ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೋರ್ ವೆಲ್ ಕೊರೆಸಲು ನಕಲಿ ದಾಖಲೆ ನೀಡಿ BWSSB ಅನುಮೋದನೆ ಪಡೆದ ಬಿಲ್ಡರ್!

ಆಂಧ್ರಪ್ರದೇಶ ಮೂಲದ ಬಿಲ್ಡರ್ ಒಬ್ಬರು ಕೆಆರ್ ಪುರಂನಲ್ಲಿ ಬೋರ್ ವೆಲ್ ಕೊರೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ (KGWA) ಗೆ ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.
Published on

ಬೆಂಗಳೂರು: ಆಂಧ್ರಪ್ರದೇಶ ಮೂಲದ ಬಿಲ್ಡರ್ ಒಬ್ಬರು ಕೆಆರ್ ಪುರಂನಲ್ಲಿ ಬೋರ್ ವೆಲ್ ಕೊರೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ (KGWA) ಗೆ ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕ ಅಂತರ್ಜಲ ಪ್ರಾಧಿಕಾರವು KR ಪುರಂ ಸಮೀಪದ ಸೀಗೆಹಳ್ಳಿಯ ಸಾಯಿ ಸೆರಿನಿಟಿ ಲೇಔಟ್‌ನಲ್ಲಿನ ಸರ್ವೆ ನಂ 4/2 ನಲ್ಲಿ ಗೊಲ್ಲ ವೇಣು ಗೋಪಾಲ್‌ಗೆ ಬೋರ್‌ವೆಲ್ ಕೊರೆಯಲು ಅನುಮತಿಸಲು BWSSB ನಿಂದ ಶಿಫಾರಸು ಪತ್ರವನ್ನು ಸ್ವೀಕರಿಸಿದೆ. ಆದರೆ, ಕೆಲ ವಾರಗಳ ಹಿಂದೆ ಇದೇ ಬಡಾವಣೆಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ಅನ್ವಿತಾ ಕನ್‌ಸ್ಟ್ರಕ್ಷನ್ಸ್ ಹೆಸರಿನಲ್ಲಿ ಆಸ್ತಿ ನೋಂದಣಿಯಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿದ ಮಾಹಿತಿಗಳಿಂದ ಬಹಿರಂಗವಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಬೋರ್‌ವೆಲ್ ಕೊರೆಯಲು ಅನುಮತಿ ಪಡೆಯಲು ಬಿಲ್ಡರ್ ಗೊಲ್ಲ ವೇಣು ಗೋಪಾಲ್ ಅವರ ಆಸ್ತಿಯ BBMP ತೆರಿಗೆ ರಶೀದಿ ಮತ್ತು ಮಾರಾಟದ ದಾಖಲೆಗಳನ್ನು HRBR ಲೇಔಟ್ (ಬೆಂಗಳೂರು ಪೂರ್ವ-2) ನಲ್ಲಿರುವ BWSSB ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಸಲ್ಲಿಸಿದ್ದಾರೆ ಎಂದು ದಾಖಲೆಗಳು ಬಹಿರಂಗಪಡಿಸಿವೆ.

ಸಾಂದರ್ಭಿಕ ಚಿತ್ರ
ರಾಮಕೃಷ್ಣನಗರದಲ್ಲಿ ಯಾವುದೇ ಪ್ರವಾಹ ಆಗಿಲ್ಲ ಎಂದ ಬಿಬಿಎಂಪಿ ಮುಖ್ಯ ಎಂಜಿನಿಯರ್; ನಿವಾಸಿಗಳ ಆಕ್ರೋಶ

ಗೊಲ್ಲ ವೇಣು ಗೋಪಾಲ್ ಜುಲೈ 2023 ರಲ್ಲಿ ಆಸ್ತಿಯನ್ನು ಅದರ ಪಾಲುದಾರರಾದ ಅನ್ವಿತಾ ಕನ್ಸ್ಟ್ರಕ್ಷನ್ಸ್‌ಗೆ ಮಾರಾಟ ಮಾಡಿದ್ದಾರೆ, ಸುಮಾರು 20 ಫ್ಲಾಟ್‌ಗಳು 6.5 ಗುಂಟಾ ಅಳತೆಯ ಭೂಮಿಯಲ್ಲಿ ಬರುತ್ತವೆ.ಅನುಮತಿ ಪಡೆಯಲು ಬಿಡಬ್ಲ್ಯುಎಸ್‌ಎಸ್‌ಬಿಗೆ ಬಿಲ್ಡರ್ ಹಳೇಯ ದಾಖಲೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. BWSSB ದಾಖಲೆಗಳಲ್ಲಿ ನಮೂದಿಸಿರುವ ಬಿಲ್ಡರ್ ಸಂಖ್ಯೆಗಳನ್ನು ಸಂಪರ್ಕಿಸಿದಾಗ, ವ್ಯಕ್ತಿ ಅಲ್ಲಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲಾಗುವುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅನ್ವಿತಾ ಕನ್‌ಸ್ಟ್ರಕ್ಷನ್ಸ್‌ನ ಮಾಲೀಕ ಎಂದು ಹೇಳಲಾದ ರಾಜೇಶ್ ಎನ್ ಮಾತನಾಡಿ, ಸಂಸ್ಥೆಯು ಬೋರ್‌ವೆಲ್ ಕೊರೆಯಲು BWSSB ಅನ್ನು ಸಂಪರ್ಕಿಸಿತ್ತು. ಅದಕ್ಕೆ ಅನುಮತಿ ಪಡೆಯಲು ಒದಗಿಸಿದ ದಾಖಲೆಗಳ ಬಗ್ಗೆ ತಿಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅನುಮತಿಗಾಗಿ ಯಾವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂಬುದು ತಿಳಿದಿಲ್ಲ, ಅದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಬಿಡಬ್ಲ್ಯುಎಸ್‌ಎಸ್‌ಬಿ ಕಾರ್ಯಪಾಲಕ ಎಂಜಿನಿಯರ್ ಚನ್ನಬಸವಯ್ಯ, ಬಿಲ್ಡರ್ ಯಾವುದೇ ನಕಲಿ ದಾಖಲೆಗಳನ್ನು ನೀಡಿದ್ದರೆ, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com