ಯಾದಗಿರಿ: ಮಾಜಿ ಶಾಸಕ ನಾಗನಗೌಡ ಕಂದಕೂರ ಹೃದಯಾಘಾತದಿಂದ ನಿಧನ

ಗುರುಮಿಠಕಲ್​ ಕ್ಷೇತ್ರದ ಜೆಡಿಎಸ್​ ಮಾಜಿ ಶಾಸಕ ನಾಗನಗೌಡ ಕಂದಕೂರ(79) ಅವರು ವಿಧಿವಶರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ

ಯಾದಗಿರಿ ಜಿಲ್ಲೆ: ಗುರುಮಿಠಕಲ್​ ಕ್ಷೇತ್ರದ ಜೆಡಿಎಸ್​ ಮಾಜಿ ಶಾಸಕ ನಾಗನಗೌಡ ಕಂದಕೂರ(79) ಅವರು ವಿಧಿವಶರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಯಾದಗಿರಿ ನಗರದ ಅವರ ನಿವಾಸದಲ್ಲಿದ್ದಾಗ ಭಾನುವಾರ ಬೆಳಿಗ್ಗೆ 11-30ರ ವೇಳೆಗೆ ತೀವ್ರ ಹೃದಯಾಘಾತವಾಗಿತ್ತು. ಕೂಡಲೇ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು. 'ಆದರೆ, ಅವರು ಉಳಿಯಲಿಲ್ಲ' ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ, ಪುತ್ರರಾದ ಶಾಸಕ ಶರಣಗೌಡ ಕಂದಕೂರ, ಉದ್ಯಮಿ ಮಲ್ಲಿಕಾರ್ಜುನರೆಡ್ಡಿ (ರಾಜುಗೌಡ) ಹಾಗೂ ಒಬ್ಬ ಪುತ್ರಿ ಇದ್ದಾರೆ.

ಜೆಡಿಎಸ್​ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಗನಗೌಡ ಕಂದಕೂರ್​ ಅವರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗುರುಮಿಠಕಲ್​ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 023ರ ಚುನಾವಣೆಯಲ್ಲಿ ವಯಸ್ಸಿನ ಕಾರಣ ನೀಡಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದರು. ನಂತರ ಅವರ ಪುತ್ರ ಶರಣಗೌಡ ಕಂದಕೂರ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಗುರುಮಿಠಕಲ್ ಕ್ಷೇತ್ರದ ಶಾಸಕರಾಗಿ ಶರಣಗೌಡ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com