ಹುತಾತ್ಮ ಯೋಧ ಎಂ.ವಿ. ಪ್ರಾಂಜಲ್‌ ಗೆ ಮರಣೋತ್ತರವಾಗಿ "ಶೌರ್ಯ ಚಕ್ರ" ಪ್ರಶಸ್ತಿ!

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕಳೆದ ನವೆಂಬರ್‌ನಲ್ಲಿ ದೇಶಕ್ಕಾಗಿ ಹೋರಾಡಿ ಭಯೋತ್ಪಾದಕರ ಗುಂಡೇಟಿಗೆ ಹುತಾತ್ಮರಾಗಿದ್ದ ಹೆಮ್ಮೆಯ ಕನ್ನಡಿಗ, ವೀರ ಯೋಧ ಕ್ಯಾಪ್ಟನ್  ಎಂ. ವಿ. ಪ್ರಾಂಜಲ್‌ ಅವರಿಗೆ ಮರಣೋತ್ತರವಾಗಿ "ಶೌರ್ಯ ಚಕ್ರ" ಪ್ರಶಸ್ತಿಯ ಗೌರವ ದೊರೆತಿದೆ. 
ಪ್ರಾಂಜಲ್
ಪ್ರಾಂಜಲ್

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕಳೆದ ನವೆಂಬರ್‌ನಲ್ಲಿ ದೇಶಕ್ಕಾಗಿ ಹೋರಾಡಿ ಭಯೋತ್ಪಾದಕರ ಗುಂಡೇಟಿಗೆ ಹುತಾತ್ಮರಾಗಿದ್ದ ಹೆಮ್ಮೆಯ ಕನ್ನಡಿಗ, ವೀರ ಯೋಧ ಕ್ಯಾಪ್ಟನ್  ಎಂ. ವಿ. ಪ್ರಾಂಜಲ್‌ ಅವರಿಗೆ ಮರಣೋತ್ತರವಾಗಿ "ಶೌರ್ಯ ಚಕ್ರ" ಪ್ರಶಸ್ತಿಯ ಗೌರವ ದೊರೆತಿದೆ. 

ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕನ್ನಡಿಗ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸಹಿತ ನಾಲ್ವರು ಯೋಧರು ಹುತಾತ್ಮರಾಗಿದ್ದರು. 28ರ ಹರೆಯದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಆಗಿದ್ದರು.

ಈ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್.ಅಶೋಕ್, ದೇಶದ ರಕ್ಷಣೆಯಲ್ಲಿ ಅವರ ಸಾಹಸ, ತ್ಯಾಗ, ಸಮರ್ಪಣೆಯನ್ನು ಸ್ಮರಿಸೋಣ ಎಂದಿದ್ದಾರೆ. 

ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಪ್ರಾಂಜಲ್ ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್-ಅನುರಾಧಾ ದಂಪತಿಯ ಏಕೈಕ ಪುತ್ರರಾಗಿದ್ದರು. ಎಂಆರ್​​ಪಿಎಲ್ ಡೆಲ್ಲಿ ಸ್ಕೂಲ್‌ನಲ್ಲಿ ಹತ್ತನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿದ್ದರು. ನಂತರ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com