ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ: KRS ಜಲಾಶಯ ಇಂದಿನ ನೀರಿನಮಟ್ಟ 110 ಅಡಿ

ಕಳೆದ ನಾಲ್ಕು‌ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್‌ಎಸ್‌‍ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ.
A view of Krishna Raja Sagara(KRS) Dam in Mandya on Wednesday.
ಬುಧವಾರ ಮಂಡ್ಯದ ಕೃಷ್ಣರಾಜಸಾಗರ(ಕೆಆರ್‌ಎಸ್) ಅಣೆಕಟ್ಟಿನ ನೋಟ.TNIE Photo | Udayashankar S
Updated on

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ 36,674 ಕ್ಯುಸೆ‌ಕ್‌ ಒಳಹರಿವು ಇದ್ದು ನೀರಿನ ಮಟ್ಟ 110.60 ಅಡಿಗೆ ಏರಿಕೆಯಾಗಿದೆ.

ಕಳೆದ ನಾಲ್ಕು‌ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್‌ಎಸ್‌‍ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್‌‍ ಜಲಾಶಯದ ನೀರಿನ ಮಟ್ಟವು ಇಂದು 110.60 ಅಡಿಗೆ ತಲುಪಿದೆ. ನಿನ್ನೆ ಕೆಆರ್‌ಎಸ್‌‍ ಜಲಾಶಯದಲ್ಲಿ 29.378 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಇಂದು 32.330 ಟಿಎಂಸಿ ಅಡಿಗೆ ಏರಿಕೆಯಾಗಿದೆ.

ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ಮಟ್ಟ ಸಾಮರ್ಥ್ಯ 124.80 ಅಡಿ ಆಗಿದೆ. ಅಂದರೆ, ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರೂ ಹೊರ ಹರಿವು 2,361 ಕ್ಯೂಸೆಕ್‌ನಷ್ಟಿದೆ. ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌ನಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ಮಂಗಳವಾರ 107.60 ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ ಇಂದು 110.60 ಅಡಿಗೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಹರಿದು ಬಂದಿದೆ. ಹಾರಂಗಿ ಮತ್ತು ಕಬಿನಿಯಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯದ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

A view of Krishna Raja Sagara(KRS) Dam in Mandya on Wednesday.
ಕೆಆರ್ ಎಸ್ ಕಟ್ಟಿದ್ದು ನಾವು, ಆದರೂ ನಾವು ನೀರು ಬಳಸಿಕೊಳ್ಳುವಂತಿಲ್ಲ: ಸಿದ್ದರಾಮಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com