ದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಯುವತಿ ಪೊಲೀಸರಿಂದ ಪತ್ತೆ; ಲವ್ ಜಿಹಾದ್ ಎಂದು ಫೋಷಕರು, ವಿಹೆಚ್ ಪಿ ಆರೋಪ!

ಮಂಗಳೂರು ಪೊಲೀಸರಿಗೆ ಹೊಸದಾಗಿ ದೂರು ಯುವತಿ ತಂದೆ, ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯುವಕ ಅಪಹರಿಸಿ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದು ಲವ್ ಜಿಹಾದ್ ಪ್ರಕರಣ ಎಂದು ವಿಎಚ್‌ಪಿ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಆಕೆ ಅನ್ಯ ಸಮುದಾಯದ ಯುವಕನೊಂದಿಗೆ ಇರುವುದು ಕಂಡುಬಂದಿದ್ದು, ಇದು 'ಲವ್ ಜಿಹಾದ್' ಎಂದು ಆಕೆಯ ಪೋಷಕರು ಹಾಗೂ ವಿಹೆಚ್ ಪಿ ಆರೋಪಿಸಿರುವ ಘಟನೆ ಕೋಮು ಸೂಕ್ಷ್ಮ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ವರದಿಯಾಗಿದೆ.

ಈ ಸಂಬಂಧ ಮಂಗಳೂರು ಪೊಲೀಸರಿಗೆ ಹೊಸದಾಗಿ ದೂರು ಯುವತಿ ತಂದೆ, ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗಳನ್ನು ಯುವಕ ಅಪಹರಿಸಿ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದು ಲವ್ ಜಿಹಾದ್ ಪ್ರಕರಣ ಎಂದು ವಿಎಚ್‌ಪಿ ಆರೋಪಿಸಿದೆ.

ಸಾಂದರ್ಭಿಕ ಚಿತ್ರ
'ಲವ್ ಜಿಹಾದ್' ಪ್ರಕರಣಗಳನ್ನು ನಿಭಾಯಿಸಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

ಯುವತಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಇತ್ತೀಚೆಗೆ ಕಣ್ಮರೆಯಾದ ನಂತರ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು.ಪೊಲೀಸರು ನಾಪತ್ತೆಯಾದ ಯುವತಿಯನ್ನು ಪತ್ತೆ ಹಚ್ಚಿದಾಗ ಆಕೆ ಮೊಹಮ್ಮದ್ ಅಶ್ಫಾಕ್ ಎಂಬ ಯುವಕನೊಂದಿಗೆ ಇರುವುದು ಕಂಡುಬಂದಿದೆ.

ಪೊಲೀಸರು ಯುವಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆತ ಈಗಾಗಲೇ ಮದುವೆಯಾಗಿದ್ದು, ಕೇರಳದ ಕಾಸರಗೋಡು ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಂಟು ಕ್ರಿಮಿನಲ್ ಪ್ರಕರಣಗಳಿವೆ. ಕರಾವಳಿ ಕರ್ನಾಟಕದಲ್ಲಿ ಲವ್ ಜಿಹಾದ್ ವ್ಯಾಪಕವಾಗುತ್ತಿದ್ದು, ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿಎಚ್‌ಪಿಯ ಹಿರಿಯ ಮುಖಂಡ ಶರಣ್ ಪಂಪ್‌ವೆಲ್ ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ 'ಲವ್ ಜಿಹಾದ್' ಹೆಚ್ಚಳ, ಎಸ್‌ಐಟಿ ರಚಿಸಿ: ಸರ್ಕಾರಕ್ಕೆ ಸಿಟಿ ರವಿ ಆಗ್ರಹ

ಯುವತಿ ಹೇಳಿಕೆಯನ್ನು ದಾಖಲಿಸಿಕೊಂಡು, ಆಕೆ ಬಲವಂತವಾಗಿ ಯುವಕನೊಂದಿಗೆ ಹೋಗಿರುವಳೋ ಅಥವಾ ತಾನಾಗಿಯೇ ಹೋಗಿದಾರೋ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com