ಸಾವರ್ಕರ್ ಧ್ವಜ ಸ್ತಂಭ ತೆರವು ಮಾಡಿದ ತಾಲೂಕು ಆಡಳಿತ: ಮಂಡ್ಯ ನಂತರ ಭಟ್ಕಳದಲ್ಲಿ ಪರಿಸ್ಥಿತಿ ಉದ್ವಿಗ್ನ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ  ರಾಜ್ಯ ಸರಕಾರ ಹನುಮಾನ್ ಧ್ವಜ ತೆಗೆದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡೆಸಿದವು, ಅದೇ ರೀತಿ ಉತ್ತರ ಕನ್ನಡದ ಭಟ್ಕಳದಲ್ಲಿ ತಾಲೂಕು ಆಡಳಿತ ವೀರ ಸಾವರ್ಕರ್ ಹೆಸರಿನಲ್ಲಿ ಅಳವಡಿಸಿದ್ದ ಧ್ವಜ ಮತ್ತು ಬೋರ್ಡ್ ತೆಗೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಸಾವರ್ಕರ್ ಧ್ವಜ ಸ್ತಂಭ ತೆರವು
ಸಾವರ್ಕರ್ ಧ್ವಜ ಸ್ತಂಭ ತೆರವು

ಭಟ್ಕಳ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ  ರಾಜ್ಯ ಸರಕಾರ ಹನುಮಾನ್ ಧ್ವಜ ತೆಗೆದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡೆಸಿದವು, ಅದೇ ರೀತಿ ಉತ್ತರ ಕನ್ನಡದ ಭಟ್ಕಳದಲ್ಲಿ ತಾಲೂಕು ಆಡಳಿತ ವೀರ ಸಾವರ್ಕರ್ ಹೆಸರಿನಲ್ಲಿ ಅಳವಡಿಸಿದ್ದ ಧ್ವಜ ಮತ್ತು ಬೋರ್ಡ್ ತೆಗೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಜ.21ರಂದು ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮ ಪಂಚಾಯಿತಿಯಲ್ಲಿ ಸ್ಥಳೀಯ ಯುವಕರು ಧ್ವಜಸ್ತಂಭ ನಿರ್ಮಿಸಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಹೆಸರನ್ನಿಟ್ಟಿದ್ದರು. ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಅದನ್ನು ಕೆಡವಿದಾಗ ಸಮಸ್ಯೆ ಶುರುವಾಗಿದೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಧರಣಿ ಕುಳಿತರು. ಧ್ವಜಸ್ತಂಭ ನಿರ್ಮಿಸಲು ಯಾವುದೇ ಅನುಮತಿ ತೆಗೆದುಕೊಂಡಿಲ್ಲ ಎಂದು ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.

ಗ್ರಾಪಂ ಅಧಿಕಾರಿಗಳು ಜಾಮಿಯಾಬಾದ್‌ ರಸ್ತೆ ನಾಮಫಲಕ ತೆರವು ಮಾಡಲು ಒಪ್ಪದಿದ್ದಾಗ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ ತೆಂಗಿನಗುಂಡಿ ಬಂದರಿನಲ್ಲಿ ಪುನಃ ವೀರ ಸಾರ್ವಕರ್‌ ನಾಮಫಲಕ ಅಳವಡಿಸಲು ಕಟ್ಟೆ ಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯೊಡ್ಡಿದರು. ಆಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮುಖಂಡ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತಿತರರು ಬಿಜೆಪಿ ಗ್ರಾಪಂ ಸದಸ್ಯರು ಲಿಖೀತವಾಗಿ ನೀಡಿರುವ  ಅನಧಿಕೃತ ನಾಮ ಫಲಕವವನ್ನು ಒಂದು ವಾರದ ಒಳಗೆ ಗ್ರಾಪಂ ಅಧಿಕಾರಿಗಳು ತೆರವು ಮಾಡಿದರೆ ನಾವು ಸ್ವಯಂ ಪ್ರೇರಣೆಯಿಂದ ಈ ಕಟ್ಟೆಯನ್ನೂ ತೆರವುಗೊಳಿಸುತ್ತೇವೆ. ಆದರೆ ಅನಧಿಕೃತ ನಾಮಫಲಕ ತೆರವು ಮಾಡದೇ ಹೋದಲ್ಲಿ ಇದೇ ಕಟ್ಟೆಯಲ್ಲಿ ವೀರ ಸಾರ್ವಕರ್‌ ನಾಮಫಲಕ ಮರು ಸ್ಥಾಪಿಸುವುದಾಗಿ ಸ್ಥಳೀಯ ಹಿಂದೂ ಕಾರ್ಯಕರ್ತ ಗೋವಿಂದ್ ನಾಯ್ಕ್ ತಿಳಿಸಿದರು.

ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಭಟ್ಕಳ ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ನಂತರ ಪ್ರತಿಭಟನಕಾರರು ಶಾಂತರಾದರು. 
ಕಳೆದ ಹದಿನೈದು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಜನವರಿ 14ರಂದು ಕಜ್ಜಾಲಿ ಪಂಚಾಯತ್‌ನ ಸ್ಥಳೀಯ ನಿವಾಸಿಗಳು ಹೊಸದಾಗಿ ಅಳವಡಿಸಿರುವ ಕಲ್ಲಿನ ಹಲಗೆಗೆ ದೇವಿನಗರ ಎಂದು ಬಣ್ಣ ಬಳಿಯಲು ಮುಂದಾದಾಗ, ಸಮೀಪದಲ್ಲಿ ಮಸೀದಿ ಇರುವ ಕಾರಣ ಅವಕಾಶ ನೀಡಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com