ಜೈಲ್ ಜಾಮರ್ ಹಿನ್ನೆಲೆ, ಬೆಂಗಳೂರು ಕೇಂದ್ರ ಕಾರಾಗೃಹ ಬಳಿಯ ನಿವಾಸಿಗಳಿಗೆ ಮೊಬೈಲ್ ಸಿಗ್ನಲ್‌ ಸಮಸ್ಯೆ!

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಬಳಿ ವಾಸಿಸುತ್ತಿರುವ 20 ಸಾವಿರಕ್ಕೂ ಹೆಚ್ಚು ಜನರು ಕಾರಾಗೃಹದಲ್ಲಿನ ‘ಟವರ್-ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್’ (ಟಿ-ಎಚ್‌ಸಿಬಿಎಸ್) ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಕೇಂದ್ರ ಕಾರಾಗೃಹ
ಬೆಂಗಳೂರು ಕೇಂದ್ರ ಕಾರಾಗೃಹ
Updated on

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಬಳಿ ವಾಸಿಸುತ್ತಿರುವ 20 ಸಾವಿರಕ್ಕೂ ಹೆಚ್ಚು ಜನರು ಕಾರಾಗೃಹದಲ್ಲಿನ ‘ಟವರ್-ಹಾರ್ಮೋನಿಯಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್’ (ಟಿ-ಎಚ್‌ಸಿಬಿಎಸ್) ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನವರಿಯಲ್ಲಿ ಜೈಲಿನಲ್ಲಿ ಹೊಸ ಹೈ ಫ್ರೀಕ್ವೆನ್ಸಿ ಜಾಮರ್‌ಗಳನ್ನು ಅಳವಡಿಸಿದ ನಂತರ ತಮ್ಮ ಫೋನ್ ಗಳಲ್ಲಿ ಸಿಗ್ನಲ್ ಸಿಗುತ್ತಿಲ್ಲ. ಒಟಿಪಿಗಳನ್ನು ಸ್ವೀಕರಿಸಲು, ವಹಿವಾಟುಗಳನ್ನು ಮಾಡಲು ಮತ್ತು ತುರ್ತು ಕರೆಗಳನ್ನು ಮಾಡಲು ಅಥವಾ ಇ-ಕಾಮರ್ಸ್ ಏಜೆಂಟ್‌ಗಳಿಗೆ ತಮ್ಮ ಮನೆಗಳಿಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ.

ಹಳೆಯ ಜಾಮರ್‌ಗಳಿಗೆ (100 ಮೀಟರ್) ಹೋಲಿಸಿದರೆ ಹೊಸ ಜಾಮರ್‌ಗಳು ಜೈಲಿನ ಸುತ್ತಲೂ ಸುಮಾರು ಒಂದು ಕಿ.ಮೀ. ದೂರದವರೆಗೂ ತಲುಪುತ್ತಿದ್ದು, ಸದರ್ನ್ ವಿಂಡ್ಸ್ ಲೇಔಟ್ ನಿವಾಸಿಗಳು ಶನಿವಾರ ಕಾರಾಗೃಹದ ಮುಂದೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಕಾರಾಗೃಹಗಳ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇಲ್ಲಿನ ನಿವಾಸಿಗಳು ಹಲವು ಬಾರಿ ಜೈಲು ಅಧಿಕಾರಿಗಳಿಗೆ ದೂರು ನೀಡಿದರೂ ಸಿಗ್ನಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆಯು ದೂರಸಂಪರ್ಕ ಇಲಾಖೆಗೆ (DoT) ಪರಿಹಾರ ಸೂಚಿಸಲು ಕೇಳಿದೆ.

ಬೆಂಗಳೂರು ಕೇಂದ್ರ ಕಾರಾಗೃಹ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ರೌಡಿಗಳ ನಿವಾಸ ಮೇಲೆ ಸಿಸಿಬಿ ದಾಳಿ; ಹಲವು ವಸ್ತುಗಳು ವಶ

ಟಿಎನ್ಐಇ ಬಂದಿರುವ ಇಮೇಲ್ ಪ್ರತಿಕ್ರಿಯೆ ಪ್ರಕಾರ, BSNL, Vodafone ಮತ್ತು Reliance Jio Infocomm ನಂತಹ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ DOT ಮೇ 6 ರಂದು ಪ್ರದೇಶವನ್ನು ಪರಿಶೀಲನೆ ನಡೆಸಿದೆ.

40 ಎಕರೆ ಜೈಲಿನೊಳಗಿನ ಮೂರು ಟವರ್‌ಗಳು 500 ಮೀಟರ್ ವ್ಯಾಪ್ತಿ ಹೊಂದಿರುವುದು ಕಂಡುಬಂದಿದೆ. ಜೈಲಿನ ಹೊರಗೆ ಕ್ರಮವಾಗಿ ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳಿಂದ 700, 400 ಮತ್ತು 700 ಮೀಟರ್ ವ್ಯಾಪ್ತಿ ಇರುವುದು ತಿಳಿದುಬಂದಿದೆ. ‘ನಮ್ಮ ಫೋನ್‌ಗಳು ಡಮ್ಮಿ ಸಾಧನಗಳಾಗಿವೆ’ ವಸತಿ ಪ್ರದೇಶಗಳಲ್ಲಿ ಸಿಗ್ನಲ್ ಸಮಸ್ಯೆಯನ್ನು ತಗ್ಗಿಸಲು ತಾತ್ಕಾಲಿಕ ಕ್ರಿಯಾ ಯೋಜನೆಯನ್ನು ಒದಗಿಸುವಂತೆ TSP ಗಳನ್ನು DoT ಕೇಳಿದೆ.

“ಉತ್ತಮ ನೆಟ್‌ವರ್ಕ್‌ಗಾಗಿ ನಾವು ನಮ್ಮ ಸಿಮ್ ಕಾರ್ಡ್‌ಗಳನ್ನು ಬದಲಾಯಿಸಲು ಪ್ರಯತ್ನಿಸಿದ್ದೇವೆ, ಆದರೆ ಅದು ವ್ಯರ್ಥವಾಯಿತು. ಇದರಿಂದಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ಆನ್‌ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಶಾಲಾ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ ಅಥವಾ ಯಾವುದೇ ತುರ್ತು ಪರಿಸ್ಥಿತಿಗಳ ಬಗ್ಗೆ ಆಲರ್ಟ್ ಆಗಲು ಸಾಧ್ಯವಾಗುತ್ತಿಲ್ಲ. ನಮ್ಮ ದೂರುಗಳಿಗೆ ಯಾರು ಸ್ಪಂದಿಸುತ್ತಿಲ್ಲ ಎಂದು ನಿವಾಸಿ ನಿತ್ಯಾನಂದನ್ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಜಾಮರ್‌ ತೆಗೆಯುವಂತೆ ನಿವಾಸಿಗಳು ಒತ್ತಾಯಿಸುತ್ತಿಲ್ಲ. ಜಾಮರ್‌ಗಳ ಆವರ್ತನವನ್ನು ಕಡಿಮೆ ಮಾಡಬೇಕೆಂಬುದು ತಮ್ಮ ಒತ್ತಾಯವಾಗಿದೆ. ಜಾಮರ್‌ಗಳಿಂದಾಗಿ ಪೊಲೀಸ್ ಅಧಿಕಾರಿಗಳು ಕೂಡ ಪರದಾಡುತ್ತಿದ್ದಾರೆ ಎಂದು ಮತ್ತೊಬ್ಬ ನಿವಾಸಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com