ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳು ಆರಂಭ!

ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ನಲ್ಲಿ IX 815 ವಿಮಾನ 2522 ಕೆಜಿಗಳಷ್ಟು ಹಣ್ಣು ಹಾಗೂ ತರಕಾರಿಗಳನ್ನು ದುಬೈ ಗೆ ಕೊಂಡೊಯ್ಯುವ ಮೂಲಕ ಕಾರ್ಗೋ ಕಾರ್ಯಾಚರಣೆಗಳು ಆರಂಭವಾದವು.
Mangaluru International Airport
ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣonline desk

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ ರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳು ಜು.02 ರಿಂದ ಆರಂಭವಾಗಿವೆ.

ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ನಲ್ಲಿ IX 815 ವಿಮಾನ 2522 ಕೆಜಿಗಳಷ್ಟು ಹಣ್ಣು ಹಾಗೂ ತರಕಾರಿಗಳನ್ನು ದುಬೈ ಗೆ ಕೊಂಡೊಯ್ಯುವ ಮೂಲಕ ಕಾರ್ಗೋ ಕಾರ್ಯಾಚರಣೆಗಳು ಆರಂಭವಾದವು.

ಜು.05 ರಂದು ಈ ಕಾರ್ಯಾಚರಣೆಗಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದ್ದು, ಎಎಎಚ್‌ಎಲ್ ಕಾರ್ಗೋ ತಂಡ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಾಯಕತ್ವ ತಂಡ ಹಾಗೂ ಕಸ್ಟಮ್ಸ್, ಏರ್‌ಲೈನ್-ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್- ಮತ್ತು ಸಿಐಎಸ್‌ಎಫ್‌ನ ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ದೇಶೀಯ ಕಾರ್ಗೋ ಕಾರ್ಯಾಚರಣೆಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ ಮೇ.1 ರಂದು ಆರಂಭಿಸಲಾಗಿತ್ತು. ಇದಾದ ಒಂದೇ ವರ್ಷದಲ್ಲಿ ಅಂತರರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳಿಗೆ ಚಾಲನೆ ಸಿಕ್ಕಿದೆ. ಮೇ.10 ರಂದು ಕಸ್ಟಮ್ಸ್ ಕಮಿಷನರ್ ಈ ವಿಮಾನ ನಿಲ್ದಾಣದಲ್ಲಿ ಕಸ್ಟೋಡಿಯನ್ ಹಾಗೂ ಕಸ್ಟಮ್ಸ್ ಕಾರ್ಗೋ ಸೇವೆ ಒದಗಿಸುವವರನ್ನು ನೇಮಕ ಮಾಡಿದ್ದರು.

Mangaluru International Airport
ಬಾಂಬ್ ಬೆದರಿಕೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ!

ಅಂತರರಾಷ್ಟ್ರೀಯ ಕಾರ್ಗೋ ಕಾರ್ಯಾಚರಣೆಗಳ ಪ್ರಾರಂಭ ಕರಾವಳಿ ಕರ್ನಾಟಕ ಮತ್ತು ಕೇರಳ ಮತ್ತು ಒಳನಾಡಿನ ರಫ್ತುದಾರರಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಆಹಾರ, ಯಂತ್ರದ ಭಾಗಗಳು, ಜವಳಿ, ಶೂಗಳು, ಉಷ್ಣವಲಯದ ಮೀನು, ಘನೀಕೃತ ಮತ್ತು ಒಣ ಮೀನು, ಪ್ಲಾಸ್ಟಿಕ್ ಬಣ್ಣ ಸಾಮಗ್ರಿಗಳು ಮತ್ತು ಹಡಗಿನ ಭಾಗಗಳನ್ನು (ಪ್ರೊಪೆಲ್ಲರ್) ರಫ್ತು ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗಳು ತಮ್ಮ ಸಂಪರ್ಕದೊಂದಿಗೆ ದುಬೈ, ದೋಹಾ, ದಮ್ಮಾಮ್, ಕುವೈತ್, ಮಸ್ಕತ್, ಅಬುಧಾಬಿ ಮತ್ತು ಬಹ್ರೇನ್‌ಗಳಿಗೆ ಸರಕುಗಳನ್ನು ಕಳುಹಿಸಲು ರಫ್ತುದಾರರಿಗೆ ಅನುವು ಮಾಡಿಕೊಡುತ್ತದೆ.

ದೇಶೀಯ ಕಾರ್ಗೋ ವಿಭಾಗದಲ್ಲಿ, ಮೇ 1, 2023 ರಿಂದ ತನ್ನ ಕಾರ್ಯಾಚರಣೆಯ ಮೊದಲ 11-ತಿಂಗಳಲ್ಲಿ 3706.02 ಟನ್ ಸರಕುಗಳನ್ನು ನಿರ್ವಹಿಸುವಲ್ಲಿ ವಿಮಾನ ನಿಲ್ದಾಣ ಉತ್ತಮವಾಗಿ ಕಾರ್ಯನಿರ್ವಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com