ಹಾವೇರಿ: ವಿವಾದಿತ ಜಾಗದಲ್ಲಿ ರಾಮನ ಫೋಟೋಗೆ ಪೂಜೆ; ಐವರನ್ನು ವಶಕ್ಕೆ ಪಡೆದ ಪೊಲೀಸರು

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆದಿದ್ದು ಅದೇ ಸಮಯದಲ್ಲಿ ಹಾವೇರಿಯ ವಿವಾದಿತ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿದ್ದು ಈ ಸಂಬಂಧ ಐವರನ್ನು ಬಂಧಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆದಿದ್ದು ಅದೇ ಸಮಯದಲ್ಲಿ ಹಾವೇರಿಯ ವಿವಾದಿತ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿದ್ದು ಈ ಸಂಬಂಧ ಐವರನ್ನು ಬಂಧಿಸಲಾಗಿದೆ. 

ಹಾವೇರಿಯ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ವಿವಾದಿತ ಜಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು ಈ ಸಂಬಂಧ ತಾಲೂಕು ಸಂಚಾಲಕ ಗಂಗಾಧರ್ ಶೆಟ್ಟರ್, ಸೋಮಶೇಖರ್ ಗೌರಿಮಠ, ಈರಣ್ಣ ಬಳೇಗಾರ, ಮೋಹನ್ ಮೀರಜಕರ್​ ಸೇರಿ ಐವರನ್ನು ಬಂಕಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸ್ಥಳಕ್ಕೆ ಹಾವೇರಿ ಎಸ್.ಪಿ ಅಂಶುಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಳಿಕ ಶ್ರೀರಾಮನ ಭಾವಚಿತ್ರವನ್ನು ತೆಗೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹಾವೇರಿ ಎಸ್​ಪಿ ಹೇಳಿದರು. ಸದ್ಯ ಬಂಕಾಪುರ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಹಿಂದೂಗಳು ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗದಲ್ಲಿ ಸುಮಾರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತಿತ್ತು. ಆದರೆ ಈ ಜಾಗ ನಮ್ಮದು ಎಂದು ಮುಸ್ಲಿಂ ಸಮುದಾಯದವರು ತಕರಾರು ತೆಗೆದಿದ್ದರು. ಹಾಗಾಗಿ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗ ವಿವಾದಿತ ಜಾಗವಾಗಿದೆ. ಸದ್ಯ ಈ ಕುರಿತಾಗಿ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com