
ಬೆಂಗಳೂರು: 30 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಹೊಂದಿದ್ದ ಕೀನ್ಯಾ ಪ್ರಜೆಯನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬೆಂಗಳೂರು ವಿಭಾಗದ ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಕೀನ್ಯಾ ಪ್ರಜೆಯನ್ನು ಬಂಧಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಇಂಡಿಗೋ ವಿಮಾನದ ಮೂಲಕ ಶುಕ್ರವಾರ ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸಿದ ಕೀನ್ಯಾದ ಪ್ರಜೆಯನ್ನು ಡಿಆರ್‌ಐ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.
ಅಧಿಕಾರಿಗಳ ಪ್ರಕಾರ, ಇಂಡಿಗೋ ವಿಮಾನದ ಮೂಲಕ ಶುಕ್ರವಾರ ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸಿದ ಕೀನ್ಯಾದ ಪ್ರಜೆಯನ್ನು ಡಿಆರ್‌ಐ ಅಧಿಕಾರಿಗಳು ವಿಸ್ತಾರವಾದ ಕಣ್ಗಾವಲು ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದರು. ತಪಾಸಣೆ ವೇಳೆ ಪ್ರಯಾಣಿಕಳ ಬ್ಯಾಗೇಜ್ ನಲ್ಲಿ ಬಿಳಿ ಬಣ್ಣದ ಪುಡಿ ಪದಾರ್ಥ ಪತ್ತೆಯಾಗಿದ್ದು 3 ಕೆಜಿಗಳಷ್ಟಿತ್ತು. ಇದು 30 ಕೋಟಿ ರೂಪಾಯಿ ಮೌಲ್ಯದ್ದಾಗದ್ದ ಕೊಕೇನ್ ಎಂದು ತಿಳಿದುಬಂದಿದೆ.
"ಫೀಲ್ಡ್ ಟೆಸ್ಟಿಂಗ್ ಕಿಟ್‌ನ ಪ್ರಕಾರ ಪುಡಿಮಾಡಿದ ವಸ್ತುವು ಕೊಕೇನ್ ಎಂದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಪ್ರಯಾಣಿಕಳನ್ನು ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಂದು ಘಟನೆಯಲ್ಲಿ, ಜುಲೈ 5 ರಂದು ಬ್ಯಾಂಕಾಕ್‌ನಿಂದ ಬರುತ್ತಿದ್ದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಷಿದ್ಧ ವಸ್ತುಗಳನ್ನು ಸಾಗಿಸುತ್ತಿದ್ದ ಶಂಕಿತ ಇಬ್ಬರು ಭಾರತೀಯ ಮಹಿಳಾ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ತಡೆದರು.
ಇನ್ನೊಂದು ಘಟನೆಯಲ್ಲಿ, ಜುಲೈ 5 ರಂದು ಬ್ಯಾಂಕಾಕ್‌ನಿಂದ ಬರುತ್ತಿದ್ದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಷಿದ್ಧ ವಸ್ತುಗಳನ್ನು ಸಾಗಿಸುತ್ತಿದ್ದ ಶಂಕಿತ ಇಬ್ಬರು ಭಾರತೀಯ ಮಹಿಳಾ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ತಡೆದಿದ್ದರು.
3.2 ಕೆ.ಜಿಯಷ್ಟು ಹೈಡ್ರೋನಿಕ್ ಮತ್ತು ಬರುವ ಪದಾರ್ಥ ಪತ್ತೆಯಾಗಿದ್ದು 3 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
Advertisement