ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ಒಡನಾಟವಿದೆ. ಜನವರಿ 31ಕ್ಕೆ ಅವರ ಅವಧಿ ಮುಕ್ತಾಯವಾಗಲಿದೆ. ಕಳೆದ 16 ವರ್ಷಗಳಿಂದ ಸಂಸ್ಥೆಯ ಮುಖ್ಯಸ್ಥರಾಗಿರುವ ಮಂಜುನಾಥ್ ಆಸ್ಪತ್ರೆಯು ಶೇ.500ರಷ್ಟು ಅಭಿವೃದ್ಧಿಯಾಗಿದೆ ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಯನ್ನು ಪಂಚತಾರಾ, ಕಾರ್ಪೊರೇಟ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಇನ್ನೂ ಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಲಭ್ಯ ಮಾಡುವುದು ತಮ್ಮ ಕನಸು ಎಂದು ಅವರು ಒತ್ತಿ ಹೇಳಿದರು.
ಬಡವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡಬೇಕೆಂಬ ನನ್ನ ಕನಸು ನನಸಾಗಿದೆ. ಶೇ.500ರಷ್ಟು ಅಭಿವೃದ್ಧಿ ನನ್ನ ಅವಧಿಯಲ್ಲಿನಡೆದಿದೆ. 300 ಹಾಸಿಗೆಯಿದ್ದ ಆಸ್ಪತ್ರೆಯಲ್ಲಿ 2000 ಹಾಸಿಗೆಗೆ ಏರಿಕೆಯಾಗಿದೆ. ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ,'' ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
'ಜಯದೇವ ಆಸ್ಪತ್ರೆಯಲ್ಲಿಇದುವರೆಗೆ 75 ಲಕ್ಷ ಒಪಿಡಿ ನಡೆಸಿದ್ದೇವೆ. 8 ಲಕ್ಷ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕಳೆದ ಮೇ ತಿಂಗಳಲ್ಲಿ ಕೇಂದ್ರೀಯ ಸಂಸದೀಯ ಸಮಿತಿಯು ಸಂಸ್ಥೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿಇಲ್ಲಿನ ಚಿಕಿತ್ಸೆ ಕಂಡು ದೇಶದ ಎಲ್ಲಾ ಸರಕಾರಿ ಆಸ್ಪತ್ರೆಗೆ ಜಯದೇವ ಆಸ್ಪತ್ರೆ ಮಾದರಿಯಾಗಿದೆ ಎಂದಿದೆ.
ಜಯದೇವ ಹೃದ್ರೋಗ ಸಂಸ್ಥೆ 2010ರಲ್ಲಿಮೈಸೂರಿನಲ್ಲಿಆಸ್ಪತ್ರೆ ನಿರ್ಮಿಸಿದೆ. ಬೆಂಗಳೂರು ಮಧ್ಯಭಾಗ ಮಲ್ಲೇಶ್ವರದಲ್ಲೂ ಸ್ಯಾಟಲೈಟ್ ಸೆಂಟರ್ ತೆರೆದಿದ್ದೇವೆ. ಇಎಸ್‌ಐ ಆಸ್ಪತ್ರೆಯಲ್ಲೂ ಶಾಖೆ ತೆರೆದಿದ್ದೇವೆ. ನನ್ನ ಅವಧಿಯ ಸಾಧನೆ ಬಗ್ಗೆ ತೃಪ್ತಿ ಇದೆ'' ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 2016ರಲ್ಲಿ 135 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ತೆರೆದಿದ್ದೇವೆ. ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಏಪ್ರಿಲ್‌ನಲ್ಲಿಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ನಿರ್ದೇಶಕರಾಗಿ ತಮ್ಮ ಕೆಲವು ಸಾಧನೆಗಳನ್ನು ಹಂಚಿಕೊಳ್ಳಲು ಕೇಳಿದಾಗ, ವ್ಯಕ್ತಿಯೊಬ್ಬರ ತಾಯಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಕಾರ್ ಡ್ರೈವರ್ ತನ್ನ ವಾಹನವನ್ನು ಹಿಂಬಾಲಿಸಿ ನಿಲ್ಲಿಸಿದ ಘಟನೆಯನ್ನು ನೆನಪಿಸಿಕೊಂಡರು. ನಮ್ಮ ಸೇವೆಗೆ ಜನಸಾಮಾನ್ಯರ ಮನ್ನಣೆ ಹೆಚ್ಚು ತೃಪ್ತಿ ತಂದಿದೆ. ಇದೇ ನಿಜವಾದ ಸಾಧನೆ' ಎಂದರು.
ನಿರ್ದೇಶಕರಾಗಿ ಮುಂದುವರಿಯುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಡಾ ಮಂಜುನಾಥ್, ಇದು ವದಂತಿ ಎಂದರು ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಜಯದೇವ ಆಸ್ಪತ್ರೆಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅದರ ಉದ್ಘಾಟನೆಯನ್ನು ನಾನೇ ನೆರವೇರಿಸಬೇಕೆಂದುಕೊಂಡಿದ್ದೆ. ಹಾಗೆಂದು ನನ್ನ ಸೇವೆ ಮುಂದುವರಿಸಿ ಎಂದು ಸರಕಾರವನ್ನು ಕೋರುವುದಿಲ್ಲ. ಏಕೆಂದರೆ ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ,'' ಎಂದರು
Advertisement