'ಸಾವಿರ ಹಾಡುಗಳ ಸರದಾರ’ ಖ್ಯಾತ ಜಾನಪದ ಹಾಡುಗಾರ, ಸಾಹಿತಿ ಆಲೂರು ನಾಗಪ್ಪ ನಿಧನ

ತಾವು ರಚಿಸಿದ, ಹಾಡಿದ ಯಾವ ಹಾಡುಗಳ ಹಕ್ಕನ್ನೂ ಬೇರೆಯವರಿಗೆ ಕೊಟ್ಟಿಲ್ಲ. ದೊಡ್ಡ ದೊಡ್ಡ ಕಂಪನಿಗಳು ಬಂದು ಮನವಿ ಮಾಡಿದರೂ ನನ್ನ ಶಾರದೆಯನ್ನು ಯಾರಿಗೂ ಕೊಡುವುದಿಲ್ಲ ಎಂದು ಹೇಳುತ್ತಿದ್ದರಂತೆ. ಈ ಬಗ್ಗೆ ಅವರ ಮಗಳು ದಿವ್ಯ ಪತ್ರಿಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಲೂರು ನಾಗಪ್ಪ
ಆಲೂರು ನಾಗಪ್ಪ
Updated on

ಬೆಂಗಳೂರು: ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ(74) ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ ಅನಾರೋಗ್ಯದಿಂದಾಗಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಹುಟ್ಟೂರು ಬಿಡದಿಯಲ್ಲಿ ಆಲೂರು ನಾಗಪ್ಪ ಅಂತ್ಯಕ್ರಿಯೆ ನಡೆಯಲಿದೆ. ನಿಂಗವ್ವ ಬೆಂಗಳೂರಿಗೆ ಬಂದು ನೋಡವ್ವ ಹಾಡಿನ ಖ್ಯಾತಿಯ ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ, ತತ್ವಪದಗಳ ಹರಿಕಾರ. ಇವರು ರಚಿಸಿ, ಹಾಡಿರುವ ಹಾಡುಗಳು ಎವರ್‌ಗ್ರೀನ್‌. ಇವರಿಗೆ ಜಾನಪದ ಸಂಗೀತದ ಮೇಲಿದ್ದ ಪ್ರೀತಿ ಎಂತಹದ್ದು ಎಂದರೆ ಇವರು ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಿಸೈನ್‌ ಮಾಡಿ ತಮ್ಮ ಆಸಕ್ತಿಗೆ ಒತ್ತು ನೀಡಿದ್ದರು. ಆಲೂರು ನಾಗಪ್ಪ, ಗಾಯಕರಾಗಿ ಮಾತ್ರವಲ್ಲ, ಕನ್ನಡಪರ ಹೋರಾಟಗಾರರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಮಗಳು ದಿವ್ಯ ಅಲೂರು ಕೂಡ ನಿರೂಪಕಿ, ಗಾಯಕಿಯಾಗಿದ್ದಾರೆ.

ಆಲೂರು ನಾಗಪ್ಪ ಅವರು ಯುವಜನತೆ, ಮಹಿಳೆಯರು, ನಾಡುನುಡಿಗೆ ಸಂಬಂಧಿಸಿದ ಎಲ್ಲಾ ರೀತಿಯ ಹಾಡುಗಳನ್ನೂ ಬರೆದಿದ್ದಾರೆ. ಭಕ್ತಿ ಗೀತೆಗಳನ್ನೂ ರಚಿಸಿದ್ದಾರೆ. ವಿಶೇಷವೆಂದರೆ ಇವರು ತಾವು ರಚಿಸಿದ, ಹಾಡಿದ ಯಾವ ಹಾಡುಗಳ ಹಕ್ಕನ್ನೂ ಬೇರೆಯವರಿಗೆ ಕೊಟ್ಟಿಲ್ಲ. ದೊಡ್ಡ ದೊಡ್ಡ ಕಂಪನಿಗಳು ಬಂದು ಮನವಿ ಮಾಡಿದರೂ ಯಾರಿಗೂ ಕೊಡುವುದಿಲ್ಲ ಎಂದು ಹೇಳುತ್ತಿದ್ದರಂತೆ. ಈ ಬಗ್ಗೆ ಅವರ ಮಗಳು ದಿವ್ಯ ಪತ್ರಿಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಿಕೇರಿ ಹುಡುಗಿಯೊಬ್ಬಳು, ನೀನು ಮದುಕಿಯಂಗೆ ಮುಸುಕಾಕೊಂಡು, ಬೆಂಗಳೂರ್‌ ಹುಡ್ಗ ಬಂದವನಂತ ಬಗ್ಗಿ ಬಗ್ಗಿ ನೋಡ್ತೀಯಲ್ಲೇ, ತವರಿಂದ ಕಳಿಸಿ ನನ್ನ ಮರಿಬೇಡ ಅಣ್ಣಯ್ಯ, ಅಳಬ್ಯಾಡ ತಂಗಿ ಅಳಬ್ಯಾಡ, ಹೆತ್ತ ತಾಯಿ ಋಣವ ತೀರಿಸೋ, ಎಚ್ಚರಾಗು ಕನ್ನಡಿಗ ಇವು ಆಲೂರು ನಾಗಪ್ಪ ಅವರ ಪ್ರಸಿದ್ಧ ಹಾಡುಗಳಾಗಿವೆ.

ಆಲೂರು ನಾಗಪ್ಪ
ಕರಾವಳಿ ಭಾಗದ ಜನಪ್ರಿಯ ವೈದ್ಯ, ಗಾಯಕ ಡಾ ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com