'ಶ್ರೀರಾಮ ಮೆಟ್ಟಿದ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ರಾಮೇಶ್ವರಂನಿಂದ ಅಯೋಧ್ಯೆವರೆಗೆ ರಾಮೋತ್ಸವ ಯಾತ್ರೆ'

ರಾಮೇಶ್ವರಂನಿಂದ ಅಯೋಧ್ಯೆವರೆಗೆ ನಡೆಯುತ್ತಿರುವ ರಾಮೋತ್ಸವ ಯಾತ್ರೆಯ ಮೂಲಕ ಶ್ರೀರಾಮನು ಭೇಟಿ ನೀಡಿದ 72 ಸ್ಥಳಗಳನ್ನು ದೇಶದ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳಗಾವಿಯ ಯಾತ್ರಾ ಉತ್ಸವ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಅಯೋಧ್ಯೆಯ ರಾಮಲಲ್ಲಾ ವಿಗ್ರಹ
ಅಯೋಧ್ಯೆಯ ರಾಮಲಲ್ಲಾ ವಿಗ್ರಹ
Updated on

ಬೆಳಗಾವಿ: ರಾಮೇಶ್ವರಂನಿಂದ ಅಯೋಧ್ಯೆವರೆಗೆ ನಡೆಯುತ್ತಿರುವ ರಾಮೋತ್ಸವ ಯಾತ್ರೆಯ ಮೂಲಕ ಶ್ರೀರಾಮನು ಭೇಟಿ ನೀಡಿದ 72 ಸ್ಥಳಗಳನ್ನು ದೇಶದ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳಗಾವಿಯ ಯಾತ್ರಾ ಉತ್ಸವ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಶ್ರೀರಾಮ 14 ವರ್ಷಗಳ ವನವಾಸದಲ್ಲಿ ಸಂಚರಿಸಿದ ಎಲ್ಲ ಸ್ಥಳಗಳನ್ನು ಗುರುತಿಸಿ, ಜಾಗೃತಿ ಮೂಡಿಸಲು ರಾಮೋತ್ಸವ ಯಾತ್ರೆ ಆರಂಭಿಸಲಾಗಿದೆ. ಸನಾತನ ಧರ್ಮದಲ್ಲಿ ಶ್ರದ್ಧೆ ಹೊಂದಿರುವ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳ ತಂಡ ಈ ಯಾತ್ರೆಯಲ್ಲಿದೆ’ ಎಂದು ಯಾತ್ರೆಯ ಸಂಚಾಲಕ ಮಲಯ ದೀಕ್ಷಿತ್‌ ಹೇಳಿದರು.

ಸಮಿತಿಯ ಮಲಯ ದೀಕ್ಷಿತ್ ಮತ್ತು ಅಪೂರ್ವ ಸಿಂಗ್ ಅವರ ಪ್ರಕಾರ, ಇಂತಹ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಅಧ್ಯಯನ ಮಾಡಲು ಯಾತ್ರೆಯು ಸಹಾಯ ಮಾಡುತ್ತದೆ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮ ಕ್ಷೇತ್ರದ 150 ಯುವ ಮತ್ತು ಪ್ರಭಾವಿ ನಾಯಕರನ್ನು ಒಳಗೊಂಡ ವಿಶಿಷ್ಟ ರಾಮೋತ್ಸವ ಯಾತ್ರೆ ಜನವರಿ 14 ರಂದು ಇಂದೋರ್‌ನಿಂದ ಹೊರಟು ಫೆಬ್ರವರಿ 14 ರಂದು ವಸಂತ ಪಂಚಮಿಯ ಸಂದರ್ಭದಲ್ಲಿ ಅಯೋಧ್ಯೆಗೆ ತಲುಪಲಿದೆ ಎಂದು ಸದಸ್ಯರು ಹೇಳಿದರು.

‘ವನವಾಸದಲ್ಲಿ ರಾಮ ಸಂಚರಿಸಿದ ಸ್ಥಳಗಳನ್ನು ಗುರುತಿಸಿ ಇನ್ನಷ್ಟು ಬೆಳಕಿಗೆ ತರುವುದು ಅಗತ್ಯವಾಗಿದೆ. ಯುವ ಜನರಿಗೆ ಶ್ರೀರಾಮನ ಕುರುಹುಗಳ ಬಗ್ಗೆ, ಐತಿಹಾಸಿಕ ನಡೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈಗಾಗಲೇ ಶೇ 50ರಷ್ಟು ಪ್ರದೇಶಗಳು ಜನರಿಗೆ ತಿಳಿದಿವೆ. ಇನ್ನೂ ಅರ್ಧದಷ್ಟು ಪ್ರದೇಶಗಳು ಎಲ್ಲಿವೆ, ಅವುಗಳ ಮಹತ್ವ ಏನು?, ರಾಮ ಅಲ್ಲಿ ಮಾಡಿದ್ದು ಏನು? ಎಂಬುದು ಬೆಳಕಿಗೆ ಬಂದಿಲ್ಲ. ಅಂಥ ಎಲ್ಲ ಸ್ಥಳಗಳನ್ನೂ ಏಕಕಾಲಕ್ಕೆ ಗುರುತಿಸಿ ಜನರ ಮುಂದೆ ಇಡಲಾಗುವುದು’ ಎಂದರು.

ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮನು ದೇಶದ 72 ಸ್ಥಳಗಳಿಗೆ ಭೇಟಿ ನೀಡಿದ್ದಾನೆ. ನಿರ್ಲಕ್ಷಿತ ಸ್ಥಳಗಳನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಸಾಧ್ಯತೆಗಳು ಮತ್ತು ಅದನ್ನು ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಲು ಅಧ್ಯಯನವನ್ನು ಕೈಗೊಳ್ಳಲಾಗುವುದು,'' ಎಂದು ಅವರು ಹೇಳಿದರು. ಭಗವಾನ್ ರಾಮ ಮತ್ತು ರಾಮಾಯಣದ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುತ್ತಿರುವ ತಜ್ಞರಿಂದ ಮಾರ್ಗದರ್ಶನವನ್ನು ಪಡೆಯಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com