850 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಅಧಿಕಾರಿ ಪ್ರಶಾಂತ್ ಬಾಬುಗೆ ವರ್ಗ: ಹೇಳಿಕೆ ದಾಖಲು ವೇಳೆ ಬಹಿರಂಗ!

ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಅವರು ಎರಡು ಆಪಲ್ ಮ್ಯಾಕ್ ಬುಕ್ಸ್ ನ ವಿಷಯಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದು ಅದನ್ನು ಶ್ರೀಕೃಷ್ಣನಿಂದ ವಶಪಡಿಸಿಕೊಂಡ ನಂತರ ಮುಚ್ಚಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣದಲ್ಲಿ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಆಡುಗೋಡಿಯಲ್ಲಿರುವ ಕೇಂದ್ರ ಅಪರಾಧ ವಿಭಾಗದ (CCB) ತಾಂತ್ರಿಕ ಬೆಂಬಲ ಕೇಂದ್ರದಲ್ಲಿ (TSC) 2020 ರ ನವೆಂಬರ್‌ನಲ್ಲಿ ಮುಖ್ಯಸ್ಥರಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಡಿಎಂ ಅವರು ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಂದ ವಡಿಸಿಕೊಂಡ 850 ಕೋಟಿ ರೂಪಾಯಿ ಮೌಲ್ಯದ 4,000 ಬಿಟ್‌ಕಾಯಿನ್‌ಗಳನ್ನು ನ್ಯಾಯಾಲಯದ ಅನುಮತಿಯಿಲ್ಲದೆ ವರ್ಗಾಯಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಅವರು ಎರಡು ಆಪಲ್ ಮ್ಯಾಕ್ ಬುಕ್ಸ್ ನ ವಿಷಯಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದು ಅದನ್ನು ಶ್ರೀಕೃಷ್ಣನಿಂದ ವಶಪಡಿಸಿಕೊಂಡ ನಂತರ ಮುಚ್ಚಲಾಗಿತ್ತು.

ವಿಚಾರಣೆಯ ಪ್ರಗತಿ: 2023ರಲ್ಲಿ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ಡಿಪಾರ್ಟ್‌ಮೆಂಟ್‌ (CID) ದಾಖಲಿಸಿರುವ ಪ್ರಕರಣವನ್ನು ತಿಳಿದುಕೊಂಡ ಪ್ರಶಾಂತ್ ಬಾಬು ತಮ್ಮ ವೈಯಕ್ತಿಕ ಕಂಪ್ಯೂಟರ್‌ಗೆ ವಿಷಯಗಳನ್ನು ವರ್ಗಾಯಿಸಿದ ಬಳಿಕ ತನ್ನ ಪರ್ಸನಲ್‌ ಕಂಪ್ಯೂಟರ್‌ನಿಂದ ಎಲ್ಲ ವಿಷಯಗಳನ್ನು ಅಳಿಸಿ ಹಾಕಿದ್ದ ಎಂಬ ಅಂಶವೂ ಬಹಿರಂಗವಾಗಿದೆ. ಡಿಕೋಡಿಂಗ್ ಸಾಫ್ಟ್‌ವೇರ್ ಸೇರಿದಂತೆ ವಶಪಡಿಸಿಕೊಂಡ ಗ್ಯಾಜೆಟ್‌ಗಳಿಂದ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಇವುಗಳನ್ನು ಬಳಸಲಾಗಿದೆ ಎಂದು ಸಿಐಡಿ ಬಾಬು ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಯಾಗಿ ಹೈಕೋರ್ಟ್‌ನಲ್ಲಿ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆ.

4 ಸಾವಿರ ಬಿಟ್ ಕಾಯಿನ್ ಗಳು: ಬಾಬು ಅವರ ಜಾಮೀನು ಅರ್ಜಿಗೆ ಸಲ್ಲಿಸಿದ ಆಕ್ಷೇಪಣೆಗಳಲ್ಲಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಪ್ರಸನ್ನ ಕುಮಾರ್ ಪಿ, ಖಾಸಗಿ ಸೈಬರ್ ತಜ್ಞ ಬಿಎಸ್ ಗಗನ್ ಜೈನ್ ಅವರ ಹೇಳಿಕೆಯನ್ನು ಮಾರ್ಚ್ 30, 2024 ರಂದು ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂದು ಹೇಳಿದರು. ಬಾಬು ತನ್ನ ವೈಯಕ್ತಿಕ ಕಂಪ್ಯೂಟರ್‌ಗೆ ವರ್ಗಾಯಿಸಿದಾಗ ಗ್ಯಾಜೆಟ್‌ಗಳು ಸುಮಾರು 4,000 ಬಿಟ್‌ಕಾಯಿನ್‌ಗಳನ್ನು ಒಳಗೊಂಡಿದ್ದವು.

