಟು ಸಂಪನ್ಮೂಲಗಳನ್ನು ನೀಡಲಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. 

16ನೇ ಹಣಕಾಸು ಆಯೋಗ ರಚನೆಯಾಗಿರುವ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ವಿತ್ತೀಯ ನೀತಿ ಸಂಸ್ಥೆ ಹಾಗೂ ಆರ್ಥಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಆರ್ಥಿಕ ಸಂಯುಕ್ತ ತತ್ವ, 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ರಾಜ್ಯಗಳ ಪೈಕಿ ಕರ್ನಾಟಕವು ಶೇ 1.066 ರಷ್ಟು ಕಡಿತವನ್ನು ಅನುಭವಿಸಿದೆ ಎಂದರು. ಪ್ರಸ್ತುತ ವಿಧಾನವು ಆದಾಯದ ಅಂತರವನ್ನು ಪರಿಗಣಿಸುತ್ತದೆ, ಅದರ ಪ್ರಕಾರ, ಅತಿ ಹೆಚ್ಚು ತಲಾ ಆದಾಯದ ರಾಜ್ಯದಿಂದ ಕಡಿಮೆ ಅಂತರದಿಂದಾಗಿ ಕರ್ನಾಟಕವು ಕಳೆದುಕೊಳ್ಳುತ್ತದೆ.

ಸಂಯುಕ್ತ ಆರ್ಥಿಕ ವರ್ಗಾವಣೆಯಲ್ಲಿನ ವೈಪರೀತ್ಯಗಳನ್ನು ಪರಿಶೀಲಿಸಲು ಕರ್ನಾಟಕ ದೃಢವಾಗಿ ಪ್ರಾತಿನಿಧ್ಯವನ್ನು ವಹಿಸಬೇಕಿದೆ. ದಕ್ಷತೆಯ ಜೊತೆಗೆ ನೀತಿಗೆ ಸಂಬಂಧಿಸಿದಂತೆ ವರ್ಗಾವಣೆಯ ಅರ್ಹತೆಗಳ ಬಗ್ಗೆ ಸಾಕಷ್ಟು ಒಟ್ಟು ನೀಡಲು ಇದು ಸುಸಂದರ್ಭ ಎಂದರು.

ಹೆಚ್ಚಿನ ತಲಾ ಆದಾಯದ ಮಟ್ಟಗಳು ಮುಖ್ಯವಾಗಿ ಬೆಂಗಳೂರು ನಗರ ಜಿಲ್ಲೆಯಿಂದ 6,21,131 ರೂಪಾಯಿಗಳಿವೆ. ಈ ವಿಧಾನವು 1,24,998 ರೂಪಾಯಿಗಳ ತಲಾ ಆದಾಯವನ್ನು ಹೊಂದಿರುವ ಬೆಳಗಾವಿಯಂತಹ ಕೆಲವು ಜಿಲ್ಲೆಗಳ ಕಡಿಮೆ ತಲಾ ಆದಾಯವನ್ನು ಪರಿಹರಿಸಲು ಕರ್ನಾಟಕವು ಸಾಕಷ್ಟು ಸಂಪನ್ಮೂಲ ವರ್ಗಾವಣೆಯಿಂದ ವಂಚಿತವಾಗಿದೆ. ಹಣಕಾಸು ಆಯೋಗಕ್ಕೆ ಅಗತ್ಯ ಹೊಂದಾಣಿಕೆ ಮಾಡಬೇಕು ಎಂದರು. 

ತೆರಿಗೆಯಲ್ಲಿ ಬೆಂಗಳೂರಿನ ಕೊಡುಗೆ ಬಗ್ಗೆ ಮಾತನಾಡಿದ ಸಿಎಂ, ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವು ಅದರ ಕೊಡುಗೆಗೆ ಸಾಕಷ್ಟು ಪ್ರತಿಫಲ ಪಡೆಯದಿರುವುದು ವಿಪರ್ಯಾಸ. ರಾಜ್ಯದ ದಕ್ಷತೆ ಮತ್ತು ಹಣಕಾಸಿನ ಕಾರ್ಯಕ್ಷಮತೆಗಾಗಿ ರಾಜ್ಯವನ್ನು ಪ್ರೋತ್ಸಾಹಿಸಬೇಕು. ಹಣಕಾಸು ಆಯೋಗವು ರಾಜ್ಯಗಳ ಇಕ್ವಿಟಿ ಕಾಳಜಿಗಳ ಮೇಲೆ ಕೇಂದ್ರೀಕರಿಸಬೇಕು ಎಂದರು. 
ಎಚ್‌ಡಿಐ ಮೌಲ್ಯ ಶೇಕಡಾ 0.738 ರಲ್ಲಿ ಬೆಂಗಳೂರು ನಗರವು ಮೊದಲ ಸ್ಥಾನವನ್ನು ಹಂಚಿಕೊಂಡಿರುವ ಮೂಲಕ ಮಾನವ ಅಭಿವೃದ್ಧಿಯಲ್ಲಿನ ಅಸಮತೋಲನದ ಬಗ್ಗೆ ಸಿಎಂ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com