ಐಟಿ ವಲಯ ನೌಕರರು ದಿನಕ್ಕೆ 14 ಗಂಟೆ ದುಡಿಯಬೇಕೆಂಬ ಪ್ರಸ್ತಾಪ: ಒಕ್ಕೂಟದಿಂದ ತೀವ್ರ ವಿರೋಧ

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ 2024' ಎಂಬ ನೂತನ ಮಸೂದೆ ಬಗ್ಗೆ ಸಮಾಲೋಚನೆ ನಡೆಯುತ್ತಿದ್ದು, ಐಟಿ ಮತ್ತು ಐಟಿಇಎಸ್ ವಲಯದಲ್ಲಿ ನೌಕರರ ಕೆಲಸದ ಸಮಯವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ಕೈಗಾರಿಕೆಗಳು ಮತ್ತು ಉದ್ಯಮ ವಲಯಗಳಿಂದ ತೀವ್ರ ಒತ್ತಡ ಬಂದು ಹಿನ್ನಡೆಯಾದ ನಂತರ, ರಾಜ್ಯ ಸರ್ಕಾರವು ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ, ಇದೀಗ ಸರ್ಕಾರ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಕೆಲಸದ ಅವಧಿಯನ್ನು ದಿನಕ್ಕೆ 10 ಗಂಟೆಗಳಿಂದ 14 ಗಂಟೆಗಳವರೆಗೆ ಹೆಚ್ಚಿಸಲು ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ 2024' ಎಂಬ ನೂತನ ಮಸೂದೆ ಬಗ್ಗೆ ಸಮಾಲೋಚನೆ ನಡೆಯುತ್ತಿದ್ದು, ಐಟಿ ಮತ್ತು ಐಟಿಇಎಸ್ ವಲಯದಲ್ಲಿ ನೌಕರರ ಕೆಲಸದ ಸಮಯವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಕಾರ್ಮಿಕ ಇಲಾಖೆಯು ಉದ್ಯಮದ ವಿವಿಧ ಸಂಬಂಧಪಟ್ಟವರೊಂದಿಗೆ ನಡೆಸಿದ ಸಭೆಯಲ್ಲಿ ಮಸೂದೆಯನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಮಂಡಿಸಲಾಯಿತು ಎಂದು KITU ತಿಳಿಸಿದೆ.

ಆದರೆ ಈ ಮಸೂದೆಯು ನೌಕರರ ವೈಯಕ್ತಿಕ ಜೀವನಕ್ಕೆ ಸಮಯ ಮೀಸಲಿಡುವ ಮೂಲಭೂತ ಹಕ್ಕನ್ನು ನಿರಾಕರಿಸುತ್ತದೆ. ಪ್ರಸ್ತುತ ಓವರ್‌ಟೈಮ್ ಸೇರಿದಂತೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಅನುಮತಿಸುವ ಕಾಯಿದೆಯನ್ನು ತೆಗೆದುಹಾಕಲಾಗುವುದು ಮತ್ತು ಇದು ಕಂಪನಿಗಳಿಗೆ ಕೆಲಸದ ಸಮಯವನ್ನು ಅನಿರ್ದಿಷ್ಟವಾಗಿ ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಕೆಐಟಿಯು ಹೇಳಿದೆ.

ಈ ತಿದ್ದುಪಡಿಯು ಕಂಪನಿಗಳಿಗೆ ಪ್ರಸ್ತುತ ಮೂರು-ಶಿಫ್ಟ್ ವ್ಯವಸ್ಥೆಗೆ ಬದಲಾಗಿ ಎರಡು-ಶಿಫ್ಟ್ ವ್ಯವಸ್ಥೆಯಡಿ ಕೆಲಸ ಮಾಡಲು ಅನುಮತಿ ನೀಡುತ್ತದೆ. ಇದರೊಂದಿಗೆ, ಮೂರನೇ ಒಂದು ಭಾಗದಷ್ಟು ಕಾರ್ಮಿಕರು ತಮ್ಮ ಉದ್ಯೋಗದಿಂದ ಹೊರಹಾಕಲ್ಪಡುತ್ತಾರೆ ಎಂದು ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮಸೂದೆಯನ್ನು ವಿರೋಧಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಐಟಿ ಒಕ್ಕೂಟಗಳು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (KCCI) ವರದಿಯನ್ನು ಎತ್ತಿ ತೋರಿಸಿದೆ, ಶೇಕಡಾ 45ರಷ್ಟು ಐಟಿ ಉದ್ಯೋಗಿಗಳು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೇಕಡಾ 55ರಷ್ಟು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಹೀಗಿರುವಾಗ 14 ಗಂಟೆ ಕೆಲಸದ ಅವಧಿ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಸಾಂಕೇತಿಕ ಚಿತ್ರ
14 hour workday: ಕರ್ನಾಟಕ ಸರ್ಕಾರದ ಪ್ರಸ್ತಾಪಕ್ಕೆ IT ಒಕ್ಕೂಟ ವಿರೋಧ!

ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ (ಡಬ್ಲ್ಯುಎಚ್‌ಒ) ವರದಿ ಪ್ರಕಾರ, ಕೆಲಸದ ಸಮಯ ಹೆಚ್ಚಿಸುವುದರಿಂದ ಪಾರ್ಶ್ವವಾಯು ಮತ್ತು ರಕ್ತಕೊರತೆಯ ಹೃದ್ರೋಗದಿಂದ ಸಾಯುವ 17% ಹೆಚ್ಚಿನ ಅಪಾಯವು 35% ನಷ್ಟು ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.

ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು ದೇಶದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಅನುಗುಣವಾಗಿ ಈ ಕ್ರಮವು ತೋರುತ್ತಿದೆ.ನಾರಾಯಣ ಮೂರ್ತಿಯವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com