ನವೆಂಬರ್ 2020 ರಲ್ಲಿ ಒಂದು ಬಿಟ್‌ಕಾಯಿನ್‌ನ ಬೆಲೆ ಸುಮಾರು 29,000 ಡಾಲರ್ ಆಗಿತ್ತು ಅಂದರೆ ಭಾರತದ ರೂಪಾಯಿಗಳಲ್ಲಿ ಅಂದಾಜು 21.20 ಲಕ್ಷ ರೂಪಾಯಿಗಳು. ಅಂದರೆ ಪ್ರಶಾಂತ್ ಬಾಬು ನಿರ್ವಹಿಸುತ್ತಿದ್ದ ಬಿಟ್‌ಕಾಯಿನ್‌ಗಳ ಒಟ್ಟು ಮೌಲ್ಯ ಸುಮಾರು 850 ಕೋಟಿ ರೂಪಾಯಿ ಎಂದು ಎಸ್ ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಮೇ 21, 2024 ರಂದು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (C-DAC) ನಿಂದ ಪಡೆದ ಸೈಬರ್ ಫೋರೆನ್ಸಿಕ್ ವಿಶ್ಲೇಷಣಾ ವರದಿಯು ಗಗನ್ ಜೈನ್ ಹೇಳಿಕೆಗೆ ಪೂರಕವಾಗಿದೆ ಎಂದು ಆಕ್ಷೇಪಣೆಗಳು ಬಹಿರಂಗಪಡಿಸಿದವು, ಇದು ಪ್ರಕರಣದಲ್ಲಿ ವಶಪಡಿಸಿಕೊಂಡ ಗ್ಯಾಜೆಟ್‌ಗಳನ್ನು ವಿಶ್ಲೇಷಿಸಿದೆ. 2020 ರಲ್ಲಿ ಶ್ರೀಕಿಯಿಂದ ವಶಪಡಿಸಿಕೊಂಡ ಮ್ಯಾಕ್‌ಬುಕ್‌ಗಳ ವಿಷಯಗಳನ್ನು ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಅವರ ಕಂಪ್ಯೂಟರ್ ಗೆ ವರ್ಗಾಯಿಸಲಾಗಿದೆ ಎಂದು ವರದಿ ಹೇಳುತ್ತದೆ. ಅವರು ಇತರ ಆರೋಪಿಗಳೊಂದಿಗೆ ಸಹಕರಿಸಿ ಕ್ರಿಪ್ಟೋ ಹಾರ್ಡ್‌ವೇರ್ ವ್ಯಾಲೆಟ್, ಎಲೆಕ್ಟ್ರಮ್ ವ್ಯಾಲೆಟ್ ಅಪ್ಲಿಕೇಶನ್‌ಗಳು ಮತ್ತು ಡಾಟಾ ಅಳಿಸಿಹಾಕುವ ಅಪ್ಲಿಕೇಶನ್‌ಗಳನ್ನು ಇನ್ ಸ್ಟಾಲ್ ಮಾಡಿದ್ದರು.

ಸಾಂದರ್ಭಿಕ ಚಿತ್ರ
ಬಿಟ್ ಕಾಯಿನ್ ಹಗರಣ: ಪ್ರಮುಖ ಆರೋಪಿ ಶ್ರೀಕಿ, ಸಹಚರರ ವಿರುದ್ಧ ಕೋಕಾ ಕಾಯ್ದೆ

2023 ರಲ್ಲಿ ಸಿಐಡಿ ಕೇಸು ದಾಖಲಿಸಿಕೊಂಡ ನಂತರ ಪ್ರಶಾಂತ್ ಬಾಬು ಗ್ಯಾಜೆಟ್‌ಗಳ ಡೇಟಾವನ್ನು ಡೌನ್‌ಲೋಡ್ ಮಾಡಲು ಬಳಸಿದ ತನ್ನ ವೈಯಕ್ತಿಕ ಕಂಪ್ಯೂಟರ್‌ನಲ್ಲಿನ ಎಲ್ಲಾ ವಿಷಯಗಳನ್ನು ಅಳಿಸಿಹಾಕಿದ್ದಾರೆ ಎಂಬುದು C-DAC ವರದಿಯಿಂದ ಸ್ಪಷ್ಟವಾಗಿದೆ ಎಂದು ಸಿಐಡಿ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಗಗನ್ ಜೈನ್ ನೀಡಿದ ಹೇಳಿಕೆಯನ್ನು ತಳ್ಳಿಹಾಕಲಾಗುವುದಿಲ್ಲ ಅಥವಾ ಲಘುವಾಗಿ ನಿರ್ಲಕ್ಷಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂಜಿ ಉಮಾ ಅವರು ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಅವರ ಜಾಮೀನು ಅರ್ಜಿಯ ಆಕ್ಷೇಪಣೆಗಳನ್ನು ಆಲಿಸುವ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಡೇಟಾ ವೈಪಿಂಗ್ ಟೂಲ್ ನ್ನು ಇನ್ಸ್ಟಾಲ್ ಮಾಡಲಾಗಿದ್ದು, ಕಂಪ್ಯೂಟರ್‌ನಿಂದ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಅಳಿಸಲು ಬಳಸಲಾಗುತ್ತಿದೆ ಎಂದು ಕಂಡುಬಂದಿದೆ. ವೈಪಿಂಗ್ ತಂತ್ರವು ಫೋರೆನ್ಸಿಕ್ ಉಪಕರಣಗಳು ಅಳಿಸಿದ ವಿಷಯಗಳನ್ನು ಜಂಕ್‌ ಫೈಲ್ ನೊಂದಿಗೆ ತಿದ್ದಿ ಬರೆಯುವ ಕಾರ್ಯವಿಧಾನದಿಂದ ಮರುಪಡೆಯುವುದನ್ನು ತಡೆಯುತ್ತದೆ. ಅರ್ಜಿಯ ಡೇಟಾವು ಬಾಬು ಎಂಬ ಬಳಕೆದಾರರ ಹೆಸರಿನಲ್ಲಿದೆ ಎಂದು ನ್ಯಾಯಾಧೀಶರು ಗಮನಿಸಿದರು.

ಡಿಲೀಟೆಡ್ ಡೈರೆಕ್ಟರಿ ವಿಭಾಗದಲ್ಲಿ 16 ಫೈಲ್‌ಗಳನ್ನು ವರದಿ ಉಲ್ಲೇಖಿಸಿದೆ, ಅದರ ಮೂಲವು ಬಾಬು ಅವರ ಬಳಕೆದಾರ ಹೆಸರನ್ನು ಕಂಡುಹಿಡಿಯುತ್ತದೆ ಎಂದು ನ್ಯಾಯಮೂರ್ತಿ ಉಮಾ ಹೇಳಿದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ: ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಪ್ರಶಾಂತ್ ಬಾಬು ಸೈಬರ್ ಸೇಫ್ ಕಂಪನಿಯ ಗಗನ್ ಜೈನ್ ಮತ್ತು ಜಿಸಿಐಡಿ ಕಂಪನಿಯ ಸಂತೋಷ್ ಕುಮಾರ್ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಕಳೆದ ಜನವರಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ವಂಚನೆ ಆರೋಪದ ಮೇಲೆ ದೂರು ಸಲ್ಲಿಸಿದ್ದರು. ಗಗನ್ ಜೈನ್ ಮತ್ತು ಸಂತೋಷ್ ಕುಮಾರ್ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಗೆ ಸಹಕರಿಸಿದ ಖಾಸಗಿ ತಾಂತ್ರಿಕ ತಜ್ಞರಾಗಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾದ ನಂತರ ನ್ಯಾಯಾಧೀಶರ ಮುಂದೆ ಗಗನ್ ಜೈನ್ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ ಆತನ ಮೂಲಕ ಈ ಭಯಾನಕ ಸತ್ಯ ಹೊರಬಿದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com